ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15 ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಸಿದ್ದತೆ ಭರ್ಜರಿಯಾಗಿ ನಡೆಯುತ್ತಿದೆ. ವಿವಿಧ ಫ್ರಾಂಚೈಸಿಗಳು ಉತ್ತಮ ಆಟಗಾರರನ್ನು ತಮ್ಮ ತಂಡದಕ್ಕೇ ಖರೀದಿ ಮಾಡಲು ಉತ್ಸುಕರಾಗಿದ್ದಾವೆ. ಜೊತೆಗೆ ಈ ಹಿಂದೆಯಿದ್ದ ಅತ್ಯುತ್ತಮ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಕೋಟಿ ಕೋಟಿ ಹಣ ಹೂಡಿಕೆ ಮಾಡುತ್ತಿವೆ. ಇದಕ್ಕೆ ಇತ್ತೀಚಿಗೆಯಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಒಂದಷ್ಟು ನಿಯಮಗಳನ್ನು ಹೊರ ತಂದಿದೆ. ಅವುಗಳೆಂದರೆ ಯಾವುದೇ ಫ್ರಾಂಚೈಸಿ ತಂಡ ಕನಿಷ್ಠ ಅಂದರೆ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ. ಅವರಲ್ಲಿ ಇಬ್ಬರು ಆಟಗಾರರು ವಿದೇಶಿಯವರಾಗಿರಬಹುದು.

ಇಲ್ಲ ಒಬ್ಬರು ವಿದೇಶಿಯವರಾಗಿದ್ದು ಉಳಿದ ಮೂವರು ಸ್ವದೇಶಿ ಆಟಗಾರರಾಗಿರಬಹುದು. ಇನ್ನು ಈ ಒಟ್ಟು ನಾಲ್ಕು ಅಟಗಾರರ ಮೇಲೆ ಗಲಿಷ್ಠ ಅಂದರೆ ನಲವತ್ತೆರಡು ಕೋಟಿ ಮಾತ್ರ ಹೂಡಿಕೆ ಮಾಡಬಹುದಾಗಿರುತ್ತದೆ. ಮೂರು ಆಟಗಾರರಾದರೆ ಮೂವತ್ಮೂರು ಕೋಟಿ, ಇಬ್ಬರು ಆಟಗಾರರಿಗೆ ಇಪ್ಪತ್ತೆರಡು ಕೋಟಿ, ಒಬ್ಬ ಆಟಗಾರರನ್ನು ಉಳಿಸಿಕೊಳ್ಳಲು ಅವರು ಅಂತರಾಷ್ಟ್ರೀಯ ಆಟಗಾರರಾಗಿದ್ದರೆ ಆ ಆಟಗಾರನಿಗೆ ಬರೋಬ್ಬರಿ ಹದಿನಾಲ್ಕು ಕೋಟಿ ಸಂಭಾವನೆ ನೀಡಬಹುದಾಗಿರುತ್ತದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15 ನೇ ಆವೃತ್ತಿಯ ವಿಶೇಷತೆ ಅಂದರೆ ಹತ್ತು ಫ್ರಾಂಚೈಸಿ ತಂಡಗಳು ಇರಲಿವೆಯಂತೆ.



ಇಲ್ಲಿವರೆಗೂ ಎಂಟು ಫ್ರಾಂಚೈಸಿ ತಂಡಗಳು ಐಪಿಎಲ್ ಕ್ರಿಕೆಟ್ ನಲ್ಲಿ ಭಾಗವಹಿಸುತ್ತಿದ್ದವು. ಈ ಭಾರಿ ಐಪಿಎಲ್ ಕ್ರಿಕೆಟ್ ಗೆ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರ ಹೊಸ ಫ್ರಾಂಚೈಸಿ ತಂಡ ಮತ್ತು ಲಕ್ನೋ ಫ್ರಾಂಚೈಸಿ ತಂಡ ಸೇರ್ಪಡೆಯಾಗಲಿದ್ದು ಐಪಿಎಲ್ 15 ನೇ ಸೀಸನ್ ನಲ್ಲಿ ಒಟ್ಟು ಹತ್ತು ಫ್ರಾಂಚೈಸಿ ತಂಡಗಳು ಭಾಗವಹಿಸಲಿವೆ. ಇನ್ನು ಈ ಲಕ್ನೋ ಹೊಸ ಫ್ರಾಂಚೈಸಿ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನ ತಮ್ಮ ತಂಡದ ನಾಯಕನನ್ನಾಗಿ ಮಾಡುವುದಕ್ಕೆ ಉತ್ಸುಕವಾಗಿದೆ. ಈಗಾಗಲೇ ಕೆ.ಎಲ್.ರಾಹುಲ್ ಪಂಜಾಬ್ ಕಿಂಗ್ಸ್ ತಂಡದಿಂದ ಹೊರ ಬಂದಿರುವುದಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಿದ್ದರು.



ಹಾಗಾಗಿ ಕೆ.ಎಲ್.ರಾಹುಲ್ ಹೊಸ ಫ್ರಾಂಚೈಸಿ ಲಕ್ನೋ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಮತ್ತೊಂದು ಅಚ್ಚರಿಯ ಸುದ್ದಿ ಅಂದರೆ ಲಕ್ನೋ ಫ್ರಾಂಚೈಸಿ ಕೆ.ಎಲ್.ರಾಹುಲ್ ಅವರ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ ಅವರನ್ನು ಕೊಂಡು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಉತ್ಸುಕತೆ ತೋರುತ್ತಿದೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಲಕ್ನೋ ತಂಡದ ಆಲೋಚನೆಯಂತೆ ಶಿಖರ್ ಧವನ್ ಡೆಲ್ಲಿ ಕ್ಯಾಪಿಟಲ್ಸ್ ತೊರೆದರೆ ಕೆ. ಎಲ್.ರಾಹುಲ್ ಮತ್ತು ಶಿಖರ್ ಧವನ್ ಇಬ್ಬರು ದಿಗ್ಗಜ ಆಟಗಾರರು ಒಂದೇ ತಂಡದಲ್ಲಿ ಆಟವಾಡಲಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ ಅವರೇ ಇನ್ನು ಮೂರು ಸೀಸನ್ ಗಳಲ್ಲಿ ಸಿಎಸ್ ಕೆ ತಂಡದ ಕ್ಯಾಪ್ಟನ್ ಆಗಿರಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದ ಗೊಂದಲಕ್ಕೆ ತೆರೆ ಬಿದ್ದಿದೆ.