ಅನೇಕರಿಗೆ ಮಧ್ಯರಾತ್ರಿ 3 ಗಂಟೆಗೇನೇ ಎಚ್ಚರವಾಗಲು ಕಾರಣ ಏನು ಗೊತ್ತೇ

ನಿದ್ದೆ ಎಂಬುದು ಮನುಷ್ಯನ ಜೀವನದ ಒಂದು ಮುಖ್ಯಭಾಗ. ಆದರೆ ಬಹುತೇಕ ಜನರಿಗೆ ಮಲಗಿರುವ ಸಂದರ್ಭದಲ್ಲಿ ಹಲವಾರು ಬಾರಿ ಎಚ್ಚರವಾಗುತ್ತಾ ಇರುತ್ತದೆ. ಹೆದರಬೇಡಿ ಇದು ನಿಮಗೆ ಮಾತ್ರ ಆಗುತ್ತಿರುವ ಅಸಮಾನ್ಯ ವಿಷಯವಂತೂ ಅಲ್ಲ. ಬಹುತೇಕ ಜನರಿಗೆ ಈ ಅನುಭವ ಆಗುತ್ತಿರುತ್ತದೆ. ಹೌದು ಅದರಲ್ಲೂ ಈ ರೀತಿ ಎಚ್ಚರವಾದಾಗ ಬಹುತೇಕವಾಗಿ ಸಮಯ ಮಧ್ಯರಾತ್ರಿ 3 ಆಗಿರುತ್ತದೆ. ನಿಜ ಅನೇಕ ಜನ ಇದನ್ನೇ ಹೇಳುವುದು. ಪದೇಪದೇ ಎಚ್ಚರವಾಗುತ್ತದೆ ಅದರಲ್ಲೂ ಮಧ್ಯರಾತ್ರಿ ಮೂರರ ಆಸುಪಾಸಿನಲ್ಲಿ ಎಚ್ಚರವಾಗುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ತಜ್ಞರು ಹೇಳುವ ಕಾರಣ ಇಷ್ಟೇ. ಅದೇನೆಂದರೆ ನಾವು ಮಲಗಿದ ನಂತರ ಮಧ್ಯರಾತ್ರಿ ಅಥವಾ ಬೆಳಗು ಮುಂಜಾನೆ ಮೂರು ಗಂಟೆಯ ಆಸುಪಾಸಿನಲ್ಲಿ ಗಾಢ ನಿದ್ರೆಯಿಂದ ಹಗುರ ನಿದ್ರೆಗೆ ಜಾರುತ್ತೇವೆ ಅಂತೆ. ಹೀಗಾಗಿ ಎಚ್ಚರವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಂತೆ. ಇದು ಬಹುತೇಕ ಎಲ್ಲರಲ್ಲೂ ಸಂಭವಿಸುವ ಘಟನೆ ಹಾಗಾಗಿ ಈ ರೀತಿ ಎಚ್ಚರವಾದಾಗ ತಲೆಕೆಡಿಸಿಕೊಳ್ಳದೆ ಸುಮ್ಮನೆ ಮತ್ತೆ ಮಲಗಿದರೆ ಆಯ್ತು ಅದುಬಿಟ್ಟು ಮೊಬೈಲ್ ಬಳಸುವುದು ಜಾಲತಾಣಗಳನ್ನು ಬಳಸುವುದು ಮಾಡುವುದರಿಂದ ಇದೇ ಅಭ್ಯಾಸ ರೂಡಿ ಆಗುವ ಸಾಧ್ಯತೆ ಇರುತ್ತದೆ.

%d bloggers like this: