ಅಂಗೈಯಲ್ಲಿ X ಚಿನ್ಹೆ ಇದ್ದವರು ಮೊದಲು ನೋಡಿ,ನೀವೆಂತಹ ಮಹಾನ್ ವ್ಯಕ್ತಿ ಅಂತ ನಿಮಗೆ ತಿಳಿದಿಲ್ಲ

ಈ ಜ್ಯೋತಿಷ್ಯ ಶಾಸ್ತ್ರ ಅನ್ನುವುದು ನಮ್ಮ ಭಾರತೀಯ ಪರಂಪರೆಯಲ್ಲಿ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಈ ಶಾಸ್ತ್ರಗಳನ್ನು ನಂಬಿ ಭವಿಷ್ಯ ಕೇಳುವುದು ಅವರವರ ಸ್ವ ಇಚ್ಚೆಗೆ ಸೇರಿದ್ದು ಕೆಲವರು ಮುಖನೋಡಿ ಭವಿಷ್ಯ ನುಡಿಯುತ್ತಾರೆ ಒಂರಷ್ಟು ಜ್ಯೋತಿಷಿಗಳು ಹುಟ್ಟಿದ ದಿನಾಂಕ, ಜನ್ಮ ನಕ್ಷತ್ರಗಳು, ನಿಮ್ಮ ಅಂಗೈ ರೇಖೆಗಳನ್ನು ನೋಡಿಯೂ ಭವಿಷ್ಯ ಹೇಳುತ್ತಾರೆ. ಆದರೆ ಇದು ನಿಜವಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಅದು ಅವರವರ ನಂಬಿಕೆ ಅಷ್ಟೇ. ಆದರೆ ಈ ಅಂಗೈಯಲ್ಲಿ ಇರುವ ರೇಖೆಗಳು ಕೆಲವು ಅಕ್ಷರ ರೂಪ ಪಡೆದಿರುತ್ತವೆ. ಈ ಅಕ್ಷರ ರೂಪವು ಆ ವ್ಯಕ್ತಿಯ ಸ್ವಭಾವ ಮತ್ತು ಅವರ ಜೀವನದ ಮುನ್ನೆಲೆಗೆ ಸಂಬಂಧಿಸಿದ ಒಂದಷ್ಟು ವಿಚಾರಗಳನ್ನು ಹೇಳಬಹುದು ನಿಮ್ಮ ಅಂಗೈಯಲ್ಲಿ ರೇಖೆಗಳು ಏನಾದರು ಕ್ರಾಸ್ ರೀತಿ ಕವಲೊಡೆದಿದ್ದರೆ ಅಂತಹ ವ್ಯಕ್ತಿಗಳು ಇತಿಹಾಸ ಪುಟದಲ್ಲಿ ಉಳಿಯುವಂತಹ ಆದರ್ಶ ವ್ಯಕ್ತಿಯಾಗಿರುತ್ತಾರೆ. ಅವರು ಕೈಗೊಂಡ ಯಾವುದೇ ಕೆಲಸ ಕಾರ್ಯದಲ್ಲಿ ಜಯಶಾಲಿಯಾಗುತ್ತಾರೆ. ಇವರು ಇತರರಿಗೆ ಮಾರ್ಗದರ್ಶಕರಾಗಿ ಬೇರೆಯವರ ಜೀವನದಲ್ಲಿ ಮಹತ್ತರ ಬದಲಾವಣೆಗೆ ಕಾರಣಕರ್ತರಾಗುತ್ತಾರೆ.

ಅಂಗೈಯ ರೇಖೆಯಲ್ಲಿ ಕ್ರಾಸ್ ಹೊಂದಿರುವ ವ್ಯಕ್ತಿಗಳಲ್ಲಿ ಒಂದು ಕಾಲದಲ್ಲಿ ಅಮೇರಿಕಾದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್ ಕೂಡ ಒಬ್ಬರು ಜೊತೆಗೆ ಅಲೆಗ್ಸಾಂಡರ್ ಹಸ್ತದಲ್ಲಿಯೂ ಕೂಡ ಈ ಕ್ರಾಸ್ ಅನ್ನೋದು ಇತ್ತು ಎಂದು ಉದಾಹರಣೆಗೆ ತಿಳಿಸುತ್ತಾರೆ. ಈ ವ್ಯಕ್ತಿಗಳು ಬಹಳ ಚಾಣಾಕ್ಷರು ಇವರ ಬಳಿ ಮಾತನಾಡುವ ವ್ಯಕ್ತಿಗಳ ಮಾತುಗಾರಿಕೆ, ನಡೆ ನುಡಿ, ಹಾವ ಭಾವ ಗಳಿಂದಲೇ ಅವರ ವ್ಯಕ್ತಿತ್ವ ನ್ಯುನತೆಗಳನ್ನು ಕಂಡು ಹಿಡಿಯುವಂತಹ ಸಾಮರ್ಥ್ಯ ಹೊಂದಿರುತ್ತಾರೆ. ಇನ್ನು ಕ್ರಾಸ್ ಲಕ್ಷಣವುಳ್ಳ ವರನ್ನು ಹೊರತುಪಡಿಸಿ ರೇಖೆಗಳಲ್ಲಿ ಎಕ್ಸ್ X ಅಕ್ಷರ ರೂಪವಿದ್ದರೆ ಅವರು ಸಾಹಸಿ ವ್ಯಕ್ತಿಗಳಾಗಿರುತ್ತಾರೆ, ಇಂತಹ ಸಾಹಸಿ ವ್ಯಕ್ತಿತ್ವವುಳ್ಳವರು ಸಿಗುವುದು ಬಹಳ ವಿರಳವಾಗಿರುತ್ತದೆ. ಇವರು ತುಂಬ ಬದ್ದಿವಂತರಾಗಿದ್ದು, ವಿವಿಧ ಪ್ರತಿಭೆಯುಳ್ಳವರಾಗಿರುತ್ತಾರೆ. ಯಾವುದೇ ವಿಚಾರದಲ್ಲಿ ಇವರು ತೆಗೆದುಕೊಳ್ಳುವ ನಿರ್ಧಾರಗಳು ಮಹತ್ತರ ಕಾರ್ಯಕ್ಕೆ ನಾಂದಿಯಾಗುತ್ತದೆ. ಆ ನಿರ್ಧಾರವು ಒಳಿತು ಕೆಡುಕು, ಲಾಭ ನಷ್ಟಗಳ ವಿವೇಚನೆಯಿಂದ ಕೂಡಿದ್ದು ಹಲವರಿಗೆ ಸ್ಪೂರ್ತಿಯಾಗಿರುತ್ತದೆ. ಇಂತಹ ವ್ಯಕ್ತಿಗಳು ಅವರು ಕಾಲವಾದ ನಂತರವೂ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.

%d bloggers like this: