ಅಂತರಾಷ್ಟ್ರೀಯ ವಿಂಬಲ್ಡನ್ ಟೆನ್ನಿಸ್ ಟೂರ್ನಮೆಂಟಿಗೂ ತಲುಪಿದ ಯಶ್ ಅವರ ಕೆಜಿಎಫ್ ಚಾಪ್ಟರ್2

ನಮ್ಮ ಕನ್ನಡದ ಗೋಲ್ಡನ್ ಸಿನಿಮಾ ಕೆಜಿಎಫ್ ಚಿತ್ರ ಯಾವ ಮಟ್ಟಿಗೆ ಸದ್ದು ಮಾಡಿದೆ ಅಂದ್ರೇ ದೇಶದ ಗಡಿದಾಚೆದಾಡಿ ಹೊರ ದೇಶದ ಗಲ್ಲಿ ಗಲ್ಲಿಗಳಲ್ಲಿ ಕೆಜಿಎಫ್ ಚಿತ್ರ ಕ್ರೇಜ಼್ ಹುಟ್ಟು ಹಾಕಿತ್ತು. ಈ ಚಿತ್ರದ ರಾಕಿಬಾಯ್ ಪಾತ್ರ, ಸಾಂಗ್ಸ್ ಅಂಡ್ ಡೈಲಾಗ್ಸ್ ಸಖತ್ ಫೇಮಸ್ ಆಗಿದ್ವು. ಅದ್ರಲ್ರೂ ಕೂಡ ವೈಲೆನ್ಸ್ ವೈಲೆನ್ಸ್ ವೈಲೆನ್ಸ್ ಐ ಡೋಂಟ್ ಲೈಕ್ ಇಟ್. ವೈಲೆನ್ಸ್ ಲೈಟ್ ಮಿ. ಐ ಕಾಂಟ್ ಅವಾಯ್ಡ್ಈ ಡೈಲಾಗ್ ಯಾವ ಭಾಷೆ, ದೇಶದ ಸಿನಿ ಪ್ರಿಯರನ್ನ ಬಿಟ್ಟಿಲ್ಲ. ಪ್ರತಿಯೊಬ್ಬರ ಬಾಯಲ್ಲೂ ಕೂಡ ಈ ಡೈಲಾಗ್ ಹರಿದಾಡಿದೆ. ಇದೇ ರೀತಿ ಅನೇಕ ಸನ್ನಿವೇಶಗಳನ್ನು ಈ ಡೈಲಾಗ್ ಶೈಲಿಯಲ್ಲಿ ಹೇಳಿ ಟ್ರೋಲ್ ಕೂಡ ಆಗಿದ್ದವರು ಕೂಡ ನಮ್ಮ ಮುಂದೆ ಉದಾಹರಣೆಗಳಿದೆ.

ಇದು ಇಷ್ಟಕ್ಕೆ ಮುಗಿದಿಲ್ಲ. ಇದೀಗ ವಿಂಬಲ್ಡನ್ ಟೆನ್ನಿಸ್ ಟೂರ್ನ್ಮೆಂಟ್ ನಲ್ಲಿಯೂ ಕೂಡ ಇದೇ ಕೆಜಿಎಫ್ ಡೈಲಾಗ್ ಸದ್ದು ಮಾಡಿದೆ. ನಿನ್ನೆ ವಿಂಬಲ್ಡನ್ ಟೆನ್ನಿಸ್ ಟೂರ್ನಮೆಂಟ್ ಗ್ರ್ಯಾನ್ ಸ್ಲಾಂ ಫೈನಲ್ ನಲ್ಲಿ ನೋವಾಕ್ ಜೋಕೋವಿಕ್ ನಿರಂತರವಾಗಿ ನಾಲ್ಕನೇ ಬಾರಿ ಟ್ರೋಫಿ ಗೆದ್ದು ಬೀಗುತ್ತಾರೆ. ಇದು ಒಟ್ಟಾರೆಯಾಗಿ ಅವರಿಗೆ ಪ್ರಶಸ್ತಿ ದೊರೆಯುತ್ತಿರುವುದು ಏಳನೇ ಬಾರಿಯಾಗಿದೆ. ಭಾನುವಾರ ನಡೆದ ಗ್ರ್ಯಾನ್ ಸ್ಲಾಂ ಫೈನಲ್ ನಲ್ಲಿ ಆಸ್ಟ್ರೇಲಿಯಾದ ನಿಕ್ ಕಿರಿಯೋಸ್ ವಿರುದ್ದ 4-6, 6-3, 6-4, 7-6, ಸೆಟ್ ಗಳಲ್ಲಿ ನೋವಾಕ್ ಜೋಕೋವಿಕ್ ಅವರು ಜಯ ಗಳಿಸುತ್ತಾರೆ. ರಾಫೆಲ್ ನಡಾಲ್ ಅವರು 22 ಗ್ರ್ಯಾನ್ ಸ್ಲಾಂ ಗೆದ್ದು ಮೊದಲ ಸ್ಥಾನದಲ್ಲಿದ್ದಾರೆ.

ಬಳಿಕ ಜೋಕೋವಿಕ್ ಅವರು 21ನೇ ಬಾರಿ ಗ್ರ್ಯಾನ್ ಸ್ಲಾಂ ಗೆದ್ದ ಅಟಗಾರ ಎಂಬ ಎಂದು ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆಯುತ್ತಾರೆ. ಇವರ ನಂತರದ ಸ್ಥಾನದಲ್ಲಿ 20 ಬಾರಿ ಜಯಭೇರಿ ಸಾಧಿಸಿ ರೋಜರ್ ಫೆಡರರ್ ಇದ್ದಾರೆ. ಯಾವಾಗ ನೋವಾಕ್ ಜೋಕೋವಿಕ್ ಅವರು ಟ್ರೋಫಿ ಎತ್ತಿಡಿಯುತ್ತಿದ್ದರೋ ಅದೇ ಸಮಯದಲ್ಲಿ ವಿಂಬಲ್ಡನ್ ಫೇಸ್ ಬುಕ್ ಖಾತೆಯಲ್ಲಿ ಜೋಕೋವಿಕ್ ಅವರು ಟ್ರೋಫಿ ಹಿಡಿದಿರೋ ಫೋಟೋ ಹಾಕಿ ಟ್ರೋಫಿಸ್.ಟ್ರೋಫಿಸ್.ಟ್ರೋಫಿಸ್ಐ ಲೈಕ್ ಟ್ರೋಫಿಸ್. ಟ್ರೋಫಿಸ್ ಲೈಕ್ ಮಿ, ಐಕಾಂಟ್ ಅವಾಯ್ಡ್ ಟ್ರೋಫಿ ಎಂದು ಕೆಜಿಎಫ್2 ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ವೈಲೆನ್ಸ್ ಡೈಲಾಗ್ ಬರೆದು ಪೋಸ್ಟ್ ಮಾಡಿದೆ. ಇದೀಗ ವಿಂಬಲ್ಡನ್ ಫೇಸ್ ಬುಕ್ ನಲ್ಲಿನ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

%d bloggers like this: