ಅಂತ್ಯವಾಗುತ್ತಿದೆ 600 ಸಂಚಿಕೆಗಳನ್ನು ಪೂರೈಸಿದ ಕನ್ನಡದ ಜನಪ್ರಿಯ ಧಾರಾವಾಹಿ

ಕೇವಲ 600 ಸಂಚಿಕೆಗಳಿಗೇ ಸಂತೃಪ್ತಿ ಪಡೆದುಕೊಂಡು ಅಂತ್ಯಗೊಳ್ಳುತ್ತಿದೆ ಕನ್ನಡದ ಜನಪ್ರಿಯ ಧಾರಾವಾಹಿ, ಇತ್ತೀಚೆಗೆ ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳ ಹಾವಳಿ ನಡುವೆಯೂ ಕೂಡ ಕನ್ನಡದ ಅನೇಕ ಧಾರಾವಾಹಿಗಳು ಯಶಸ್ವಿಯಾಗಿ ಐನೂರು, ಸಾವಿರ ಸಂಚಿಕೆಗಳನ್ನ ಪೂರೈಸಿ ಯಶಸ್ವಿಯಾಗಿ ಸಾಗುತ್ತಿವೆ. ಆದರೆ ಕೆಲವು ಸೀರಿಯಲ್ ಮಾತ್ರ ಕಾರಾಣಾಂತರಗಳಿಂದಾಗಿ ಅರ್ಧದಲ್ಲೇ ಮೊಟಕು ಅಥವಾ ಬಹುಬೇಗ ಅಂತ್ಯ ಕಾಣುತ್ತಿವೆ. ಅಂತೆಯೇ ಇದೀಗ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಇಂತಿ ನಿಮ್ಮ ಆಶಾ ಧಾರಾವಾಹಿಯು ಕೂಡ ಕೇವಲ ಆರು ನೂರು ಕಂತುಗಳನ್ನು ಪೂರೈಸಿ ಅಂತ್ಯವಾಗುತ್ತಿದೆ.

ಈ ಹಿಂದೆ ರಾಘವೇಂದ್ರ ರಾಜ್ ಕುಮಾರ್ ಅವರ ನಿರ್ಮಾಣದ ಜೀವ ಹೂವಾಗಿದೆ ಮತ್ತು ಮತ್ತೆ ವಸಂತ ಧಾರಾವಾಹಿಗಳು ಸಹ ಟಿ‌ಆರ್.ಪಿ.ಯಲ್ಲಿ ಕಳಪೆ ಮಟ್ಟದ ಅಂಕಗಳ ಕಂಡ ಕಾರಣ ಬೇಗನೇ ಕ್ಲೈಮ್ಯಾಕ್ಸ್ ಹಂತ ತಲುಪಿದವು. ಇದೀಗ ಅದರ ಸಾಲಿಗೆ ಈ ಇಂತಿ ನಿಮ್ಮ ಆಶಾ ಧಾರಾವಾಹಿ ಕೂಡ ಸೇರಿಕೊಳ್ಳುತ್ತಿದೆ. ಇಂತಿ ನಿಮ್ಮ ಆಶಾ ಧಾರಾವಾಹಿಯಲ್ಲಿ ಸಂಗೀತಾ ಅನಿಲ್, ಧರ್ಮ, ಶ್ರೇಯಾ, ಕಾರ್ತಿ ಮಹೇಶ್, ವಿಜಯ್ ಲತಾ, ಹರಿಣಿ, ನಯನಾ ಮತ್ತು ಮೈಕೋ ಮಂಜು ಅವರು ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಇಂತಿ ನಿಮ್ಮ ಆಶಾ ಧಾರಾವಾಹಿಯು ಬಂಗಾಳಿ ಮೂಲದ ಶ್ರೀಮೋಯಿ ಎಂಬ ಧಾರಾವಾಹಿಯ ರಿಮೇಕ್ ಆಗಿತ್ತು.

ಈ ಇಂತಿ ನಿಮ್ಮ ಆಶಾ ಧಾರಾವಾಹಿಯು 2019 ರ ಅಕ್ಟೋಬರ್ ತಿಂಗಳ 7 ರಿಂದ ಆರಂಭವಾಗಿತ್ತು. ಕನ್ನಡದಲ್ಲಿ ಇಂತಿ ನಿಮ್ಮ ಆಶಾ ಧಾರಾವಾಹಿಗೆ ರವಿ ಕಿರಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಒಂದೆಡೆ ಐನೂರು ಸಾವಿರ ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಸಾಗುತ್ತಿರುವ ಧಾರಾವಾಹಿಗಳ ನಡುವೆಯೇ ಟಿ‌.ಆರ್.ಪಿ ಮತ್ತು ಕೆಲವು ಇನ್ನಿತರ ಕಾರಣಾಂತರಗಳಿಂದ ಕಡಿಮೆ ಅವಧಿಗೆ ಈ ಇಂತಿ ನಿಮ್ಮ ಆಶಾ ಧಾರಾವಾಹಿಯು ಅಂತ್ಯ ವಾಗುತ್ತಿರುವುದು ಕಿರುತೆರೆ ವೀಕ್ಷಕರಿಗೆ ಬೇಸರ ಮೂಡಿಸಿದೆ ಎನ್ನಬಹುದು.

%d bloggers like this: