ಅಪಾರವಾದ ಶಕ್ತಿಗೆ ಶೇಂಗಾ ಪರಿಣಾಮಕಾರಿ ಪ್ರೋಟೀನ್

ನಮ್ಮ ಆಹಾರ ಕ್ರಮ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದು ವೈದ್ಯರು ತಿಳಿಸುತ್ತಾರೆ, ನಾವು ಇಂದಿನ ಆಧುನಿಕ ಜೀವನದಲ್ಲಿ ಪೌಷ್ಠಿಕಾಂಶ ಆಹಾರ ನಿರೀಕ್ಷೆ ಮಾಡುವುದು ಸಮಂಜಸವಲ್ಲ ಎನ್ನಬಹುದು. ಏಕೆಂದರಲ್ಲಿ ನಾವು ಯಾವುದೇ ಆಹಾರ ಪಧಾರ್ಥಗಳನ್ನು ತೆಗೆದುಕೊಂಡರು ಸಹ ಅದರಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿರುತ್ತಾರೆ. ಇನ್ನು ಈ ರಾಸಾಯನಿಕ ವಾಗಿ ಬೆಳೆಸಿದ ಆಹಾರವನ್ನು ತಿಂದು ನಾವು ಆರೋಗ್ಯವಾಗಿರಲು ಅಸಾಧ್ಯವಾಗಿದೆ. ಬಡವರ ಬಾದಾಮಿ ಎಂದು ಕರೆಸಿಕೊಳ್ಳುವ ಕಡಲೆಕಾಯಿ ಬೀಜವನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಇದು ಒದಗಿಸುತ್ತದೆ.

ಕಡಲೆಕಾಯಿ ಬೀಜದಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು ಸ್ನಾಯುಗಳನ್ನು ಶರೀರ ಮತ್ತು ಬಲಪಡಿಸುತ್ತದೆ, ಆದರೆ ಈ ಕಡಲೇಕಾಯಿ ಬೀಜವನ್ನು ಸಾವಯುವವಾಗಿ ಬೆಳೆದದ್ದಾಗಿರಬೇಕು. ಇದು ಶರೀರಕ್ಕೆ ಅತ್ಯಂತ ಶಕ್ತಿ ನೀಡುವಂತಹ ಆಹಾರವಾಗಿದೆ. ಒಂದು ಬೊಗಸೆಯಷ್ಟು ಕಡಲೆಕಾಯಿ ಬೀಜವನ್ನು ಆರು ಎಂಟು ಗಂಟೆಗಳ ಕಾಲ ನೆನೆಸಿಡಬೇಕು. ನಂತರದಲ್ಲಿ ಅದನ್ನು ಒಂದು ಬಟ್ಟಲಿಗೆ ಹಾಕಿ ಅದರ ಜೊತೆ ಒಂದು ಬಾಳೆ ಹಣ್ಣು ಅವಕಾಶ ವಿದ್ದರೆ ಒಂದೆರಡು ಚಮಚ ಜೇನುತುಪ್ಪ ಬೆರೆಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ತದನಂತಇದನ್ನು ರಸಾಯನದ ರೀತಿಯಲ್ಲಿ ಸೇವಿಸುವುದರಿಂದ ಇದು ದೇಹಕ್ಕೆ ಉತ್ತಮವಾದ ಶಕ್ತಿಯನ್ನು ಪೂರೈಸುತ್ತದೆ.

%d bloggers like this: