ಕನ್ನಡ ಚಲನಚಿತ್ರ ನಟ ಸುಪ್ರೀಂ ಹೀರೋ ಶಶಿಕುಮಾರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ, ಶಶಿಕುಮಾರ್ ಎಂದೊಡನೆ ನೆನಪಾಗುವುದು ಅವರ ಸುಂದರ ಮೊಗ ಮತ್ತು ಅವರು ಹಾಕುವ ಸಕತ್ ಡಾನ್ಸಿಂಗ್ ಸ್ಟೆಪ್ಸ್. ಹೌದು ಒಂದು ಕಾಲದಲ್ಲಿ ಶಶಿಕುಮಾರ್ ಎಲ್ಲಾ ನಿರ್ದೇಶಕರ ಬೇಡಿಕೆಯ ನೆಚ್ಚಿನ ಹೀರೊ ಆಗಿ ಮೆರೆದವರು. ತಂದೆಯ ಹಾದಿಯಲ್ಲಿಯೇ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸೀತಾಯನ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಸೀತಯನ ಚಿತ್ರದ ಹಾಡುಗಳು ಮತ್ತು ಟೀಸರ್ ಬಿಡುಗಡೆ ಆಗಿದ್ದು ಎಲ್ಲೆಡೆ ಮೆಚ್ಚುಗೆಯನ್ನು ಕೂಡ ಪಡೆದಿದೆ. ಇದರ ನಡುವೆಯೇ ಅಕ್ಷಿತ್ ಅವರು ಮತ್ತೊಂದು ಸಿನಿಮಾಗೆ ಒಪ್ಪಿಗೆ ಸೂಚಿಸಿದ್ದಾರೆ.

ಆದರೆ ಅದರ ವಿಶೇಷತೆ ಏನೆಂದರೆ ಆಸಿನಿಮಾ ಕನ್ನಡ ಸೇರಿದಂತೆ ತೆಲುಗು ತಮಿಳು ಭಾಷೆಗಳಲ್ಲಿ ಕೂಡ ಬಿಡುಗಡೆ ಆಗುತ್ತಿದೆ. ಈ ಮೂಲಕ ಅಕ್ಷಿತ ಶಶಿಕುಮಾರ್ ಕಾಲಿವುಡ್ ಮತ್ತು ಟಾಲಿವುಡ್ ರಂಗಕ್ಕೂ ಕೂಡ ಪಾದಾರ್ಪಣೆ ಮಾಡಲಿದ್ದಾರೆ. ಆ ಹೊಸ ಸಿನಿಮಾದ ಹೆಸರು ಸಮಿತ್. ಹೌದು ಈ ಚಿತ್ರದ ಮಹೂರ್ತ ಇತ್ತೀಚಿಗೆ ಹೈದರಬಾದ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಅಕ್ಷಿತ್ ಬಗ್ಗೆ ನಿಮಗೆ ಒಂದು ಸಂಗತಿ ಹೇಳಬೇಕೆಂದರೆ ಅವರು ತಂದೆಯ ಹೆಸರಿನ ಮೇಲೆಯೇ ಚಿತ್ರರಂಗಕ್ಕೆ ಬಂದವರಲ್ಲ ಬದಲಾಗಿ ಎಲ್ಲರಂತೆಯೇ ಆಡಿಷನ್ ಮೂಲಕ ಸಿನಿ ಪಯಣಕ್ಕೆ ಕಾಲಿಟ್ಟವರು. ಒಟ್ಟಾರೆಯಾಗಿ ನಮ್ಮ ಚಿತ್ರರಂಗದ ಇನ್ನೋರ್ವ ಭರವಸೆಯ ನಟನಾಗಿ ಅಕ್ಷಿತ ಶಶಿಕುಮಾರ್ ಅವರು ಮಿಂಚುವ ಎಲ್ಲಾ ಸಾಧ್ಯತೆಗಳಿವೆ.