ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ, ಅಪ್ಪು ಅವರ ಕೊನೆಯ ಚಿತ್ರ ‘ಜೇಮ್ಸ್’ ಚಿತ್ರದಲ್ಲಿ ಅಣ್ಣಾವ್ರ ಮೂರೂ ಮಕ್ಕಳ ದರ್ಶನ

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನು ನೆನಪು ಮಾತ್ರ. ಅಪ್ಪು ಇಲ್ಲದಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿದೆ. ಪವರ್ ಸ್ಟಾರ್ ಅವರ ನಿಧನದ ಸುದ್ದಿಯನ್ನು ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಅವರನ್ನು ನೋಡಲು ಇಂದಿಗೂ ಸಾವಿರಾರು ಅಭಿಮಾನಿಗಳು ಅವರ ಸಮಾಧಿ ಬಳಿ ಪ್ರತಿದಿನ ಬರುತ್ತಿದ್ದಾರೆ. ಕನ್ನಡದ ಪ್ರತಿಮನೆಯಲ್ಲೂ ಸೂತಕದ ಛಾಯೆ ಆವರಿಸಿದೆ. ಜೇಮ್ಸ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ. ಅಪ್ಪು ಅವರ ನಿಧನದ ನಂತರ ಅವರ ಕೊನೆಯ ಸಿನಿಮಾ ಜೇಮ್ಸ್ ಏನಾಗಲಿದೆ, ಬಿಡುಗಡೆಯಾಗದೆ ಸಿನಿಮಾ ನಿಂತು ಹೋಗ ಬಹುದಾ ಎಂಬ ಪ್ರಶ್ನೆಗಳು ಸುಳಿದಾಡುತ್ತಿದ್ದವು.

ಏಕೆಂದರೆ ಜೇಮ್ಸ್ ಸಿನಿಮಾದ ಚಿತ್ರೀಕರಣವು 70% ಕಂಪ್ಲೀಟ್ ಆಗಿದ್ದು, ಇನ್ನು 30% ಚಿತ್ರೀಕರಣ ಬಾಕಿ ಇದೆ. ಅಲ್ಲದೇ ಸಿನಿಮಾದ ಡಬ್ಬಿಂಗ್ ಇನ್ನು ಬಾಕಿ ಇದೆ. ಅಪ್ಪು ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಂಡ ಕೊನೆಯ ಸಿನಿಮಾ ಇದಾಗಿದ್ದು ಸ್ಯಾಂಡಲ್ ವುಡ್ನ ಬಹು ನಿರೀಕ್ಷಿತ ಚಿತ್ರ ಎಂದರೆ ತಪ್ಪಾಗಲಾರದು. ಜೇಮ್ಸ್ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ಮುಗಿದಿದ್ದು ಆದರೆ ಅಪ್ಪು ಅವರ ವಾಯ್ಸ್ ಡಬ್ಬಿಂಗ್ ಮಾತ್ರ ಬಾಕಿ ಉಳಿದಿದೆ. ಇದರಿಂದ ಅಭಿಮಾನಿಗಳಿಗೆ ಚಿತ್ರದ ರಿಲೀಸ್ ಬಗ್ಗೆ ಹಲವು ಗೊಂದಲಗಳಿವೆ. ಆದರೆ ಇದೀಗ ಜೇಮ್ಸ್ ಚಿತ್ರತಂಡವು ಅಪ್ಪು ಅವರ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಹೌದು ಜೇಮ್ಸ್ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.

ಜೇಮ್ಸ್ ತೆರೆಗೆ ಬರಬೇಕು ಎನ್ನುವುದು ಎಲ್ಲ ಅಪ್ಪು ಅಭಿಮಾನಿಗಳ ಆಸೆ. ಅದನ್ನು ಚಿತ್ರತಂಡ ಈಡೇರಿಸುತ್ತಿದೆ. ಶೂಟಿಂಗ್ ಸಮಯದಲ್ಲಿ ಅಪ್ಪು ಮಾತನಾಡಿರುವ ಧ್ವನಿಯನ್ನೇ ಇಟ್ಟುಕೊಂಡು ಸಿನಿಮಾದಲ್ಲಿ ಬಳಸಿಕೊಳ್ಳಲು ಜೇಮ್ಸ್ ಚಿತ್ರದ ನಿರ್ದೇಶಕರು ಪ್ಲಾನ್ ಮಾಡಿದ್ದಾರೆ. ಒಂದು ವೇಳೆ ಈ ಪ್ಲಾನ್ ವರ್ಕೌಟ್ ಆಗದಿದ್ದರೆ, ಅಪ್ಪು ಅವರ ಸಹೋದರ, ನಟ ಶಿವರಾಜ್ ಕುಮಾರ್ ಅವರು ಅಪ್ಪು ಅವರಿಗೆ ಧ್ವನಿ ನೀಡಲಿದ್ದಾರೆ ಎಂದು ಕೇಳಿ ಬರುತ್ತಿದೆ. ಈ ಸುದ್ದಿಯ ಜೊತೆಗೆ ಇನ್ನೊಂದು ವಿಶೇಷವಾದ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅದೇನೆಂದರೆ ಬಹಳ ವರ್ಷಗಳಿಂದಲೂ ಡಾಕ್ಟರ್ ರಾಜಕುಮಾರ್ ಅವರ ಪುತ್ರರಾದ ರಾಘಣ್ಣ, ಶಿವಣ್ಣ ಮತ್ತು ಪುನೀತ್ ರಾಜಕುಮಾರ್ ಮೂರು ಜನ ಸೇರಿ ಸಿನಿಮಾ ಮಾಡಬೇಕು ಅಂದುಕೊಂಡಿದ್ದರು.

ಆದರೆ ಆಸೆ ಈಡೇರುವ ಮುನ್ನವೆ ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿದ್ದಾರೆ. ಆದ್ದರಿಂದ ಈ ಆಸೆ ಅಪೂರ್ಣವಾಗಿಯೇ ಉಳಿದಿದೆ. ಆದರೆ ಈಗ ಈ ಆಸೆಗೆ ಮತ್ತಷ್ಟು ಜೀವತುಂಬಲು ಜೇಮ್ಸ್ ಚಿತ್ರತಂಡ ಹೊರಟಿದೆ. ಹೌದು ಜೇಮ್ಸ್ ಸಿನಿಮಾದಲ್ಲಿ ಅಪ್ಪು ಅವರ ಜೊತೆಗೆ ಶಿವಣ್ಣ ಮತ್ತು ರಾಘಣ್ಣ ಇಬ್ಬರು ನಟಿಸಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆದಲ್ಲಿ ಅಭಿಮಾನಿಗಳ ಆಸೆಯ ಜೊತೆಗೆ ಶಿವಣ್ಣ ಮತ್ತು ರಾಘಣ್ಣ ಅವರ ಆಸೆ ಕೂಡ ಇಡೇರಲಿದೆ. ಪುನೀತ್ ರಾಜಕುಮಾರ್ ಅವರ ಹುಟ್ಟಿದ ದಿನವಾದ ಮಾರ್ಚ್17 ರಂದು ಜೇಮ್ಸ್ ಚಿತ್ರವನ್ನು ರಿಲೀಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದರ ಬಗ್ಗೆ ನಿರ್ದೇಶಕರಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.

%d bloggers like this: