ಅಪ್ಪು ಇಲ್ಲದ ಕಾರಣ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದ ಕನ್ನಡದ ಖ್ಯಾತ ನಟ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬದುಕಿಲ್ಲ ಎಂಬ ಸುದ್ದಿಯನ್ನು ಇದುವರೆಗೂ ನಂಬಲು ಅಸಾಧ್ಯ. ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಕೇವಲ ಕರ್ನಾಟಕದ ಜನತೆ ಮಾತ್ರವಲ್ಲದೇ, ಭಾರತದ ಗಣ್ಯಾತಿಗಣ್ಯರು ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದರು. ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಿದ್ದ ಪುನೀತ್ ರಾಜ್ ಕುಮಾರ್ ಅವರು ಸಡನ್ ಆಗಿ ಹಾರ್ಟ್ ಅಟ್ಯಾಕ್ ನಿಂದ ಮರಣ ಹೊಂದುತ್ತಾರೆ ಎಂಬ ಕಹಿ ಸತ್ಯವನ್ನು ಇಂದಿಗೂ ನಂಬಲಾಗುವುದಿಲ್ಲ. ಅಕ್ಟೋಬರ್ 29 ಕರ್ನಾಟಕಕ್ಕೆ ಕರಾಳ ದಿನ ಎಂದು ಹೇಳಬಹುದು. ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದ ಇಡೀ ಕನ್ನಡ ಚಿತ್ರರಂಗ ಬಡವಾಗಿದೆ. ತಮ್ಮ ನೆಚ್ಚಿನ ಸ್ಟಾರ್ ನಟನ ಸಮಾಧಿಯ ಬಳಿ, ಅವರ ದರ್ಶನ ಪಡೆಯಲು ಇಂದಿಗೂ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಬರುತ್ತಾರೆ.

ಅದೆಷ್ಟೋ ಜನ ಅಭಿಮಾನಿಗಳು ಪುನೀತ್ ಅವರ ಹೆಸರಿನಲ್ಲಿ ಅವರಂತೆ ಸಮಾಜಮುಖಿ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ. ಇನ್ನೂ ಸ್ಯಾಂಡಲ್ವುಡ್ ನ ಹಲವಾರು ನಟ-ನಟಿಯರು ಪುನೀತ್ ಅವರ ನಿಧನದಿಂದಾಗಿ ತಮ್ಮ ಹುಟ್ಟುಹಬ್ಬವನ್ನು ಈ ವರ್ಷ ಸೆಲೆಬ್ರೇಟ್ ಮಾಡಿಕೊಂಡಿಲ್ಲ. ಎಲ್ಲಾ ನಟರು ಕೂಡ ತಮ್ಮ ಅಭಿಮಾನಿಗಳಿಗೆ ದಯವಿಟ್ಟು ಈ ವರ್ಷ ಹುಟ್ಟು ಹಬ್ಬವನ್ನು ಆಚರಿಸುವುದು ಬೇಡ ಎಂದು ಹೇಳಿಕೊಂಡಿದ್ದರು. ಇದೀಗ ಹಿರಿಯ ನಟ ಜಗ್ಗೇಶ್ ಅವರು ಕೂಡ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ವಿಶೇಷವೆಂದರೆ ಮಾರ್ಚ್ 17, ನಟ ಜಗ್ಗೇಶ್ ಹಾಗೂ ಪುನೀತ್ ರಾಜಕುಮಾರ್ ಇಬ್ಬರೂ ಹುಟ್ಟಿದ ದಿನ.

ಇಬ್ಬರು ಒಂದೇ ದಿನ ಹುಟ್ಟುಹಬ್ಬದ ಹಬ್ಬ ಆಚರಿಸಿಕೊಳ್ಳುತ್ತಿದ್ದರು. ಮೊದಲಿನಿಂದಲೂ ನಟ ಜಗ್ಗೇಶ್ ಹಾಗೂ ಅಪ್ಪು ಅವರ ನಡುವೆ ವಿಶೇಷವಾದ ಬಾಂಧವ್ಯವಿದೆ. ಪುನೀತ್ ಅವರು ಜಗ್ಗೇಶ್ ಅವರನ್ನು ಅಣ್ಣಾ ಎಂದು ಕರೆಯುತ್ತಿದ್ದರು. ಪುನೀತ್ ಅವರೊಂದಿಗಿನ ತಮ್ಮ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಾ ಜಗ್ಗೇಶ್ ಅವರು ಭಾವುಕರಾದರು. ಪ್ರತಿವರ್ಷ ಹುಟ್ಟುಹಬ್ಬದಂದು ಪುನೀತ್ ರಾಜಕುಮಾರ್ ತಪ್ಪದೇ ಫೋನ್ ಕರೆ ಮಾಡಿ ವಿಶ್ ಮಾಡುತ್ತಿದ್ದರು. ಹ್ಯಾಪಿ ಬರ್ತಡೇ ಅಣ್ಣಾ ಎಂದು ವಿಶ್ ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಆ ವಿಶ್ ಕೇಳಿಸಿಕೊಳ್ಳುವ ಸೌಭಾಗ್ಯ ನನಗಿಲ್ಲ. ನಾನು ಅಪ್ಪು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ.

ಈ ಬಾರಿ ನನ್ನ 59ನೇ ಹುಟ್ಟುಹಬ್ಬ ಆಚರಿಸುವುದಿಲ್ಲ. ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಕ್ಕೆ ನನಗೆ ಮನಸ್ಸಿಲ್ಲ. ಏಕೆಂದರೆ ಪ್ರತಿ ವರ್ಷ ಮಾರ್ಚ್ 17 ರಂದು ತಪ್ಪದೇ ಪುನೀತ್ ಅವರು ನನಗೆ ಕಾಲ್ ಮಾಡುತ್ತಿದ್ದರು. ಆದರೆ ಮತ್ತೆ ಎಂದೂ ಕಾಲ್ ಬರದಂತಾಯಿತು ಎಂದು ಟ್ವೀಟ್ ಮಾಡಿದ್ದಾರೆ. ಇದಲ್ಲದೆ ಅಪ್ಪು ಅವರ ಜೊತೆ ಕೊನೆಯಬಾರಿ ತೆಗೆಸಿಕೊಂಡ ಫೋಟೋವನ್ನು ಕೂಡ ನಟ ಜಗ್ಗೇಶ್ ಅಪ್ಲೋಡ್ ಮಾಡಿದ್ದಾರೆ. ಜಗ್ಗೇಶ್ ಅವರ ಈ ನಿರ್ಧಾರಕ್ಕೆ ಅವರ ಅಭಿಮಾನಿಗಳು ಕೂಡ ಸಾಥ್ ನೀಡಿದ್ದಾರೆ.

%d bloggers like this: