ಸ್ಯಾಂಡಲ್ ವುಡ್ ಪವರ್ ಸ್ಟಾರ್ ನಟ ದಿ.ಪುನೀತ್ ರಾಜ್ ಕುಮಾರ್ ಅವರು ಕೇವಲ ನಟನೆ ಮಾತ್ರ ಅಲ್ಲದೆ ಗಾಯನ, ನೃತ್ಯ, ಸಾಹಸ ಹೀಗೆ ಸಿನಿಮಾದ ಎಲ್ಲಾ ಪಟುಗಳನ್ನ ಕರಗತ ಮಾಡಿಕೊಂಡಿದ್ದವರು. ಬಾಲ್ಯದಿಂದಾನೇ ಬಣ್ಣದ ಲೋಕದೊಂದಿಗೆ ನಂಟು ಬೆಳೆಸಿಕೊಂಡ ಅಪ್ಪು ಅವರು ನಾಯಕ ನಟರಾಗುವ ವೇಳೆಗೆ ಸಿನಿಮಾ ಪ್ರೊಡಕ್ಷನ್ ಬಗ್ಗೆ ಎಲ್ಲಾ ರೀತಿಯ ಅನುಭವಗಳನ್ನು ಪಡೆದುಕೊಂಡಿದ್ದರು. ಚಿತ್ರ ತಯಾರಿಕೆಯಲ್ಲಿ ಯಾವೆಲ್ಲಾ ರೀತಿಯ ಸವಾಲುಗಳು, ಅದರ ರೂಪುರೇಷೆಗಳು ಹೇಗಿರುತ್ತವೆ ಎಂಬುದನ್ನ ತಿಳಿದುಕೊಂಡಿದ್ದರು. ಪುನೀತ್ ರಾಜ್ ಕುಮಾರ್ ಅವರಿಗೆ ತಾನು ನಟಿಸುವ ಸಿನಿಮಾದ ಕಥೆಯ ಬಗ್ಗೆ ಅಪಾರವಾದ ಕಾಳಜಿ ಇತ್ತು. ತನ್ನ ತಂದೆ ರಾಜ್ ಅವರಂತೆ ಉತ್ತಮ ಸಾಮಾಜಿಕ, ಸಾಂಸಾರಿಕ ಚಿತ್ರಗಳನ್ನ ಮಾಡಬೇಕು ಎಂಬ ವಿಭಿನ್ನ ಆಲೋಚನೆ ಅವರಲ್ಲಿತ್ತು.

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಜನಪ್ರಿಯ ನಟರಾಗಿ ಮಿಂಚುತ್ತಿದ್ದರು ಕೂಡ ಅಪ್ಪು ಅವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬ ಸದುದ್ದೇಶದಿಂದ ತಮ್ಮದೇಯಾದ ಸ್ವಂತ ಪಿ.ಆರ್.ಕೆ ಎಂಬ ನಿರ್ಮಾಣ ಸಂಸ್ಥೆಯನ್ನ ಹುಟ್ಟು ಹಾಕುತ್ತಾರೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಅಪ್ಪು ಅವರಿಗೆ ವಿಭಿನ್ನ ಹೊಸ ಹೊಸ ಪ್ರಯೋಗಾತ್ಮಕ ಸಿನಿಮಾ ನಿರ್ಮಾಣದ ಕಡೆ ಒಲವು ಹೆಚ್ಚಾಗಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಟ್ರಾವೆಲಿಂಗ್ ಸಿನಿಮಾವಾಗಿ ಗಂಧದ ಗುಡಿ ಎಂಬ ಟ್ರಾವೆಲಿಂಗ್ ಸಿನಿಮಾವನ್ನ ಬಹಳ ಅತ್ಯಂತ ಸಹಜವಾಗಿಯೇ ಮಾಡಿ ಮುಗಿಸಿದ್ದಾರೆ. ಈಗಾಗಲೇ ಇವರ ಪಿ.ಆರ್.ಕೆ ನಿರ್ಮಾಣ ಸಂಸ್ಥೆಯಿಂದ ಕವಲುದಾರಿ, ಫ್ರೆಂಚ್ ಬಿರಿಯಾನಿ, ಮಾಯಾಬಜಾರ್ ಅಂತಹ ಹೊಸ ಬಗೆಯ ಚಿತ್ರಗಳು ಕನ್ನಡ ಚಿತ್ರ ರತಕರನ್ನ ರಂಜಿಸಿವೆ.

ಅದರಂತೆ ಇದೀಗ ಅಪ್ಪು ಅವರ ಕನಸಿನ ಕೂಸುಗಳಲ್ಲಿ ಇನ್ನೂ ಮೂರು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಈ ಹಿಂದೆ ಪಿ.ಆರ್.ಕೆ ಪ್ರೊಡಕ್ಷನ್ ಹೌಸ್ ನಲ್ಲಿ ತಯಾರಾಗಿದ್ದ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ನಟಸಿದ್ದ ಡ್ಯಾನಿಶ್ ಸೇಠ್ ಅಭಿನಯ ಇರುವ ಒನ್ ಕಟ್ ಟೂ ಕಟ್ ಸಿನಿಮಾ, ಯುವ ನಿರ್ದೇಶಕ ಅರ್ಜುನ್ ಕುಮಾರ್ ನಿರ್ದೇಶನದ ಫ್ಯಾಮಿಲಿ ಪ್ಯಾಕ್ ಎಂಬ ಸಿನಿಮಾ, ಮತ್ತು ರಾಮಾ ರಾಮಾರೇ ಸಿನಿಮಾ ಖ್ಯಾತಿಯ ನಿರ್ದೇಶಕ ಡಿ.ಸತ್ಯ ಪ್ರಕಾಶ್ ನಿರ್ದೇಶನದ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಗಳು ಬಿಡುಗಡೆ ಆಗುತ್ತಿವೆ. ಕೋವಿಡ್ ಮೂರನೇ ಅಲೆಯ ಹಿನ್ನೆಲೆ ಚಿತ್ರಮಂದಿರಕ್ಕೆ ಶೇಕಡ ಐವತ್ತರಷ್ಟು ಮಾತ್ರ ಅವಕಾಶ ನೀಡಿರುವುದರಿಂದ ಈ ಮೂರು ಸಿನಿಮಾಗಳು ವಾರಕ್ಕೊಂದಂತೆ ಅಮೇಜಾ಼ನ್ ಓಟಿಟಿ ವೇದಿಕೆಯಲ್ಲಿ ರಿಲೀಸ್ ಆಗಲಿವೆಯಂತೆ. ಇನ್ನು ಈ ಮೂರು ಚಿತ್ರಗಳ ಪೋಸ್ಟರ್ ಅನ್ನು ಅಮೇಜಾ಼ನ್ ಪ್ರೈಮ್ ತನ್ನ ಸೋಶಿಯಲ್ ಮೀಡಿಯಾ ಪೇಜ್ ಅಲ್ಲಿ ಹಂಚಿಕೊಂಡಿದೆ.