ಅಪ್ಪು ನೋಡಿಕೊಳ್ಳುತ್ತಿದ್ದ ಶಕ್ತಿಧಾಮಕ್ಕೀಗ ಇವರೇ ತಾಯಿ ತಂದೆ

ನಟ ಪುನೀತ್ ರಾಜ್ ಕುಮಾರ್ ಅವರು ನಿರ್ವಹಿಸಿಕೊಂಡು ಬರುತ್ತಿದ್ದಂತಹ ಶಕ್ತಿಧಾಮ ಮಕ್ಕಳಿಗೆ ಗೀತಾ ಶಿವರಾಜ್ ಕುಮಾರ್ ಪಾಠ ಮಾಡುತ್ತಾರಂತೆ. ಹೌದು ಚಂದನವನದ ಧೃವತಾರೆ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಮೂರು ತಿಂಗಳಾಗಿವೆ. ಆದರೂ ಕೂಡ ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಅನ್ನುವ ಹಾಗೇ ಅಪ್ಪು ಅವರು ನಿಧನರಾಗಿ ನೂರು ದಿನಗಳು ಆಗಿದ್ದರು ಕೂಡ ಅವರ ಪುಣ್ಯಭೂಮಿ ದರ್ಶನಕ್ಕೆ ಬರುತ್ತಿರುವ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಜೊತೆಗೆ ಅವರು ಯಾರಿಗೂ ತಿಳಿಯದ ಹಾಗೆ ಮಾಡಿದಂತಹ ಸಾಮಾಜಿಕ ಕಾರ್ಯಗಳು ದಿನಕಳೆದಂತೆ ಹೆಚ್ಚೆಚ್ಚು ಹೊರ ಬರುತ್ತಲೇ ಇವೆ. ಇನ್ನು ಇತ್ತೀಚೆಗಷ್ಟೇ ಅಭಿಮಾನಿಯೊಬ್ಬ ಹಿಮಾಲಯದಿಂದ ಸೈಕಲ್ ಮೂಲಕವೇ ಆಗಮಿಸಿ ಅಪ್ಪು ಅವರ ಪುಣ್ಯಭೂಮಿ ದರ್ಶನ ಮಾಡಿದ್ದಾನೆ.

ಅಷ್ಟೇ ಹೊರ ದೇಶದಲ್ಲಿರುವ ಅನೇಕ ಅಭಿಮಾನಿಗಳು ಕೂಡ ಅಪ್ಪು ಅವರ ಪುಣ್ಯಭೂಮಿ ದರ್ಶನಕ್ಕೆ ಇಂದಿಗೂ ಕೂಡ ಬರುತ್ತಲೇ ಇದ್ದಾರೆ. ಜೊತೆಗೆ ವಿಶೇಷ ಅಂದರೆ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಆಗಿರುವ ಜೇಮ್ಸ್ ಸಿನಿಮಾದ ಪೋಸ್ಟರ್ ಗಣರಾಜ್ಯೋತ್ಸವ ದಿನದಂದು ರಿಲೀಸ್ ಆಗಿ ಭಾರಿ ವೈರಲ್ ಆಗಿತ್ತು. ಇದೀಗ ಅಪ್ಪು ಅವರ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ಇತ್ತೀಚೆಗೆ ತಾನೇ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಮೈಸೂರಿನ ಶಕ್ತಿಧಾಮ ಕೇಂದ್ರಕ್ಕೆ ಭೇಟಿ ನೀಡಿದ್ದರು. ಮಕ್ಕಳೊಂದಿಗೆ ಒಂದಷ್ಟು ಕಾಲ ಆಟವಾಡಿ ಅವರೊಂದಿಗೆ ಕುಶಲೋಪರಿ ವಿಚಾರಿಸಿಕೊಂಡು ಸಂತಸದ ಕ್ಷಣ ಕಳೆದು ಬಸ್ ನಲ್ಲಿ ರೌಂಡ್ಸ್ ಹೊಡೆದಿದ್ದರು. ಈ ಬಸ್ ಅನ್ನು ಸ್ವತಃ ಶಿವಣ್ಣ ಅವರೇ ಚಲಾಯಿಸಿದ್ದು ವಿಶೇಷವಾಗಿತ್ತು.

ಇನ್ನು ಇದೀಗ ಅಪ್ಪು ಅವರು ನಡೆಸಿಕೊಂಡು ಬರುತ್ತಿದ್ದ ಈ ಶಕ್ತಿಧಾಮ ಕೇಂದ್ರದ ಸಂಪೂರ್ಣ ಜವಬ್ದಾರಿಯನ್ನು ಗೀತಾ ಶಿವರಾಜ್ ಕುಮಾರ್ ವಹಿಸಿಕೊಂಡಿದ್ದಾರಂತೆ. ಶಕ್ತಿಧಾಮ ಕೇಂದ್ರದಲ್ಲಿರುವ ಮಕ್ಕಳ ವಿಧ್ಯಾಭ್ಯಾಸ ಮತ್ತು ಆಗಾಗ ನಡೆಯುವಂತಹ ಸಭೆಗಳಲ್ಲಿ ಗೀತಾ ಅವರು ಪಾಲ್ಗೊಳ್ಳಲು ಮೈಸೂರಿಗೆ ಬರುತ್ತಿರುತ್ತಾರಂತೆ. ಈ ಬಗ್ಗೆ ಮಾತನಾಡಿರುವ ಶಿವಣ್ಣ ಅವರು ಮೈಸೂರು ನಮಗೆ ಹೊಸದಲ್ಲ. ಇದು ನಮ್ಮ ಊರಿನಂತೆಯೇ. ಅಪ್ಪು ನಡೆಸಿಕೊಂಡು ಬರುತ್ತಿದ್ದ ಶಕ್ತಿಧಾಮ ಕೇಂದ್ರದ ಜವಬ್ದಾರಿಯನ್ನ ಗೀತಾ ವಹಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳಿಗೆ ತರಗತಿಗಳನ್ನು ಕೂಡ ತೆಗೆದುಕೊಳ್ಳುತ್ತಾರೆ. ಇನ್ಮುಂದೆ ಗೀತಾ ಇಡೀ ಶಕ್ತಿಧಾಮ ಕೇಂದ್ರದ ತಾಯಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಶಿವರಾಜ್ ಕುಮಾರ್ ಮೈಸೂರಿನಲ್ಲಿ ತಿಳಿಸಿದ್ದಾರೆ.

%d bloggers like this: