ಸ್ಯಾಂಡಲ್ ವುಡ್ ನ ಜನಪ್ರಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ಯುವರತ್ನ ಸಿನಿಮಾದ ನಂತರ ಮತ್ತೊಂದು ಹೊಸ ಪ್ರಾಜೆಕ್ಟ್ ಮಾಡಲು ಕಥೆ ಮಾಡಿಕೊಂಡಿದ್ದರು. ಆದರೆ ಇದೀಗ ಪುನೀತ್ ಅವರ ಅಕಾಲಿಕ ನಿಧನದಿಂದಾಗಿ ಅವರಿಗಾಗಿ ಮಾಡಿದ ಕಥೆಗೆ ಬೇರೆ ನಾಯಕ ಅವಕಾಶ ಪಡೆದಿದ್ದಾನೆ. ಈ ನಾಯಕ ಬೇರಾರು ಅಲ್ಲ. ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್. ಹೌದು ಯುವ ರಾಜ್ ಕುಮಾರ್ ಈಗಾಗಲೇ ಪುನೀತ್ ರುದ್ರನಾಗ್ ನಿರ್ದೇಶನದಲ್ಲಿ ಯುವ ರಣಧೀರ ಕಂಠೀರವ ಎಂಬ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡುವ ಸಿದ್ದತೆಯಲ್ಲಿದ್ದಾರೆ. ಈ ಯುವ ರಣಧೀರ ಕಂಠೀರವ ಚಿತ್ರದ ಫಸ್ಟ್ ಲುಕ್ ಅಂಡ್ ಟೀಸರ್ ಕೂಡ ಬಿಡುಗಡೆಯಾಗಿ ಕನ್ನಡ ಸಿನಿ ಪ್ರೇಕ್ಷಕರಿಂದ ಮೆಚ್ಚುಗೆ ಕೂಡ ಪಡೆದುಕೊಂಡಿದೆ.

ಯುವರಾಜ್ ಕುಮಾರ್ ಕೊಂಚ ಮಟ್ಟಿಗೆ ತಮ್ಮ ಚಿಕ್ಕಪ್ಪ ಪುನೀತ್ ರಾಜ್ ಕುಮಾರ್ ಅವರಂತೆ ಹೋಲುತ್ತಾರೆ. ಹಾಗಾಗಿ ದೊಡ್ಮನೆಯ ಮುಂದಿನ ಪೀಳಿಗೆಯ ಭರವಸೆಯ ನಟನಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಕೂಡ ಯುವ ರಾಜ್ ಕುಮಾರ್ ಅವರಲ್ಲಿದೆ ಎಂದು ಗಾಂಧಿನಗರ ಹೇಳುತ್ತಿದೆ. ಹಾಗಾಗಿಯೇ ಸಂತೋಷ್ ಆನಂದ್ ರಾಮ್ ಅವರು ಅಪ್ಪು ಅವರಿಗಾಗಿ ಮಾಡಿಕೊಂಡಿದ್ದ ಈ ಕಥೆಗೆ ಯುವ ರಾಜ್ ಕುಮಾರ್ ಅವರೇ ಸೂಕ್ತವಾಗಿರುತ್ತಾರೆ ಎಂದು ಅವರನ್ನ ಪುನೀತ್ ಅವರಿಗಾಗಿ ಮಾಡಿದ ಕಥೆಯಲ್ಲಿ ಕೊಂಚ ಯುವ ಅವರಿಗೆ ಹೊಂದಿಕೆಯಾಗುವಂತೆ ಬದಲಾವಣೆ ಮಾಡಿಕೊಂಡು ಅವರನ್ನೇ ತಮ್ಮ ಮುಂದಿನ ಚಿತ್ರದ ನಾಯಕನನ್ನಾಗಿ ಮಾಡುವ ಯೋಚನೆ ಅಲ್ಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.



ಇನ್ನು ಯುವ ರಾಜ್ ಕುಮಾರ್ ಅವರಿಗೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳುತ್ತಾರೆ ಎಂದು ಹೇಳಲಾಗುತ್ತಿರುವ ಚಿತ್ರಕ್ಕೆ ಹೊಂಬಾಳೆ ಪ್ರೊಡಕ್ಷನ್ ಅಥವಾ ಸ್ವತಃ ಪಿ.ಆರ್.ಕೆ ಪ್ರೊಡಕ್ಷನ್ ಅವರೇ ನಿರ್ಮಾಣದ ಜವಾಬ್ದಾರಿಯನ್ನು ಹೊರಲಿದ್ದಾರೆ ಎಂದು ಮಾಹಿತಿ ಇದೆ. ಇತ್ತ ಸದ್ಯಕ್ಕೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ನವರಸ ನಾಯಕ ಜಗ್ಗೇಶ್ ಅವರೊಟ್ಟಿಗೆ ರಾಘವೇಂದ್ರ ಸ್ಟೋರ್ ಎಂಬ ಹಾಸ್ಯ ಪ್ರಧಾನ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಪುನೀತ್ ರಾಜ್ ಕುಮಾರ್ ಅವರೊಟ್ಟಿಗಿದ್ದ ಆತ್ಮೀಯತೆ ಭಾಂಧವ್ಯವನ್ನು ಮುಂದೆಯೂ ಕೂಡ ದೊಡ್ಮನೆಯೊಂದಿಗೆ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದು, ಇನ್ನು ಮುಂದೆ ತಾನು ಮಾಡುವ ಎಲ್ಲಾ ಸಿನಿಮಾಗಳು ಅಪ್ಪು ಸರ್ ಅವರಿಗೆ ಅರ್ಪಣೆ ಎಂದು ಸಂತೋಷ್ ಆನಂದ್ ರಾಮ್ ಅವರು ಈ ಹಿಂದೆ ಭಾವುಕರಾಗಿ ಹೇಳಿದ್ದರು.