2021 ವರ್ಷದ ಜಾತಕ ರಾಶಿಗಳ ಫಲಾಫಲಗಳಲ್ಲಿ ಈ ಬಾರಿ ತುಲಾ ರಾಶಿಯವರು ಏಪ್ರಿಲ್ ವರೆಗೂ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಇವರಿಗೆ ಸರ್ಪದೋಷ, ಕುಜ ದೋಷ ಇರುವುದರಿಂದ ಇವುಗಳ ಶಾಂತಿ ಮಾಡಿಸುವುದು ಕಡ್ಡಾಯವಾಗಿದೆ. ಇನ್ನು ನೂತನ ವಾಹನ ಖರೀದಿ ಯೋಗವಿದ್ದರೂ ಆತುರಬೇಡ ಏಪ್ರಿಲ್ ನಂತರದಲ್ಲಿ ನೀವು ವಾಹನ ಖರೀದಿಸಬಹುದು. ಏಪ್ರಿಲ್ ಮುಂಚಿನ ದಿನಗಳಲ್ಲಿ ಇವರಿಗೆ ಅಪಘಾತವಾಗುವ ಸಾಧ್ಯತೆ ಇರುತ್ತದೆ. ಆಕಸ್ಮಿಕವಾಗಿ ಅನಾರೋಗ್ಯ ನಿಮ್ಮನ್ನು ಭಾದಿಸುತ್ತದೆ, ಆದ್ದರಿಂದ ನಿಮ್ಮ ಆರೋಗ್ಯದ ಕಡೆ ಗಮನವಹಿಸಬೇಕಾಗಿದೆ. ಇನ್ನು ಉದ್ಯೋಗಸ್ಥರಿಗೆ ಕೆಲಸದಿಂದ ವಜಾ ಆಗುವ ಸಂಧರ್ಭ ಎದುರಾಗುತ್ತದೆ. ಆದ್ದರಿಂದ ನಿಮ್ಮ ಉದ್ಯೋಗದಲ್ಲಿ ಸದಾ ಜಾಗೃತಿಯಿಂದ ಕಾರ್ಯ ನಿರ್ವಹಿಸಿ. ಪತ್ರಕರ್ತರು, ಶಿಕ್ಷಕರಿಗೆ ಅಶುಭವಾಗುತ್ತದೆ. ಮಹಿಳೆಯರಿಗೆ ಸೋದರ ಸಂಬಂಧಿಗಳಿಂದ ಸಹಕಾರ ದೊರೆತು, ಅವರ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತದೆ. ಇನ್ನು ತುಲಾ ರಾಶಿಯ ವ್ಯಕ್ತಿಗಳು ಮನೆ ನಿರ್ಮಾಣ ಮಾಡುತ್ತಿದ್ದರೆ ಅಡತಡೆ ಉಂಟಾಗುತ್ತದೆ.

ಆದರೆ ಏಪ್ರಿಲ್ ಆರರ ನಂತರ ಈ ತುಲಾ ರಾಶಿಯ ನಾಲ್ಕನೇಯ ಮನೆಯಲ್ಲಿ ಗ್ರಹಗತಿಗಳು ಬದಲಾವಣೆಯಾಗಿ ಇವರಿಗೆ ಗುರುಬಲ ದೊರೆಯುತ್ತದೆ. ತದ ನಂತರ ಇವರಿಗೆ ಸಂಪೂರ್ಣ ಶುಭಫಲ ಉಂಟಾಗುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಅಧಿಕ ಲಾಭವಾಗುತ್ತದೆ. ನಿಮ್ಮ ದೋಷ ಸಮಸ್ಯೆಗಳ ಪರಿಹಾರಕ್ಕಾಗಿ ಸೂರ್ಯನಾರಾಯಣ ಪ್ರಾರ್ಥನೆ ಮಾಡಿ ಓಂ ಹ್ರಾಂ ಹಿರಣ್ಯಗರ್ಭಾಯ ನಮಃ ಎಂಬ ಮಂತ್ರ ಪಠನೆ ಮಾಡುವುದರಿಂದ ಶುಭಫಲ ದೊರೆಯುತ್ತದೆ. ಜೊತೆಗೆ ಅಷ್ಟ ಲಕ್ಷ್ಮಿಯ ಸ್ತೋತ್ರಗಳನ್ನು ಪೂಜಿಸಿ, ಲಕ್ಷ್ಮಿಯನ್ನು ಪೂಜಿಸುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ. ಸಾಧ್ಯವಾದರೆ ಪ್ರತಿ ಶುಕ್ರವಾರ ಮುತ್ಥೈದೆಯರಿಗೆ ಹಸಿರು ಸೀರೆಯನ್ನು ದಾನಮಾಡಿದರೆ ನಿಮಗೆ ಲಕ್ಷ್ಮಿಯ ಅನುಗ್ರಹ ಬೇಗ ಸಿಗುತ್ತದೆ. ಇನ್ನು ತುಲಾ ರಾಶಿಯವರಿಗೆ ನೇರಳೆ ಬಣ್ಣ ಮತ್ತು 6, 9 ಈ ಸಂಖ್ಯೆಗಳು ಅದೃಷ್ಟ ತರುತ್ತವೆ.