ಅರಬ್ ದೇಶದಲ್ಲಿ ಸಿಕ್ತು ಜಗತ್ತಿನ ಅತ್ಯಂತ ದೊಡ್ಡ ಕಾರು

ಕಾರು ಪ್ರಿಯನೊಬ್ಬ ತಯಾರಿಸಿದ ಈ ಕಾರು ಇದೀಗ ಅರಬ್ ರಾಷ್ಟ್ರದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಈ ಕಾರಿನಲ್ಲಿರುವ ವಿಶೇಷತೆಗಳನ್ನ ಕಂಡ ಅರಬ್ ದೇಶದ ಕಾರು ಪ್ರಿಯರು ಅಚ್ಚರಿ ವ್ಯಕ್ತಪಡಿಸಿ ಕುತೂಹಲದಿಂದ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಎಲ್ಲರಿಗೂ ಅಚ್ಚರಿ ಅಂದರೆ ಈ ಕಾರಿನಲ್ಲಿ ಕುಳಿತುಕೊಳ್ಳಲು ಏಣೆಯನ್ನೇ ಉಪಯೋಗಿಸಬೇಕಂತೆ. ಏಕೆಂದರೆ ಈ ಕಾರಿನ ಎತ್ತರ ಒಂದು ಮಹಡಿ ಅಷ್ಟು ಎತ್ತರ ಆಗಿದೆಯಂತೆ. ಈ ಮೂಲಕ ಜಗತ್ತಿನ ಅತ್ಯಂತ ಎತ್ತರವಾದ ಕಾರು ಎಂಬ ಹೆಸರಿಗೆ ಪಾತ್ರವಾಗಿದೆ ಈ ಕಾರು. ನಾವು ಸಾಮಾನ್ಯವಾಗಿ ಜಗತ್ತಿನ ಆಟೋ ಮೊಬೈಲ್ ಕ್ಷೇತ್ರದಲ್ಲಿ ತಯಾರಾಗುವ ವಿಭಿನ್ನ ವಿಶಿಷ್ಠ ರೀತಿಯ ಕಾರು, ಸ್ಕೂಟರ್ ಗಳನ್ನ ನೋಡಿರುತ್ತೇವೆ. ಅದರ ಬಗ್ಗೆ ಕೇಳಿರುತ್ತೇವೆ. ಆದರೆ ಅರಬ್ ದೇಶದ ಈ ಕಾರು ಪ್ರೇಮಿಯೊಬ್ಬ ತಾನೇ ತನ್ನ ಕನಸಿನ ಕಾರೊಂದನ್ನ ನಿರ್ಮಿಸಿ ಎಲ್ಲರನ್ನೂ ಚಕಿತಗೊಳಿಸಿದ್ದಾನೆ.

ಜಗತ್ತಿನ ಪ್ರತಿಷ್ಟಿತ ಕಾರುಗಳಲ್ಲಿ ಹಮ್ಮರ್ ಎಚ್ ಒನ್ ಕೂಡ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ಈ ಹಮ್ಮರ್ ಎಚ್.ಒನ್ ಕಾರು ಹೆಚ್ಚಾಗಿ ಯುಎಸ್ ಸೇನೆಯಲ್ಲಿ ಬಳಸಲಾಗುತ್ತದೆ. ರಣರಂಗದಲ್ಲಿ ಹೋರಾಡಲು ಈ ಹಮ್ಮರ್ ಎಚ್. ಒನ್ ಕಾರು ಅಲ್ಲಿನ ಪ್ರದೇಶ ಅಂದರೆ ಅರಬ್ ದೇಶದ ಮರಳು ಗಾಡು ಪ್ರದೇಶದಲ್ಲಿ ಚಲಾಯಿಸಲು ಇದು ಹೆಚ್ಚು ಸೂಕ್ತ ಮತ್ತು ಸಾಮರ್ಥ್ಯ ಹೊಂದಿರುವ ಸಮರ್ಪಕವಾಗಿ ನಿರ್ವಹಿಸಬಲ್ಲ ಕಾರ್ ಇದಾಗಿದೆ. ಹಾಗಾಗಿಯೇ ಈ ಹಮ್ಮರ್ ಕಾರನ್ನು ಹೆಚ್ಚಾಗಿ ಬಳಸುತ್ತಾರೆ. ಈ ಹಮ್ಮರ್ ಕಾರಿನ ಅಭಿಮಾನಿಯೊಬ್ಬ ಇದೇ ಕಾರನ್ನು ತನ್ನ ವಿಭಿನ್ನ ಕಲ್ಪನೆಯಲ್ಲಿ ಹೊಸ ವಿನ್ಯಾಸ ಕೊಟ್ಟು ಅದಕ್ಕೊಂದಷ್ಟು ಅಡಿಷನಲ್ ಆಗಿ ಫೀವರ್ ಆಡ್ ಮಾಡಿದ್ದಾನೆ.

ತನ್ನ ಯೋಜನೆಯಂತೆ ನಿರ್ಮಿತ ಆಗಿರುವ ಈ ಹಮ್ಮರ್ ಕಾರಿಗೆ ಎಚ್ ಒನ್ ಎಕ್ಸ್ ಎಂದು ನಾಮಕರಣ ಮಾಡಿದ್ದು, ಈ ಹಮ್ಮರ್ ಎಚ್.ಒನ್ ಎಕ್ಸ್ ಕಾರು 6.6 ಮೀಟರ್ ಹೊಂದಿದ್ದು, ಹದಿನಾಲ್ಕು ಮೀಟರ್ ಉದ್ದ ಮತ್ತು ಆರು ಮೀಟರ್ ಅಗಲವನ್ನೊಂದಿದೆ. ಇನ್ನು ಅಷ್ಟೇ ಅಲ್ಲದೇ ಇದರಲ್ಲಿ ಬೃಹತ್ ಎಂಜಿನ್ ಅನ್ನ ಅಳವಡಿಸಿಲಾಗಿದೆ. ಕಾರಿನ ಒಳಗೆ ಮನೆಯಂತೆ ವಿನ್ಯಾಸ ಮಾಡಿದ್ದು ಪ್ರತ್ಯೇಕವಾದ ಕೋಣೆಗಳು, ಶೌಚಾಲಯ, ಆರಾಮದಾಯಕವಾಗಿ ಕುಳಿತುಕೊಳ್ಳುವ ಹಾಗೆ ಸೀಟಿನ ನಡುವೆ ಜಾಗವನ್ನು ಕೂಡ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ.

ವಿಶೇಷ ಅಂದರೆ ಕಾರಿನಲ್ಲಿ ಕುಳಿತುಕೊಳ್ಳಲು ಈ ಕಾರಿಗೆ ಅಂತಾನೇ ಪ್ರತ್ಯೇಕವಾದ ಏಣಿಯೊಂದನ್ನ ಇರಿಸಲಾಗಿದೆ. ಏಕೆಂದರೆ ಈ ಕಾರು ಎತ್ತರವಿಗಿದ್ದು ಡೋರ್ ಗಳು ಕೂಡ ಸುಲಭವಾಗಿ ಕೈಗೆ ಎಟುಕುವಂತೆ ಇರದೇ ಎತ್ತರದಲ್ಲಿರುವ ಕಾರಣ ಏಣಿಯನ್ನು ಕೂಡ ಇರಿಸಲಾಗಿದೆ. ಈ ಕಾರು ತಯಾರು ಮಾಡಲು ಲಕ್ಷಾಂತರ ರೂಗಳ ಡಾಲರ್ ವೆಚ್ಚವಾಗಿದೆಯಂತೆ. ಈ ಹಮ್ಮರ್ ಎಚ್ ಒನ್ ಎಕ್ಸ್ ಥ್ರೀ ಕಾರು ಇದೀಗ ಅರಬ್ ದೇಶದಲ್ಲಿ ಎಲ್ಲೆಡೆ ಭಾರಿ ಪ್ರಸಿದ್ದಿಯಾಗಿದ್ದು, ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಎಂದು ತಿಳಿಸಿದ್ದಾರೆ. ಈ ಬೃಹತ್ ಕಾರನ್ನು ವೀಕ್ಷಣೆ ಮಾಡಿದವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

%d bloggers like this: