ಅರಬ್ ದೇಶಗಳಲ್ಲಿಯೂ ಎಲ್ಲಾ ಚಿತ್ರಗಳನ್ನು ಹಿಂದೆ ಹಾಕಿ ಮೇಲುಗೈ ಸಾಧಿಸಿದ ಜೇಮ್ಸ್ ಚಿತ್ರ

ಮಾರ್ಚ್ 17ರಂದು ಭಾರತದಾದ್ಯಂತ ರಿಲೀಸ್ ಆದ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಜೇಮ್ಸ್ ಚಿತ್ರವು ಕರ್ನಾಟಕದಲ್ಲಿ ದಾಖಲೆಯ ಮೊತ್ತವನ್ನು ಗಳಿಕೆ ಮಾಡಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಹೊಸ ದಾಖಲೆಯನ್ನು ನಮ್ಮ ಕನ್ನಡ ಸಿನಿಮಾ ಬರೆಯುತ್ತಿದೆ. ಹೌದು ಈ ಬಗ್ಗೆ ಮಾತನಾಡಿದ ಸಿನಿಮಾ ಬಾಕ್ಸಾಫೀಸ್ ವಿಶ್ಲೇಷಕ ರಮೇಶ್ ಬಾಲ ಅವರು, ಜೇಮ್ಸ್ ಚಿತ್ರ ಅರಬ್ ದೇಶಗಳಲ್ಲಿ ಹಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಹೌದು ಯುನೈಟೆಡ್ ಸ್ಟೇಟ್ಸ್ ಆಫ್ ಅರಬ್ ನಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳಲ್ಲಿ ಕನ್ನಡದ ಜೇಮ್ಸ ಸಿನಿಮಾ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ.

ಮೊದಲ ಸ್ಥಾನದಲ್ಲಿ ಹಾಲಿವುಡ್ ನ ದಿ ಬ್ಯಾಟ್ ಮ್ಯಾನ್ ಇದೆ. ಕನ್ನಡದ ಸಿನಿಮಾವೊಂದು ಹಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇದೆಲ್ಲಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪವರ್ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ದುಬೈ ಹಾಗೂ ಅರಬ್ ದೇಶಗಳಲ್ಲಿ ಭಾರತದ, ಅದರಲ್ಲಿಯೂ ದಕ್ಷಿಣ ಭಾರತದ ಸಿನಿಮಾಗಳಿಗೆ ಬೇಡಿಕೆ ಚೆನ್ನಾಗಿದೆ. ಆದರೆ ದಕ್ಷಿಣ ಭಾರತದ ಸಿನಿಮಾಗಳಿಗೆ ಹೋಲಿಸಿದರೆ ಕನ್ನಡದ ಬೇಡಿಕೆ ಸ್ವಲ್ಪ ಕಡಿಮೆ ಇತ್ತು. ಆದರೆ ಜೇಮ್ಸ್ ಚಿತ್ರದಿಂದ ಎಲ್ಲವೂ ಬದಲಾಗಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ವಿದೇಶದ ಗಳಿಕೆಯಲ್ಲಿ ಟಾಪ್ ಎರಡನೇ ಸ್ಥಾನಕ್ಕೆ ಏರಿದ್ದು ಬಹಳಷ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಪುನೀತ್ ರಾಜಕುಮಾರ್ ಅವರ ಜೇಮ್ಸ್ ಸಿನಿಮಾ ಭಾರತದಲ್ಲಿಯೂ ಎಲ್ಲಕಡೆ ರಿಲೀಸ್ ಆಗಿತ್ತು.

ವಿದೇಶದಲ್ಲಿ ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್, ಯುಎಇ, ಹಾಗೂ ಇತರೆ ಯುರೋಪ್ ದೇಶಗಳಲ್ಲಿ ಬಿಡುಗಡೆಯಾಗಿತ್ತು. ಬ್ರಿಟನ್ನಿನಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಜೇಮ್ಸ್ ಸಿನಿಮಾವನ್ನು ಕನ್ನಡ ಟಾಕೀಸ್ ಬಳಗದವರು ಯುರೋಪಿನ ದೇಶಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಸಿಂಗಪೂರ್ ನಲ್ಲಿ ಸ್ಯಾಂಡಲ್ವುಡ್ ಎಂಟರ್ಟೈನ್ಮೆಂಟ್ ಸಿಂಗಾಪುರ್ ಅವರು ಜೇಮ್ಸ್ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸುಮಾರು 150ಶೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡದ ನಟರೊಬ್ಬರ ಸಿನಿಮಾ ಆಸ್ಟ್ರೇಲಿಯಾದಲ್ಲಿ 150ಶೋ ಪ್ರದರ್ಶನವಾಗುತ್ತಿರುವುದು ಇದೇ ಮೊದಲ ಬಾರಿಗೆ. ಇದರ ಬಗ್ಗೆ ಕೆನಡಾದಲ್ಲಿ ನೆಲೆಸಿರುವ ಅಪ್ಪು ಅವರ ಅಭಿಮಾನಿ ಹಾಗೂ ಅಲ್ಲಿನ ಕನ್ನಡ ಸಿನಿಮಾಗಳ ವಿತರಕ ಕಿರಣ್ ಮಾಹಿತಿ ನೀಡಿದ್ದರು.

ಕರ್ನಾಟಕದಲ್ಲಿ ದಾಖಲೆ ಮಟ್ಟದ ಗಳಿಕೆಯನ್ನು ಮಾಡಿರುವ ಜೇಮ್ಸ್ ಚಿತ್ರ ಮೊದಲ ದಿನ 32.70 ಕೋಟಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ 18 ಕೋಟಿ ಹಾಗೂ ಮೂರನೇ ದಿನ 9ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ವಿದೇಶಗಳಲ್ಲಿ ಸಿನಿಮಾ ಗಳಿಕೆಯ ವಿಚಾರಕ್ಕೆ ಬಂದರೆ ಎರಡನೇ ಸ್ಥಾನದಲ್ಲಿರುವ ಜೇಮ್ಸ್ ಚಿತ್ರದ ನಂತರ ಮೂರನೇ ಸ್ಥಾನದಲ್ಲಿ ಹಾಲಿವುಡ್ ಸಿನಿಮಾ ಅಂಬುಲೆನ್ಸ್, ನಾಲ್ಕನೇ ಸ್ಥಾನದಲ್ಲಿ ಬಾಲಿವುಡ್ನ ಬಚ್ಚನ್ ಪಾಂಡೆ, ಐದನೇ ಸ್ಥಾನದಲ್ಲಿ ಹಾಲಿವುಡ್ನ ಟರ್ನಿಂಗ್ ರೆಡ್, ಆರನೇ ಸ್ಥಾನದಲ್ಲಿ ಡಿ ಬ್ಯಾಡ್ ಗೈಸ್, ಏಳನೇ ಸ್ಥಾನದಲ್ಲಿ ಮಲಯಾಳಂನ ಭೀಷ್ಮಪರ್ವಮ್, ಎಂಟನೇ ಸ್ಥಾನದಲ್ಲಿ ಹಾಲಿವುಡ್ ನ ಅನ್ ಕಾರ್ಟೆಡ್, 9ನೇ ಸ್ಥಾನದಲ್ಲಿ ಗಂಗೂಬಾಯಿ ಕಾಠಿಯಾವಾಡಿ, 10ನೇ ಸ್ಥಾನದಲ್ಲಿ ಮಲಯಾಳಂನ ದಿ ನೈಟ್ ಡ್ರೈವ್ ಸಿನಿಮಾ ಇವೆ. ಜೇಮ್ಸ್ ಸಿನಿಮಾ ದೊಡ್ಡ ದೊಡ್ಡ ಹಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿ 2ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ.

%d bloggers like this: