ಅರಮನೆ ಅಂತಹ ಮನೆ ಕಟ್ಟಿಸಿ ಮನೆಗೆ ತಂದೆಯ ಹೆಸರು ಇಟ್ಟ ನಟ

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದು ಸುಂದರವಾದ ಮನೆ ಕಟ್ಟಬೇಕು ಎಂಬ ಮಹಾದಾಸೆಯನ್ನ ಹೊಂದಿರುತ್ತಾರೆ. ಅಂತೆಯೇ ಇದೀಗ ಹಿಂದಿ ಚಿತ್ರರಂಗದ ಸುಪ್ರಸಿದ್ದ ನಟರೊಬ್ಬರು ಬೃಹತ್ ಬಂಗಲೆ ಕಟ್ಟಿಸಿದ್ದಾರೆ. ಹೌದು ಈ ಸುಂದರವಾದ ಬಂಗಲೆಗೆ ತನ್ನ ತಂದೆಯ ತ್ಯಾಗದ ಅರ್ಥವಾಗಿ ಅವರ ಹೆಸರನ್ನೇ ಇಟ್ಟಿದ್ದಾರೆ. ಹೌದು ಬಾಲಿವುಡ್ ಸ್ಟಾರ್ ನಟರಾದಂತಹ ನವಾಜುದ್ದೀನ್ ಸಿದ್ದಿಕಿ ಅವರು ಮುಂಬೈ ನಗರದಲ್ಲಿ ಬೃಹತ್ ಬಂಗಲೆಯನ್ನ ನಿರ್ಮಾಣ ಮಾಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ನಟ ನವಾಜುದ್ದಿನ್ ಸಿದ್ದಿಕಿ ಅವರದ್ದು ಬಹುದೊಡ್ಡ ಹೆಸರು. ನವಾಜುದ್ದೀನ್ ಸಿದ್ದಿಕಿ ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನಟನಾ ತರಬೇತಿ ಪಡೆಯುತ್ತಾರೆ. ತದ ನಂತರ ಮುಂಬೈಗೆ ತೆರಳಿ ಬಿಟೌನ್ ನಲ್ಲಿ ಅವಕಾಶಕ್ಕಾಗಿ ಹಂಬಲಿಸುತ್ತಾರೆ.

ಅದರಂತೆ 1999ರಲ್ಲಿ ಅಮೀರ್ ಖಾನ್ ನಟನೆಯ ಸರ್ಫರೋಶ್ ಸಿನಿಮಾದಲ್ಲಿ ಪುಟ್ಟದೊಂದು ಪಾತ್ರ ಮಾಡುತ್ತಾರೆ. ಈ ಪಾತ್ರದ ಮೂಲಕ ಬಾಲಿವುಡ್ ಮಂದಿಯ ಕಣ್ಣಿಗೆ ಬೀಳುತ್ತಾರೆ. ಇದಾದ ಬಳಿಕ ರಾಮ್ ಗೋಪಾಲ್ ವರ್ಮಾ ಅವರ ಶೂಲ್ ಚಿತ್ರ, ರಾಜ್ ಕುಮಾರ್ ಹಿರಾನಿ ಅವರ ಮುನ್ನ ಭಾಯ್ ಎಂಬಿಬಿಎಸ್ ಪದವಿ ಪಡೆಯುತ್ತಾರೆ. ಹೀಗೆ ಹಂತ ಹಂತವಾಗಿ ಒಂದಷ್ಟು ಸ್ಟಾರ್ ನಿರ್ದೇಶಕರು ಮತ್ತು ನಟರ ಸಂಪರ್ಕ ಬೆಳೆಸಿಕೊಂಡು ಅವಕಾಶ ಪಡೆಯುತ್ತಾರೆ. ನವಾಜುದ್ದೀನ್ ಸಿದ್ದಿಕಿ ಅವರ ಅಭಿನಯಕ್ಕೆ ಮಾರು ಹೋದವರೇ ಇಲ್ಲ. ಅಷ್ಟರ ಮಟ್ಟಿಗೆ ಅವರು ವಿಭಿನ್ನವಾಗಿ ನಟಿಸುತ್ತಾರೆ.

ನವಾಜುದ್ದಿನ್ ಸಿದ್ದಿಕಿ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾಗಳು ಅಂದರೆ ಪತಂಗ್, ಬ್ಲ್ಯಾಕ್ ಫ್ರೈಡೇ, ದಿ ಗ್ಯಾಂಗ್ಸ್ ಆಫ್ ವಾಸೇಪುರ್, ಡ್ಯುಯಾಲಜಿ ಮತ್ತು ರಾಮನ್ ರಾಘವ್ 2.0, ಭಜರಂಗಿ ಬಾಯಿಜಾನ್, ದಿ ಮೌಂಟೆನ್ ಮ್ಯಾನ್, ರಯೀಸ್, ಮೋತಿಚುರ್ ಚಕ್ನಾಚೂರ್, ರಾತ್ ಅಕಾಲಿ ಹಾ ಸಿನಿಮಾಗಳು. ಇನ್ನು ನಟ ನವಾಜುದ್ದಿನ್ ಸಿದ್ದಿಕಿ ಅವರು ಇದೀಗ ಮುಂಬೈನಲ್ಲಿ ತನ್ನ ಕನಸಿನ ಮನೆಯನ್ನ ನಿರ್ಮಾಣ ಮಾಡಿದ್ದಾರೆ‌. ಈ ಬಂಗಲೆ ನಿರ್ಮಾಣ ಮಾಡಲು ಮೂರು ವರ್ಷಗಳ ಸಮಯ ಹಿಡಿದಿದೆಯಂತೆ. ಈ ಮನೆಗೆ ತಮ್ಮ ತಂದೆ ನವಾಬುದ್ದೀನ್ ಸಿದ್ದಿಕಿ ಅವರ ಹೆಸರು ಇಟ್ಟಿದ್ದಾರೆ. ನವಾಬ್ ಅವರು 2015ರಲ್ಲಿ ನಿಧನವೊಂದಿದ್ದಾರೆ.

%d bloggers like this: