ಅರಣ್ಯವನ್ನು ಬೆಳೆಸಲು 1080 ಎಕರೆ ಭೂಮಿ ದತ್ತು ಪಡೆದುಕೊಂಡ ದಕ್ಷಿಣ ಭಾರತದ ನಟ

ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ತಮ್ಮ ಹುಟ್ಟುಹಬ್ಬವನ್ನು ಇತ್ತೀಚಿಗೆ ಆಚರಿಸಿಕೊಂಡರು. ವಿಶೇಷವೆಂದರೆ ತೆಲುಗು ಸೂಪರ್ ಸ್ಟಾರ್ ನಾಗರ್ಜುನ ಅಕ್ಕಿನೇನಿ ಅವರು ವಿಶೇಷವಾದ ರೀತಿಯಲ್ಲಿ ಮುಖ್ಯಮಂತ್ರಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳು ಕೋರಿದ್ದಾರೆ. ಈ ಹಿಂದೆ ನಾಗಾರ್ಜುನ ಅವರು ಮುಖ್ಯಮಂತ್ರಿಗಳಿಗೆ ಒಂದು ಮಾತನ್ನು ಕೊಟ್ಟಿದ್ದರಂತೆ, ಅವರ ಹುಟ್ಟುಹಬ್ಬದ ದಿನ ಕೊಟ್ಟ ಮಾತಿನಂತೆ ನಾಗಾರ್ಜುನ ಅವರು ನಡೆದುಕೊಂಡಿದ್ದಾರೆ. ಅದೇನು ಎಂದು ಯೋಚಿಸುತ್ತಿದ್ದೀರಾ ಮುಂದೆ ಓದಿ. ಈ ಹಿಂದೆ ಡಿಸೆಂಬರ್ 2021 ರಲ್ಲಿ ನಾಗಾರ್ಜುನ ಅವರು ಬಿಗ್ ಬಾಸ್ ತೆಲುಗುವಿನಲ್ಲಿ ಒಂದು ಸಾವಿರ ಎಕರೆ ಅರಣ್ಯವನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು.

ಮತ್ತು ಪ್ರತಿಯೊಬ್ಬರೂ 3 ಸಸಿಗಳನ್ನು ನೆಟ್ಟು 2021 ಕ್ಕೆ ವಿದಾಯ ಹೇಳುವಂತೆ ಮನವಿ ಮಾಡಿದ್ದರು. ನಾಗಾರ್ಜುನ ಅವರು ತಾವು ನುಡಿದ ಮಾತಿನಂತೆ ತೆಲಂಗಾಣದ ಮೇಡಚಲ್ ಜಿಲ್ಲೆಯ ಚೆಂಗಿಚರ್ಲ ದಲ್ಲಿ 1080 ಎಕರೆ ಅರಣ್ಯ ಭೂಮಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಮಾನವರ ಅತಿಯಾದ ಆಸೆ ಮತ್ತು ಅತಿಯಾದ ಬಳಕೆಯಿಂದ ನಮ್ಮ ಸುತ್ತಲಿನ ನೈಸರ್ಗಿಕ ಪರಿಸರ ಹಾಳಾಗುತ್ತಿದೆ. ಅರಣ್ಯಗಳನ್ನು ಕಡೆದು ಜನರು ತಮಗೆ ವಾಸಿಸಲು ಯೋಗ್ಯವಾದ ನಗರಗಳನ್ನು ನಿರ್ಮಿಸುತ್ತಿದ್ದಾರೆ.

ಆದರೆ ವಾಸ ಸ್ಥಾನಕ್ಕಿಂತ ನಾವು ಬದುಕಿ ಉಸಿರಾಡಲು ಉತ್ತಮವಾದ ಗಾಳಿ ಅವಶ್ಯಕ ಎಂಬುದನ್ನು ಇಂದಿನ ಮಾನವ ಮರೆಯುತ್ತಿದ್ದಾನೆ. ಹೀಗಾಗಿ ಉತ್ತಮ ಆರೋಗ್ಯ ಹಾಗೂ ಉತ್ತಮ ಪರಿಸರ ನಮ್ಮ ಜವಾಬ್ದಾರಿ. ಇಂತಹದ್ದೇ ಒಂದು ಒಳ್ಳೆಯ ಸಂದೇಶವನ್ನು ನಾಗಾರ್ಜುನ ಅವರು ಜನತೆಗೆ ತಿಳಿಸಿದ್ದಾರೆ. ತಾವೇ ಸ್ವತಹ 1080 ಎಕರೆ ಅರಣ್ಯ ಭೂಮಿಯನ್ನು ದತ್ತು ತೆಗೆದುಕೊಂಡು ಇತರರಿಗೆ ಸ್ಫೂರ್ತಿಯನ್ನು ತುಂಬಿದ್ದಾರೆ. ನಾಗಾರ್ಜುನ ಅವರು ಕೂಡ ಗ್ರೀನ್ ಇಂಡಿಯಾ ಚಾಲೆಂಜ್ ಯೋಜನೆಯ ಸ್ಫೂರ್ತಿಯೊಂದಿಗೆ ಈ ಕೆಲಸವನ್ನು ಮಾಡಿದ್ದಾರೆ.

ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಹುಟ್ಟುಹಬ್ಬದ ಪ್ರಯುಕ್ತ, ನಾಗಾರ್ಜುನ ಅವರು ತಮ್ಮ ಪತ್ನಿ ಅಮಲಾ ಅಕ್ಕಿನೇನಿ, ಪುತ್ರ ನಾಗಚೈತನ್ಯ ಹಾಗೂ ಇತರ ಕುಟುಂಬ ಸದಸ್ಯರೊಂದಿಗೆ ಅರಣ್ಯವನ್ನು ಬೆಳೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಗಾರ್ಜುನ ಅವರ ತಂದೆ ಅಕ್ಕಿನೀನಿ ನಾಗೇಶ್ವರ್ ರಾವ್ ಅವರ ಸ್ಮರಣಾರ್ಥವಾಗಿ ಅರಣ್ಯಪ್ರದೇಶವನ್ನು ಎ ಎನ್ ಆರ್ ಎಂಬ ಹೆಸರಿನಲ್ಲಿ ನಗರ ಅರಣ್ಯ ಉದ್ಯಾನವನವನ್ನಾಗಿ ನಿರ್ಮಿಸಲಾಗುತ್ತಿದೆ ಎಂದು ನಾಗಾರ್ಜುನ ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಒಟ್ಟಾರೆಯೆಯಾಗಿ ಹೇಳುವುದಾದರೆ ನಟ ಅಕ್ಕಿನೇನಿ ನಾಗಾರ್ಜುನ್ ಅವರು ಮಾಡಿದ ಈ ಕಾರ್ಯ ಹಾಗು ಅವರು ಪರಿಸರದ ಬಗ್ಗೆ ತೋರಿದ ಕಾಳಜಿ ನಿಜಕ್ಕೂ ಮಾದರಿ ಎಂದರೆ ತಪ್ಪಾಗಲಿಕ್ಕಿಲ್ಲ.

%d bloggers like this: