ಅಷ್ಟೆಲ್ಲಾ ಪ್ರಚಾರ ಮಾಡಿದ್ರೂ ರಣವೀರ್ ಸಿಂಗ್ ಅವರ ’83’ ಚಿತ್ರ ಗಳಿಸಿದ ಹಣ ಎಷ್ಟು ಗೊತ್ತೇ

ಬಾಲಿವುಡ್ ನ ಸ್ಟಾರ್ಸ್ ನಟ ರಣ್ ವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಜೋಡಿಯ ಬಹು ನಿರೀಕ್ಷಿತ ಸಿನಿಮಾವಾಗಿದ್ದ 83 ಸಿನಿಮಾ ಇದೇ ಡಿಸೆಂಬರ್ 24 ರಂದು ಪಂಚ ಭಾಷೆಗಳಲ್ಲಿ ದೇಶಾದ್ಯಂತ ರಿಲೀಸ್ ಆಗಿದೆ. ಕ್ರಿಕೆಟ್ ಭಾರತ ತಂಡದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನಾಧಾರಿತ ಈ 83 ಚಿತ್ರ ದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. 83 ಸಿನಿಮಾದ ಬಗ್ಗೆ ಉತ್ತಮ ಮೆಚ್ಚುಗೆಯ ಮಾತುಗಳು ಕೇಳಿ ಬಂದರು ಕೂಡ ಗಳಿಕೆಯಲ್ಲಿ ಹೇಳಿ ಕೊಳ್ಳವಷ್ಟು ದಾಖಲೆ ಮಾಡಿಲ್ಲ. ಇದಕ್ಕೆ ಮುಖ್ಯ ಕಾರಣ ಟಾಲಿವುಡ್ ಸ್ಟಾರ್ ನಟರಾದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾದ ಪ್ರಬಲ ಪೈಪೋಟಿ ಎನ್ನುತ್ತಿದ್ದಾರೆ ಸಿನಿ ಪಂಡಿತರು.

ಹೌದು 1983 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಭಾರತ ವಿಶ್ವಕಪ್ ಗೆದ್ದ ರೋಚಕ ಕಥೆಯನ್ನು 83 ಸಿನಿಮಾದಲ್ಲಿ ಎಣೆಯಲಾಗಿದ್ದು, ನಟ ರಣ್ ವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪತ್ನಿ ರೋಮಿ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ. ನಿರ್ದೇಶಕ ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ 83 ಸಿನಿಮಾಗೆ ಸ್ವತಃ ಕಬೀರ್ ಖಾನ್ ಸೇರಿದಂತೆ ನಟಿ ದೀಪಿಕಾ ಪಡುಕೋಣೆ ಕೂಡ ಬಂಡವಾಳ ಹೂಡಿದ್ದಾರೆ. ಕನ್ನಡ ಅವತರಣಿಕೆಯ 83 ಸಿನಿಮಾ ವಿತರಣೆಯ ಹಕ್ಕನ್ನು ಕಿಚ್ಚ ಸುದೀಪ್ ಅವರು ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಇನ್ನು ಕ್ರಿಕೆಟ್ ಲೋಕದ ದಿಗ್ಗಜ ಕಪಿಲ್ ದೇವ್ ಅವರ ಯಶೋಗಾಥೆಯಂತ್ತಿರುವ ಈ 83 ಸಿನಿಮಾದ ಮುಖ್ಯಭೂಮಿಕೆಯಲ್ಲಿ ಜೀವಾ, ತಾಹೀರ್ ರಾಜ್ ಬಾಶಿನ್ ಕಾಣಿಸಿಕೊಂಡಿದ್ದಾರೆ‌. ಈ ಕ್ರೀಡಾಧಾರಿತ 83 ಸಿನಿಮಾಗೆ ಜ್ಯೂಲಿಯಸ್ ಪ್ಯಾಕಿಯಮ್ ಅವರ ರಾಗ ಸಂಯೋಜನೆ ಚಿತ್ರಕ್ಕೆ ಪ್ಲಸ್ ಆಗಿದೆ. ಚಿತ್ರ ನೋಡಿದ ಸಿನಿ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸದರು ಕೂಡ ಚಿತ್ರ ಗಳಿಕೆಯಲ್ಲಿ ಹಿಂದುಳಿದಿದೆ ಎನ್ನಬಹುದು. ಡಿಸೆಂಬರ್ 24.ರಂದು ಬಿಡುಗಡೆಯಾದ ಈ 83 ಸಿನಿಮಾ ಮೊದಲ ದಿನ ಹದಿನಾರು ಕೋಟಿ ಗಳಿಕೆ ಕಂಡಿತು.

ಎರಡನೇ ದಿನ ಅಂದರೆ 25 ಕ್ರಿಸ್ ಮಸ್ ಹಬ್ಬ ಹಿನ್ನೆಲೆ ಶನಿವಾರ ರಜೆ ಇದ್ದ ಕಾರಣ ಅಂದು ದುಪ್ಪಟ್ಟು ಕಲೆಕ್ಷನ್ ಆಗುತ್ತದೆ ಎಂದು ಚಿತ್ರತಂಡ ನಿರೀಕ್ಷೆ ಮಾಡಿತ್ತು. ಆದರೆ ಚಿತ್ರತಂಡದ ಆಸೆಯಂತೆ ಆಗದೆ ಶನಿವಾರ ಕೂಡ ಕೇವಲ ಹದಿನಾರು ಕೋಟಿ ಕಲೆಕ್ಷನ್ ಮಾಡುವಲ್ಲಿ ಮಾತ್ರ ಸಫಲವಾಯಿತು 83 ಸಿನಿಮಾ. ಆದರೆ ಇದೇ ರೋಹಿತ್ ಶೆಟ್ಟಿ ನಿರ್ದೇಶನದ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಜೋಡಿಯ ಹಿಂದಿ ಸಿನಿಮಾ ಸೂರ್ಯವಂಶಿ ಫಸ್ಟ್ ಡೇ ನಲ್ಲೇ ಬರೋಬ್ಬರಿ 26.29 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿಕೊಂಡಿತ್ತು. ಅದೇ ರೀತಿಯಾಗಿ ಹಾಲಿವುಡ್ ಸ್ಪೈಡರ್ ಮ್ಯಾನ್ ಚಿತ್ರ 32.67 ಕೋಟಿ ಕಲೆಕ್ಷನ್ ಮಾಡಿ ಭಾರತೀಯ ಸಿನಿ ಮಾರುಕಟ್ಟೆಯಲ್ಲಿ ಉತ್ತಮವಾಗಿ ಹಣ ಮಾಡಿತ್ತು. ಆದರೆ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾವಾಗಿದ್ದ 83 ಸಿನಿಮಾ ಉತ್ತಮ ಚಿತ್ರ ಎಂದು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡರು ಕೂಡ ಕಲೆಕ್ಷನ್ ನಲ್ಲಿ ನಿರ್ದಿಷ್ಟ ಟಾರ್ಗೇಟ್ ರೀಚ್ ಆಗದೇ ಇರುವುದು ಚಿತ್ರತಂಡಕ್ಕೆ ಬೇಸರ ಮೂಡಿಸಿದೆ.

%d bloggers like this: