ಅತಿ ಹೆಚ್ಚು ಮಾರಾಟದಲ್ಲಿ ಪ್ರತಿಷ್ಠಿತ ಕಾರು ಕಂಪನಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಬಂದ ಭಾರತದ ದೈತ್ಯ ಕಾರು ಕಂಪನಿ

ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರತಿಷ್ಟಿತ ಕಾರು ಸಂಸ್ಥೆಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಹಬ್ಬ ಹರಿದಿನಗಳಲ್ಲಿ ಬಹುತೇಕ ಜನರು ಕಾರು ಖರೀದಿ ಮಾಡುವುದು ಸಾಮಾನ್ಯವಾಗಿರುತ್ತದೆ. ಅದರಂತೆಯೇ ಹೊಸ ವರ್ಷದ ಹಿನ್ನೆಲೆಯಲ್ಲಿ ಕಾರು ಪ್ರಿಯರು ತಮ್ಮಿಷ್ಟದ ಕಾರುಗಳ ಖರೀದಿಯಲ್ಲಿ ತೊಡಗಿಕೊಳ್ಳುತ್ತಾರೆ. ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುವ ಕಾರುಗಳು ಅಂದರೆ ಪ್ರಮುಖವಾಗಿ ಮಾರುತಿ ಸುಜುಕಿ ಕಂಪನಿಯ ಕಾರುಗಳು. ಅತಿ ಹೆಚ್ಚು ಗ್ರಾಹಕರನ್ನ ಹೊಂದಿರುವ ಮಾರುತಿ ಸುಜುಕಿ ಕಂಪನಿಯ ಕಾರಗಳು ಉತ್ತಮ ಗುಣಮಟ್ಟ ಫೀಚರ್, ಮೈಲೇಜ್, ಆಕರ್ಷಕ ವಿನ್ಯಾಸ ವಿವಿಧ ರೀತಿಯ ವೇರಿಯೆಂಟ್ಸ್ ಗಳ ಮೂಲಕ ಗ್ರಾಹಕರ ನೆಚ್ಚಿನ ಕಂಪನಿಯಾಗಿದೆ. ಇದೇ ರೀತಿಯಾಗಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪೈಕಿ ಹುಂಡೈ ಕಂಪನಿಯ ಕಾರ್ ಗಳು ಇದಾದ ಎರಡನೇ ಸ್ಥಾನದಲ್ಲಿತ್ತು.

ಇದೀಗ ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳು ಹುಂಡೈ ಕಂಪನಿಯನ್ನ ಸೈಡ್ ಲೈನ್ ಮಾಡಿ ಎರಡನೇ ಸ್ಥಾನಕ್ಕೇರಿದೆ. ಕಳೆದ ಎರಡು ಮೂರು ತಿಂಗಳಿಂದ ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳು ಭರ್ಜರಿಯಾಗಿ ಮಾರಾಟವಾಗುತ್ತಿದೆ. ಭಾರತದಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳು ಕಳೆದ ಹತ್ತು ವರ್ಷಗಳಲ್ಲಿ ಮಾಡದಂತಹ ಸಾಧನೆಯನ್ನ ಕಳೆದ ಡಿಸೆಂಬರ್ ತಿಂಗಳವೊಂದರಲ್ಲೇ ಮಾಡಿದೆ. ಅಂದರೆ ಡಿಸೆಂಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳು ಅತ್ಯಧಿಕ ಮಾರಾಟ ಕಂಡಿದೆ. ಅದೂ ಕೂಡ ಕಾರುಗಳ ಬೆಲೆ ಏರಿಕೆ ಆಗಿದ್ದರು ಕೂಡ ಕೋವಿಡ್ ಸಂಕಷ್ಟದ ದಿನಗಳಲ್ಲಿಯೂ ಸಹ ಉತ್ತಮವಾಗಿ ವಹಿವಾಟು ಮಾರಾಟ ಮಾಡಿರುವ ಟಾಟಾ ಮೋಟಾರ್ಸ್ ಹುಂಡೈ ಕಂಪನಿಯ ಕಾರುಗಳ ಮಾರಾಟಕ್ಕಿಂತ ಅತ್ಯಧಿಕ ಕಾರುಗಳ ಮಾರಾಟ ಮಾಡಿ ಉತ್ತಮ ಲಾಭಾಂಶ ಗಳಿಸಿದೆ.

ವರದಿಯ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ವಿವಿಧ ವೇರಿಯೆಂಟ್ಸ್ ಕಾರುಗಳು ಸೇರಿ ಒಟ್ಟಾರೆ ಬರೋಬ್ಬರಿ 35,299 ಕಾರುಗಳು ಮಾರಾಟವಾಗಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಅಂದರೆ 2020 ಡಿಸೆಂಬರ್ ತಿಂಗಳಿನಲ್ಲಿ ಇದೇ ಟಾಟಾ ಮೋಟಾರ್ಸ್ ಕಂಪನಿಯ 23,546 ಕಾರುಗಳು ಮಾರಾಟವಾಗಿದ್ದವು಼ . ಅದಕ್ಕಿಂತ ಮುನ್ನ 2019 ರ ಡಿಸೆಂಬರ್ ತಿಂಗಳಿನಲ್ಲಿ 11,753 ಟಾಟಾ ಕಾರುಗಳು ಮಾರಾಟವಾಗಿದ್ದವು. ಹೀಗೆ ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳು ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದ್ದು, ಈ ಕಳೆದ ವರ್ಷ 2021 ರಲ್ಲಿ ಒಟ್ಟಾರೆಯಾಗಿ ಬರೋಬ್ಬರಿ 3,31,178 ಕಾರುಗಳು ಮಾರಾಟವಾಗಿವೆ.

ಟಾಟಾ ಮೋಟಾರ್ಸ್ ಕಾರುಗಳು ಸುರಕ್ಷಿತವಾಗಿದ್ದು ಸೇಫ್ಟಿ ರೇಟಿಂಗ್ ನಲ್ಲಿ ಫೈವ್ ಸ್ಟಾರ್ ಹೊಂದಿದೆ. ಟಾಟಾಮೋಟಾರ್ಸ್ ಕಂಪನಿಯ ವಿವಿಧ ವೇರಿಯೆಂಟ್ಸ್ ಗಳನ್ನ ತಿಳಿಯುವುದಾದರೆ ಟಾಟಾಸಫಾರಿ, ಟಾಟಾ ಟಿಗೋರ್, ಟಾಟಾ ಹೆಕ್ಸಾ, ಟಾಟಾ ಹ್ಯಾರಿಯರ್, ಟಾಟಾ ಪಂಚ್ ಕಾರುಗಳು ಸೇಫ್ಟಿ ರೇಟಿಂಗ್ ನಲ್ಲಿ ಉತ್ತಮ ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಸಾಲಿನಲ್ಲಿ ಎರಡನೇ ಸ್ದಾನವನ್ನು ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿದ್ದ ಹುಂಡೈ ಕಂಪನಿ ಮೂರನೇ ಸ್ಥಾನಕ್ಕೆ ಇಳಿದಿದೆ.

%d bloggers like this: