ಅತಿಯಾಗಿ ನೀರು ಕುಡಿದರೆ ಆಗುವ ತೊಂದರೆಗಳು

ನಮ್ಮ ದೇಹ ಆರೋಗ್ಯದಿಂದ ಸಧೃಡ ವಾಗಿರಬೇಕು, ಜೀರ್ಣಪ್ರಕ್ರಿಯೆಗಳು ಸರಾಗವಾಗಿ ನಡೆಯಬೇಕು ಎಂದಾದರೆ ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಾಗಿರುತ್ತದೆ, ಒಬ್ಬ ಮನುಷ್ಯ ತನ್ನ ದೇಹ ಆರೋಗ್ಯವಾಗಿರಲು ಕನಿಷ್ಟ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯ ಬೇಕಾಗಿರುತ್ತದೆ ಇದು ಅವಶ್ಯಕ ಕೂಡ ಹೌದು. ಆದರೆ ಅತಿಯಾದರೆ ಅಮೃತಕೂಡ ವಿಷ ವಾಗುತ್ತದೆ ಅನ್ನುವ ಹಾಗೆ ಅತಿಯಾಗಿ ನೀರನ್ನು ಕುಡಿಯುವುದರಿಂದ ನಿಮ್ಮ ಶರೀರದಲ್ಲಿ ತೊಂದರೆ ಆಗಬಹುದು. ಈ ಅತಿಯಾದ ನೀರಿನ ಸೇವನೆ ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ನಮ್ಮ ದೇಹದಲ್ಲಿ ನೀರಿನ ಅಂಶ ಶೇಕಡ 60ರಷ್ಟು ಮತ್ತು ನಮ್ಮ ಮೆದುಳಿನಲ್ಲಿ ಶೇಕಡ 75 ರಷ್ಟಿದೆ. ನೀರಿನಲ್ಲಿರುವ ಹಿಪ್ನಾಟ್ರೀಮಿಯಾ ದೇಹದಲ್ಲಿನ ಇಲೆಕ್ಟ್ರೋಲಾಯಲ್ ಅಸಮತೋಲನಕ್ಕೆ ಕಾರಣ ವಾಗಿದೆ.

ನಮ್ಮ ದೇಹ ಆರೋಗ್ಯ ಮತ್ತು ಸಧೃಡವಾಗಿರಲು ರಕ್ತ ಸಂಚಾರ ಚೆನ್ನಾಗಿ ಆಗಲು ಸೋಡಿಯಂ ಅಂಶ ಪ್ರಮುಖವಾಗಿರುತ್ತದೆ. ಆದರೆ ನೀವು ಅತಿಯಾದ ನೀರು ಸೇವಿಸುವುದರಿಂದ ರಕ್ತದಲ್ಲಿ ಈ ಸೋಡಿಯಂ ಅಂಶವು ಗಣನೀಯವಾಗಿ ಕಡಿಮೆಯಾಗುತ್ತದೆ. ಈ ನೀರಿನ ಪ್ರಮಾಣ ದೇಹದಲ್ಲಿ ಹೆಚ್ಚಾದಂತೆ ಮೂತ್ರಪಿಂಡಕ್ಕೆ ಕಾರ್ಯ ನಿರ್ವಹಿಸಲು ಕಷ್ಟವಾಗಿ ಅದು ನಿಷ್ಕ್ರೀಯ ವಾಗುವ ಸಾಧ್ಯತೆ ಇರುತ್ತದೆ. ಮೂತ್ರ ಪಿಂಡ ನೀರನ್ನು ಶುದ್ದೀಕರಿಸದಿದ್ದರೆ ನೇರವಾಗಿ ರಕ್ತದ ಜೊತೆಗೆ ನೀರಿನಾಂಶ ಮಿಶ್ರಣಗೊಂಡು ನಿಮ್ಮ ರಕ್ತವನ್ನು ದುರ್ಬಲ ಗೊಳಿಸುತ್ತದೆ. ಈ ರಕ್ತಹೀನತೆ ಇಂದಾಗಿ ಹೃದಯಕ್ಕೆ ಮತ್ತು ಹೃದಯ ಸಂಬಂಧಿ ಸಮಸ್ಯೆ ಕಾಯಿಲೆಗಳು ಉಂಟಾಗಿ ವ್ಯಕ್ತಿ ಸಾವನ್ನಪ್ಪಬಹುದು ಎಂದು ವೈದ್ಯರು ತಿಳಿಸುತ್ತಾರೆ. ಆದ್ದರಿಂದ ನೀರನ್ನು ಇತಿ ಮಿತಿಯಲ್ಲಿ ಸೇವಿಸಿ ಆರೋಗ್ಯ ಕಾಪಾಡಿ ಕೊಳ್ಳಬೇಕಾಗಿದೆ.

%d bloggers like this: