ಆಟೋಮೊಬೈಲ್ ಕ್ಷೇತ್ರದಲ್ಲಿ ನಿಮಿಷಕ್ಕೊಂದು, ದಿನಕ್ಕೊಂದು ಹೊಸ ಹೊಸ ಅವಿಷ್ಕಾರ, ಅಡ್ವಾನ್ಸ್ ಫೀಚರ್ ಹೊಂದಿರುವ ಮೊಬೈಲ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುತ್ತವೆ. ಇದೀಗ ಹೊಸದಾಗಿ ಪೋಕೋ ಸಿ3 ಎಂಫ ಸ್ಮಾರ್ಟ್ ಪೋನ್ ಮಾರುಕಟ್ಟೆಗೆ ಬಂದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಹೊಸ ವರ್ಷದಂದು ಬಿಡುಗಡೆಯಾದ ಈ ಮೊಬೈಲ್ ಈಗ ಸಂಕ್ರಾತಿ ಹಬ್ಬದ ಪ್ರಯುಕ್ತ ಫ್ಲಿಪ್ ಕಾರ್ಟ್ ನಲ್ಲಿ ಭಾರಿ ರಿಯಾಯಿತಿ ಘೋಷಿಸಿದೆ. ಈ ಡಿಸ್ಕೌಂಟ್ ಇದೇ ಜನವರಿ 11ರಿಂದ 14 ರವರೆಗೆ ಮಾತ್ರ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟವಾಗುತ್ತಿದೆ. 5000 mah ಬ್ಯಾಟರಿ ಹೊಂದಿದ್ದು ಒಮ್ಮೆ ಚಾರ್ಜರ್ ಮಾಡಿದರೆ ಎರಡು ದಿನಗಳವರೆಗೆ ಮೊಬೈಲ್ ಬಳಸಬಹುದಾಗಿದೆ.ಈ ಮೊಬೈಲ್ನ ಆರಂಭಿಕ ಬೆಲೆಯು ಕೇವಲ 6.999 ರೂಗಳಾದೆ ಇನ್ನು ಈ ಆಂಡ್ರಾಯ್ಡ್ ಮೊಬೈಲ್ ಮೂರು ಕ್ಯಾಮರಾ ವ್ಯವಸ್ಥೆ ಹೊಂದಿದೆ. ಈ ಪೋಕೋ ಸಿ3 ಸ್ಮಾರ್ಟ್ ಪೋನ್ 3ಜಿಬಿ ಸ್ಟೋರೇಜ್ ಹೊಂದಿದ್ದು, 3ಜಿಬಿ ರ್ಯಾಮ್ ಒಳಗೊಂಡಿದೆ. 4 ಜಿಬಿ ರ್ಯಾಮ್ 64 ಜಿಬಿ ಸ್ಟೋರೇಜ್ ಹೊಂದಿರುವ ಮತ್ತೊಂದು ವರ್ಷನ್ ಕೂಡ ಇದೆ. ಇನ್ನು ಈ ಪೋಕೋ ಸಿ3 ಮೊಬೈಲ್ ಖರೀದಿಯಲ್ಲಿ ನೀವು ಡೆಬಿಟ್ ಕಾರ್ಡ್ ಬಳಸಿದರೆ ಶೇಕಡ 10ರಷ್ಟು ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.

ಇನ್ನು ಈ ಮೊಬೈಲ್ ಅನ್ನು ಇಎಂಐ ರೂಪದಲ್ಲಿ ಕೇವಲ 1334 ರೂ ಪಾವತಿಸಿ ಖರೀದಿ ಮಾಡಬಹುದಾಗಿದೆ. ಆಕ್ಸಿಸ್ ಕ್ರೆಡಿಟ್ ಕಾರ್ಡ್ ಮೂಲಕ ಈ ಮೊಬೈಲ್ ಖರೀದಿ ಮಾಡಬಯಸುವವರಿಗೆ ಅನಿಯಮಿತ ಕ್ಯಾಶ್ ಬ್ಯಾಕ್ ಆಫರ್ ಹೊಂದಿದೆ. ಈ ಪೋಕೋ ಸಿ 3 ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ವಿಶೇಷವಾಗಿ ಇದು ಎಂಐಯುಐ 12 ನಲ್ಲಿ ಕಾರ್ಯನಿರ್ವಹಿಸುತ್ತದೆ.ಈ ಮೊಬೈಲ್ 6.53 ಇಂಚಿನ ಎಚ್ಡಿ ಡಿಸ್ ಪ್ಲೇ ಒಳಗೊಂಡಿದ್ದು 720*1600 ಪಿಕ್ಸೆಲ್ ಗಳನ್ನು ಒಳಗೊಂಡಿದೆ. ಇದರ ಜೊತೆಗೆ ಆಕ್ಟ್ ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ35 ಬೆಂಬಲ ಪಡೆದಿದೆ. ಇದರ ಜೊತೆಗೆ ಪೋಕೋ ಸಿ 3 ಮೊಬೈಲ್ 13 ಎಂಪಿ ಪ್ರೈಮರಿ ಸೆನ್ಸಾರ್ 2 ಎಂಪಿ ಮ್ಯಾಕ್ರೋ ಸೆನ್ಸ್ 2 ಎಂಪಿ ಡೆಪ್ತ್ ಸೆನ್ಸಾರ್ ಒಳಗೊಂಡಿದ್ದು ಸದ್ಯದ ಮೊಬೈಲ್ ಕ್ಷೇತ್ರದಲ್ಲಿ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಮಾರಾಟವಾಗುತ್ತಿರುವ ಈ ಪೋಕೋ ಸಿ3 ಮೊಬೈಲ್ ಜನಪ್ರಿಯವಾಗುತ್ತಿದೆ.