ಆಸ್ಟ್ರೇಲಿಯಾದಲ್ಲಿ ಹಿಂದೆಂದೂ ಆಡದ ಕ್ರಿಕೆಟ್ ಆಡಿದ ಆರ್ಸಿಬಿ ಆಟಗಾರ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಿಂದ ಭರ್ಜರಿ ಬ್ಯಾಟಿಂಗ್, ಸಿಡ್ನಿ ಸಿಕ್ಸರ್ಸ್ ದಾಖಲೆಯ ವಿಜಯ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್ )2020-2021 ಆವೃತ್ತಿಯ ಕ್ರಿಕೆಟ್ ಇದೇ ಭಾನುವಾರ ನಡೆದ ಮೃಲ್ಬೋರ್ನ್ ರೆನೆಗೇಡ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ಹಣಾಹಣಿಯಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ಜಾಷ್ ಫಿಲಿಪ್ ಅವರ ರೋಚಕ ಬ್ಯಾಟಿಂಗ್ ನಿಂದ 145ರನ್ ಗಳ ಅಂತರದಿಂದ ಗೆದ್ದು ಇತಿಹಾಸ ಸೃಷ್ಠಿಸಿದೆ. ಈ ಗೆಲುವಿನಿಂದ ಇದುವರೆಗೆ ಇತಿಹಾಸದಲ್ಲಿ ಯಾವ ಒಂದು ತಂಡವೂ ಕೂಡ ಇಷ್ಟು ದೊಡ್ಡ ಮೊತ್ತದ ಅಂತರದಲ್ಲಿ ಜಯ ಸಾಧಿಸಿರಲಿಲ್ಲ ಇದೊಂದು ರೆಕಾರ್ಡ್ ಆಗಿದ್ದು ಜಾಷ್ ಫಿಲಿಪ್ ಅವರಿಗೆ ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ.

ಸಿಡ್ನಿ ಸಿಕ್ಸರ್ಸ್ ತಂಡ ಟಾಸ್ಕ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭದ ಓವರನಲ್ಲಿ ಜ್ಯಾಕ್ ಎಡ್ವರ್ಡ್ ಮತ್ತು ಜೆವಿನ್ಸ್ ಬ್ಯಾಟಿಂಗ್ ಇಳಿದರು ಆದರೆ ಕೇವಲ 17 ರನ್ ಮುಟ್ಟಿ ಜೆವಿನ್ ವಿಕೆಟ್ ಒಪ್ಪಿಸಿದರು. ಇನ್ನು ಎಡ್ವರ್ಡ್ ಯಾವುದೇ ರನ್ ಕಲೆಹಾಕದೆ 0ನಲ್ಲಿ ಉಳಿದು ವಿಕೆಟ್ ಒಪ್ಪಿಸಿದರು. ಆರಂಭದಲ್ಲಿ ಕೊಂಚ ಎಡವಿದರೂ ಸಹ ನಂತರ ಬಂದ ತಂಡದ ನಾಯಕ ಡೇನಿಯಲ್ ಹ್ಯುಸ್ 23 ಎಸೆತಗಳಲ್ಲಿ 32 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ನಂತರದಲ್ಲಿ ಬಂದ ಆರ್ ಸಿ ಬಿ ತಂಡದ ಆಟಗಾರ ಜಾಷ್ ಫಿಲಿಪ್ ಅವರಃ ಜಾರ್ಡನ್ ಸಿಲ್ಕ್ ಜೊತೆಯಾಗಿ ಭರ್ಜರಿ ನಿಂತು ತಂಡದ ಮೊತ್ತ ಬರೋಬ್ಬರಿ 200 ರನ್ ಗಡಿಯನ್ನು ದಾಟಿಸಿದರು. ಕೊನೆಯದಾಗಿ ಸಿಡ್ನಿ ಸಿಕ್ಸರ್ಸ್ ತಂಡದ ಜಾಷ್ ಫಿಲಿಪ್ ಅವರು ಇಪ್ಪತ್ತು ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 205 ರನ್ಗಳನ್ನು ಬಾರಿಸುವ ಮೂಲಕ ಪಂದ್ಯದ ಸ್ಥಾನ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಜಾಷ್ ಫಿಲಿಪ್ ಒಟ್ಟು 57 ಎಸೆತಗಳನ್ನು ಎದುರಿಸಿದ್ದು ಬರೋಬ್ಬರಿ ಫೋರ್ ಮತ್ತು ಮೂರು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ 95 ರನ್ ಬಾಚಿದರು. ಇನ್ನು ಸಿಲ್ಕ್ ಕೂಡ ಕೇವಲ 19 ಎಸೆತಗಳಲ್ಲಿ ಅಜೇಯ 45 ರನ್ ಗಳಿಸಿ ರೋಚಕ ಪಂದ್ಯವನ್ನಾಗಿ ಮಾಡಿದರು.

ಇತ್ತ ಬರೋಬ್ಬರಿ 206 ರನ್ ಗುರಿ ಹೊಂದಿದ ಆಯ್ರೋನ್ ಫಿಂಚ್ ನಾಯಕತ್ವದ ಮೆಲ್ಬೋರ್ನ್ ತಂಡ 10.4 ಓವರ್ ಗಳಲ್ಲಿ 60 ರನ್ ಗೆ 4 ವಿಕೆಟ್ ಪಡೆದು ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರು. ಸ್ಟೀವ್ ಓ ಕೀಫ್ ಮೂರು ಓವರ್ ಗಳಲ್ಲಿ 16 ರನ್ ನೀಡಿ ಮೂರು ವಿಕೆಟ್ ಉರುಳಿಸಿದರು. ಏನೇ ಆದರು ಭಾನುವಾರ ನಡೆದ ಪಂದ್ಯದಲ್ಲಿ ಜಾಷ್ ಫಿಲಿಪ್ ಅವರ ರೋಚಕ ಬ್ಯಾಟಿಂಗ್ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಪವರ್ ನೀಡಿದ್ದು ಸುಳ್ಳಲ್ಲ ಮತ್ತು ಬಿಬಿಎಲ್ ಕ್ರಿಕೆಟ್ ನಲ್ಲಿ ಮೆಲ್ಬೋರ್ನ್ ತಂಡದ ವಿರುದ್ದ 145 ರನ್ ಗಳ ಅಂತರದಲ್ಲಿ ಗೆದ್ಧು ಬೀಗಿದ ಸಿಕ್ಸರ್ಸ್ ತಂಡ ಇತಿಹಾಸ ಸೃಷ್ಠಿ ಮಾಡಿತು. ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರವಾಗಿ 5 ಪಂದ್ಯಗಳನ್ನು ಆಡಿರುವ ಜಾಷ್ ಫಿಲಿಪ್ ಅವರ ಆಟ ನೋಡಿ ಆರ್ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.

%d bloggers like this: