ಇಡೀ ಭಾರತವೇ ಅತ್ಯಂತ ಕಾತುರದಿಂದ ಕಾಯುತ್ತಿರುವ ಒಂದು ಚಿತ್ರವೆಂದರೆ ಕನ್ನಡದ ಹೆಮ್ಮೆಯ ಚಿತ್ರ ಎಂದೇ ಕರೆಯಲ್ಪಡುವ ಕೆಜಿಎಫ್ ಚಾಪ್ಟರ್ ಟು. ಹೌದು ಕೆಜಿಎಫ್ ಚಾಪ್ಟರ್ ಒನ್ ಎಂಬ ಸಿನಿಮಾ ಸೃಷ್ಟಿಸಿದ ಹವಾ ಅಂತದ್ದು. ಪ್ರಶಾಂತ್ ನೀಲ್ ಈ ಚಿತ್ರದ ಮೂಲಕ ಸ್ಟಾರ್ ಡೈರೆಕ್ಟರ್ ಆದರು, ನಾಯಕ ನಟ ಯಶ್ ರಾಕಿಂಗ್ ಸ್ಟಾರ್ ಯಶ್ ಪ್ಯಾನ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದರು. ಇವರ ಜೊತೆಗೆ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರು ಕೂಡ ದೇಶವ್ಯಾಪಿ ಹೆಸರಾದರು.

ಇದೀಗ ಈ ಚಿತ್ರದ ಬಹು ಮುಖ್ಯ ಅಧೀರಾ ಎಂಬ ಪಾತ್ರಕ್ಕೆ ಬಾಲಿವುಡ್ ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ಸಂಜಯ್ ದತ್ ಜೀವ ತುಂಬುತ್ತಿರುವುದು ನಮ್ಮೆಲ್ಲರಿಗೂ ಗೊತ್ತೇ ಇದೆ. ಈಗ ತಾನೇ ಕ್ಯಾನ್ಸರ್ ಎಂಬ ಮಹಾಮಾರಿಯನ್ನೂ ಗೆದ್ದು ಬಂದ ಸಂಜಯ ದತ್ ಇತ್ತೀಚಿಗೆ ಕೆಜಿಎಫ್ ಚಿತ್ರತಂಡವನ್ನು ಹೈದರಾಬಾದ್ ನಲ್ಲಿ ಸೇರಿಕೊಂಡರು. ಇವರು ಸೇರಿಕೊಂಡಿದ್ದೆ ತಡ ಇಡೀ ಚಿತ್ರತಂಡ ಆರೋಗ್ಯದ ಕಡೆ ಹೆಚ್ಚಾಗಿ ಗಮನ ಕೊಡುತ್ತಿದೆ.

ಅಧೀರಾನ ಪಾತ್ರ ತುಂಬಾ ಶಕ್ತಿಶಾಲಿ ಪಾತ್ರವಾಗಿದ್ದು ಕೆಲವು ಫೈಟಿಂಗ್ ಸೀನ್ ಗಳಲ್ಲಿ ಸಾಕಷ್ಟು ಶಕ್ತಿ ವ್ಯಕ್ತವಾಗುತ್ತದೆ. ಹೀಗಾಗಿ ಸಂಜಯ್ ಅವರ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು ಚಿತ್ರತಂಡ ಕೆಲವು ಮಾರ್ಪಾಡು ಮಾಡಲು ಶುರು ಮಾಡಿತ್ತು. ಅವರಿಗಾಗಿ ತುಂಬಾ ಸರಳವಾದ ಸಾಹಸಮಯ ದೃಶ್ಯಗಳ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಇದು ಸಂಜಯ್ ಕಿವಿಗೆ ಬಿದ್ದಾಗ ಅವರು ಈ ರೀತಿ ಸರಳವಾದ ಸಾಹಸಮಯ ದೃಶ್ಯ ಮಾಡುವಂತೆ ಹೇಳಿ ನನ್ನನ್ನು ಮುಜುಗರಕ್ಕೆ ಈಡು ಮಾಡಬೇಡಿ ಎಂದು ಹೇಳಿದ್ದಾರೆ.

ನನ್ನ ಪಾತ್ರ ಯಾವ ರೀತಿ ಅದೆಯೋ ನಾನು ಹಾಗೆಯೇ ನಟಿಸುತ್ತೇನೆ ಅದರಲ್ಲಿ ಯಾವುದೇ ಮಾರ್ಪಾಡು ಬೇಡ, ನನ್ನ ಸಾಹಸ ದೃಶ್ಯಗಳನ್ನು ನಾನೇ ಮಾಡುತ್ತೇನೆ ಅದರಲ್ಲಿ ಯಾವುದೇ ರಾಜಿ ಇಲ್ಲ ಎಂದಿದ್ದಾರೆ. ಸಂಜಯ ಅವರ ಸೂಕ್ಷ್ಮ ಆರೋಗ್ಯ ಪರಿಗಣಿಸಿ ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಕೂಡ ಸಂಜಯ್ ದತ್ ಅವರು ಇರುವ ಜಾಗದಲ್ಲಿ ದೂಳು ಇರದಂತೆ ನೋಡಿಕೊಳ್ಳಿ ಎಂದು ಕೆಲಸಗಾರರಿಗೆ ಹೇಳಿದ್ದಾರೆ. ಇದಕ್ಕೂ ಸಹ ಸಂಜಯ ದತ್ ಇಲ್ಲ ಆ ರೀತಿ ಬೇಡ ಪ್ರೇಕ್ಷಕರಿಗೆ ಮೋಸ ಮಾಡೋದು ಬೇಡ ಇರುವ ರೀತಿಯಲ್ಲಿರಲಿ ನೈಜವಾಗಿ ಚೆನ್ನಾಗಿ ಬರುತ್ತದೆ ಎಂದು ಹೇಳಿದ್ದಾರೆ.