ಬಾಳೆಹಣ್ಣು ತಿನ್ನುವುದರಿಂದ ಇರುವ ಲಾಭಗಳು ಹಲವಾರು

ವರ್ಷದ ನಾಲ್ಕು ಋತುಗಳಲ್ಲಿಯೂ ಸಹ ಸಹಜವಾಗಿ ದೊರೆಯುವಂತಹ ಹಣ್ಣು ಅಂದರೆ ಅದು ಬಾಳೆಹಣ್ಣು. ಈ ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳಿವೆ. ಇನ್ನು ಬಾಳೆಹಣ್ಣಿನಲ್ಲಿ ವಿವಿಧ ರೀತಿಯ ರಸಾಯನ, ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಬಾಳೆಹಣ್ಣು ಶರೀರದ ಪ್ರತಿಯೊಂದು ಭಾಗಕ್ಕೂ, ಸಮರ್ಥವಾಗಿ ಶಕ್ತಿ ಪುಷ್ಟಿಯನ್ನು ಒದಗಿಸುತ್ತದೆ. ಜೊತೆಗೆ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಯನ್ನು ನಿವಾರಿಸಿ, ಶರೀರದಲ್ಲಿ ಸರಾಗವಾಗಿ ಜೀರ್ಣಕ್ರಿಯೆ ನಡೆಯುವಂತೆ ಈ ಬಾಳೆಹಣ್ಣು ಕಾರ್ಯ ನಿರ್ವಹಿಸುತ್ತದೆ. ಬಾಳೆಹಣ್ಣು ಶರೀರದಲ್ಲಿ ರಕ್ತದ ಮಟ್ಟವನ್ನು ಹೆಚ್ಚಿಸಿ ಅರೋಗ್ಯ ಉತ್ತಮವಾಗಿರಲು ಸಹಕಾರಿಯಾಗಿದೆ. ಇನ್ನು ದಿನಕ್ಕೊಂದು ಸೇಬು ಸೇವಿಸಿ, ವೈದ್ಯರಿಂದ ದೂರವಿರಿ ಎಂಬ ಮಾತಿನಂತೆ ದಿನಕ್ಕೊಂದು ಬಾಳೆಹಣ್ಣು ಸೇವಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂಬ ಮಾತನ್ನು ಇತ್ತೀಚೆಗೆ ವೈದ್ಯರ ಹೇಳುತ್ತಿದ್ದಾರೆ. ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ಔಷಧಿಯ ಗುಣಗಳಿವೆ ಎಂಬುದರ ಬಗ್ಗೆ ಬಹಳಷ್ಟು ಮಂದಿಗೆ ತಿಳುವಳಿಕೆ ಇರುವುದಿಲ್ಲ. ಬಾಳೆಹಣ್ಣನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು ಎಂದು ಸಂಶೋಧಕರು ವೈದ್ಯರು ಮಾಹಿತಿ ನೀಡುತ್ತಾರೆ.

ಇನ್ನು ಬಾಳೆ ಹಣ್ಣನ್ನು ಬೆಳಿಗ್ಗೆ ಉಪಹಾರವಾದ ನಂತರ, ಮಧ್ಯಾಹ್ನದ ಊಟವಾದ ನಂತರ,ಮತ್ತು ರಾತ್ರಿಯ ಊಟವಾದ ನಂತರ ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿ ದೇಹ ಸದೃಢವಾಗಿರುತ್ತದೆ. ಇನ್ನು ಮೆದುಳು ಸಂಬಂಧಿ, ಕರುಳು ಸಂಬಂಧಿತ ಸಮಸ್ಯೆಗಳನ್ನು ಈ ಬಾಳೆಹಣ್ಣು ನಿವಾರಿಸುತ್ತದೆ ಎಂದ ವೈದ್ಯರು ತಿಳಿಸುತ್ತಾರೆ. ಸಾಮಾನ್ಯವಾಗಿ ನಾವು ಸೇವಿಸುವ ಬಾದಾಮಿ, ಹಾಲು, ಮೀನು ಸೇವನೆಯಿಂದ ಉತ್ಪಾದನೆ ಆಗುವಂತಹ ಪೊಟ್ಯಾಶಿಯಂ ಅಂಶಗಳು ಕೇವಲ ಒಂದು ಬಾಳೆಹಣ್ಣು ತಿನ್ನುವುದರಿಂದ ಅಷ್ಟೂ ಪೊಟ್ಯಾಶಿಯಂ ಅಂಶವನ್ನು ಒದಗಿಸುತ್ತದೆ. ಬಾಳೆಹಣ್ಣನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚಾಗಿ ಮಲಬದ್ದತೆ ಸಮಸ್ಯೆಗಳು ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ ಬಹಳಷ್ಟು ಮುಂದಿಗಿದೆ. ಆದರೆ ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್, ಪಾಸ್ಪರಸ್, ಕ್ಯಾಲ್ಸಾಯಂ ಅಂತಹ ವಿಟಮಿನ್ಗಳು ಹೆಚ್ಚಾಗಿದ್ದು ಇವು ಶರೀರಕ್ಕೆ ಹೆಚ್ಚು ಪೋಷಕಾಂಶಗಳನ್ನು ಒದಗಿಸುತ್ತದೆ.

ಇನ್ನು ಕೆನೆ ತೆಗೆದ ಹಾಲಿನ ಜೊತೆ ಬಾಳೆಹಣ್ಣನ್ನು ಸೇವಿಸುವುದರಿಂದ ದೇಹ ತೂಕ ಹೆಚ್ಚು ಇರುವವರು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಒಂದು ಲೋಟದಲ್ಲಿ ಮೊಸರು, ಸಕ್ಕರೆ ಮತ್ತು ಬಾಳೆಹಣ್ಣನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯವೂ ಕೂಡ ವೃದ್ದಿಯಾಗುತ್ತದೆ. ಮುಖ್ಯವಾಗಿ ಅಸಕ್ತರು ಶಕ್ತಿವಂತರಾಗುತ್ತಾರೆ. ಹಾಲು ಮತ್ತು ಬಾಳೆಹಣ್ಣು ಇದನ್ನು ಸಹ ಸಾಕಷ್ಟು ಅಂಶಗಳು ಹೆಚ್ಚಾಗಿರುತ್ತದೆ ಕೆಲವೊಮ್ಮೆ ಉಂಟಾದಾಗ ಬಾಳೆಹಣ್ಣನ್ನು ಸೇವಿಸುವುದರಿಂದ ಇಂತಹ ಸಮಸ್ಯೆಗಳಿಂದ ಮುಕ್ತಿ ಕೊಳ್ಳಬಹುದಾಗಿದೆ ಅಂಶ ಹೆಚ್ಚಾಗಿರುವ ಈ ಬಾಳೆಹಣ್ಣನ್ನು ಸೇವಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇನ್ನು ಉದರ ಸಮಸ್ಯೆಗಳಿಗೆ ಈ ಬಾಳೆಹಣ್ಣು ಉತ್ತಮ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹೀಗೆ ನೈಸರ್ಗಿಕವಾಗಿ ಎಲ್ಲಾ ಸೀಸನ್ ಗಳಲ್ಲಿ ಸಿಗುವಂತಹ ಬಾಳೆಹಣ್ಣು ಹಲವಾರು ಪೋಷಕಾಂಶವನ್ನು ಒಳಗೊಂಡಿದ್ದು ಇದನ್ನು ಪ್ರತಿ ದಿನ ತಿನ್ನುವುದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

%d bloggers like this: