ಭಾರತದ ಸುಪ್ರಸಿದ್ಧ ನಿರ್ದೇಶಕನ ಜೊತೆ ಉಪ್ಪಿ ಅವರ ಹೊಸ ಚಿತ್ರ

ರಿಯಲಿಸ್ಟಿಕ್ ಸಿನಿಮಾಗಳ ಸರದಾರ ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ನಿರ್ದೇಶಕನಿಗೆ ಆಕ್ಷನ್ ಕಟ್ ಹೇಳುತ್ತಿರುವುದು ಅಧಿಕೃತವಾಗಿದೆ. ಹೌದು ಈ ಕೆಲವು ದಿನಗಳ ಹಿಂದೆ ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕನ್ನಡದ ನಟ, ನಿರ್ದೇಶಕ ಉಪೇಂದ್ರ ಅವರೊಟ್ಟಿಗೆ ಸಿನಿಮಾ ಮಾಡುವುದಾಗಿ ತಿಳಿಸಿದ್ದರು. ಆದರೆ ಈ ಬಗ್ಗೆ ಖಚಿತವಾಗಿ ಸ್ಪಷ್ಟನೆ ನೋಡಿರಲಿಲ್ಲ. ಆದರೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ‌ಗ್ಯಾಂಗ್ ಸ್ಟಾರ್ ಸಿನಿಮಾ ವೊಂದನ್ನು ನಿರ್ದೇಶನ ಮಾಡುತ್ತಿರುವುದನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಉಪೇಂದ್ರ ಅವರು ಚಾಕುವೊಂದನ್ನ ಹಿಡಿದು ಮೋಹ ನೋಟದಲ್ಲಿ ನಗು ಬೀರುತ್ತಾ ಆ ಚಾಕುವಿಗೆ ಮುತ್ತಿಡುತ್ತಿರುವ ಕಿರು ವೀಡಿಯೋವೊಂದನ್ನ ಶೇರ್ ಮಾಡಿದ್ದಾರೆ.

ಈ ಗ್ಯಾಂಗ್ ಸ್ಟರ್ ಸಿನಿಮಾದಲ್ಲಿ ರಕ್ತದೋಕುಳಿ ಇರಲಿದೆ ಎಂಬುದನ್ನು ರಾಮ್ ಗೋಪಾಲ್ ವರ್ಮಾ ಅವರು ಸೂಚನೆ ನೀಡಿದ್ದಾರೆ. ಕ್ರೈಮ್ ಥ್ರಿಲ್ಲರ್ ಸಿನಿಮಾ ಮಾಡುವುದರಲ್ಲಿ ಪರಿಣಿತ ಆಗಿರುವ ರಾಮ್ ಗೋಪಾಲ್ ವರ್ಮಾ ಅವರು ಈಗಾಗಲೇ ಸಾಕಷ್ಟು ರಿಯಲಿಸ್ಟಿಕ್ ರಾ ಚಿತ್ರ ನಿರ್ದೇಶನ ಮಾಡಿ ಗೆದ್ದಿದ್ದಾರೆ. ಇದೀಗ ‘ಆರ್’ ಎಂಬ ಶೀರ್ಷಿಕೆ ಇಟ್ಟು ಕನ್ನಡದ ರಿಯರ್ ಸ್ಟಾರ್ ಉಪೇಂದ್ರ ಅವರ ನಾಯಕತ್ವದಲ್ಲಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಆರ್ ಎಂಬ ಗ್ಯಾಂಗ್ಸ್ಟಾರ್ ಚಿತ್ರಕ್ಕೆ ಎ ಸ್ಕ್ವೇರ್ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಿಕೆ ಮಾಡಲಿದೆ. ಇನ್ನು ಈ ಚಿತ್ರದಲ್ಲಿ ಉಪೆಂದ್ರ ಅವರಿಗೆ ಯಾರು ಜೋಡಿ ಆಗಲಿದ್ದಾರೆ, ಯಾರೆಲ್ಲಾ ನಟರು ಕಾಣಿಸಿಕೊಳ್ಳಲಿದ್ದಾರೆ, ಚಿತ್ರದ ಚಿತ್ರೀಕರಣ ಯಾವಾಗ ಎಲ್ಲಿ ಹೇಗೆ ಎಂಬ ಇನ್ನಷ್ಟು ವಿಚಾರಗಳನ್ನ ಮುಂದಿನ ದಿನಗಳಲ್ಲಿ ತಿಳಿಯಬಹುದಾಗಿದೆ.

ಒಟ್ಟಾರೆಯಾಗಿ ನಟ ಉಪೇಂದ್ರ ಅವರು ತುಂಬಾ ವರ್ಷಗಳ ನಂತರ ಪರಭಾಷೆಯಲ್ಲಿ ಪೂರ್ಣ ಪ್ರಮಾಣದ ಕಲಾವಿದರಾಗಿ ಅಭಿನಯಿಸುತ್ತಿದ್ದಾರೆ. ಆರ್ ಎಂಬ ಈ ಗ್ಯಾಂಗ್ಸ್ಟರ್ ಸಿನಿಮಾದ ವೀಡಿಯೋ ತುಣುಕು ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾ ದಲ್ಲಿ ಭಾರಿ ವೈರಸ್ ಆಗಿ ಸಿನಿ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ. ಇನ್ನು ರಾಮ್ ಗೋಪಾಲ್ ವರ್ಮಾ ಅವರು ಕನ್ನಡದ ನಟರಿಗೆ ಮಾಡುತ್ತಿರುವ ಈ ಆರ್ ಎಂಬ ಸಿನಿಮಾ ಮೂರನೇ ಚಿತ್ರ ವಾಗಿದೆ. ಈ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಕಿಲ್ಲಿಂಗ್ ವೀರಪ್ಪನ್ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅದಾದ ಬಳಿಕ ಡಾಲಿ ಧನಂಜಯ್ ಅವರಿಗೆ ಭೈರವ ಗೀತ ಎಂಬ ಚಿತ್ರ ಮಾಡಿದ್ದರು. ಈ ಚಿತ್ರಕ್ಕೆ ಅವರು ನಿರ್ದೇಶನ ಮಾಡದಿದ್ದರು ಕೂಡ ಬಂಡವಾಳ ಹೂಡಿಕೆ ಮಾಡಿ ಚಿತ್ರದ ಸಂಪೂರ್ಣ ಬೆನ್ನೆಲುಬಾಗಿ ನಿಂತಿದ್ದರು. ಇದೀಗ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

%d bloggers like this: