ಬ್ಯಾಕ್ ಟು ಬ್ಯಾಕ್ ಚಿತ್ರಗಳ ಗೆಲುವಿನಲ್ಲಿ ಧನಂಜಯ ಅವರು, ಯಶಸ್ವಿ 50 ದಿನ‌ ಪೂರೈಸಿದ ಹೊಸ ಚಿತ್ರ

2021 ಡಾಲಿ ಧನಂಜಯ್ ಅವರ ಪಾಲಿಗೆ ಅದೃಷ್ಟದ ವರ್ಷ ಎಂದರೆ ತಪ್ಪಾಗಲಾರದು. ಏಕೆಂದರೆ 2021ರಲ್ಲಿ ಡಾಲಿ ಧನಂಜಯ್ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಗಿದೆ. ಧನಂಜಯ್ ಅವರು 2021 ರಲ್ಲಿ ಅಭಿನಯಿಸಿದ ಎಲ್ಲಾ ಚಿತ್ರಗಳು ಹಿಟ್ ಆಗಿವೆ. 2021ರ ಆರಂಭದಲ್ಲಿ ರಿಲೀಸ್ ಆದ ಆಕ್ಷನ್ ಪ್ರಿನ್ಸ್ ಅಭಿನಯದ ಪೊಗರು ಚಿತ್ರದಲ್ಲಿ ಡಾಲಿ ಅಭಿನಯಿಸಿದ್ದರು. ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರವು ಕೂಡ ಸಕ್ಸಸ್ ಕಂಡಿದೆ. ಈ ಚಿತ್ರದಲ್ಲಿ ಅಪ್ಪು ಅವರಿಗೆ ಖಡಕ್ ವಿಲ್ಲನ್ ಆಗಿ ಧನಂಜಯ್ ಅಭಿನಯಿಸಿದ್ದರು. ಇದಷ್ಟೇ ಅಲ್ಲದೆ ಸಲಗ, ರತ್ನನ್ ಪ್ರಪಂಚ ಸಿನಿಮಾಗಳು ಕೂಡ ಹಿಟ್ ಆಗಿವೆ. ಹೀಗಾಗಿ 2021 ಡಾಲಿ ಧನಂಜಯ್ ಪಾಲಿಗೆ ಲಕ್ಕಿ ಇಯರ್ ಎಂದೇ ಹೇಳಬಹುದು.

ನಟನಾಗಬೇಕೆಂಬ ಆಸೆಯಿಂದ ಚಂದನವನಕ್ಕೆ ಕಾಲಿಟ್ಟು, ಯಶಸ್ಸಿಗಾಗಿ ಅನೇಕ ಏಳು-ಬೀಳು, ಅವಮಾನ ಅನುಭವಿಸಿಕೊಂಡು ಇಂದು ತಮ್ಮ ಪ್ರತಿಭೆಯ ಮೂಲಕ ನಟ ರಾಕ್ಷಸನಾಗಿ ಸ್ಯಾಂಡಲ್ವುಡ್ ಬೇಡಿಕೆಯ ನಟನಾಗಿ ಮಿಂಚುತ್ತಿರುವ ನಟ ಧನಂಜಯ್. ಆರಂಭದಲ್ಲಿ ನಟಿಸಿದ ಬಹುತೇಕ ಚಿತ್ರಗಳು ಯಶಸ್ಸು ಕಾಲದೇ ಸೋಲುಂಡರೂ ಎದೆಗುಂದದೆ ಆತ್ಮವಿಶ್ವಾಸದಿಂದ ಮುನ್ನುಗ್ಗಿ ಇಂದು ತಮ್ಮ ಸಿನಿಪಯಣದಲ್ಲಿ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ವರ್ಷದ ಕೊನೆಯಲ್ಲಿ ರಿಲೀಸ್ ಆದ ಬಡವ ರಾಸ್ಕಲ್ ಚಿತ್ರವನ್ನು ಕನ್ನಡಿಗರು ತಮ್ಮ ಹೃದಯ ಸಿಂಹಾಸನದಲ್ಲಿ ಹೊತ್ತು ಮೆರವಣಿಗೆ ಮಾಡಿ ಗೆಲ್ಲಿಸಿದರು. ಬಡವ ರಾಸ್ಕಲ್ ಚಿತ್ರವು ಡಾಲಿ ಧನಂಜಯ್ ನಿರ್ಮಾಣಮಾಡಿ, ನಾಯಕನಾಗಿ ಅಭಿನಯಿಸಿದ ಚಿತ್ರವಾಗಿದೆ.

ಸ್ಯಾಂಡಲ್ವುಡ್ ನ ಬಾಕ್ಸಾಫೀಸಿನಲ್ಲಿ ಸೌಂಡ್ ಮಾಡಿದ್ದ ಬಡವ ರಾಸ್ಕಲ್ ಚಿತ್ರ, ಇದೀಗ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. 50ದಿನಗಳನ್ನು ಪೂರೈಸಿದ ಪ್ರಯುಕ್ತ ಚಿತ್ರತಂಡ ಇತ್ತೀಚೆಗಷ್ಟೇ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿದೆ. ದುಡ್ಡು ಬಂದಾಗ ಎಲ್ಲರೂ ಅದನ್ನು ಉದ್ಯಮಗಳಲ್ಲಿ, ವ್ಯವಹಾರಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಲು ನೋಡುತ್ತಾರೆ. ಆದರೆ ಧನಂಜಯ್ ಅವರು ತಮ್ಮ ಹಣವನ್ನು ಕಲಾವಿದರ ಮೇಲೆ ಹೂಡಿಕೆ ಮಾಡಿದ್ದಾರೆ. ಅದೀಗ ಫಲ ನೀಡಿದೆ ಎಂದು ಧನಂಜಯ್ ಭಾವುಕರಾಗಿ ನುಡಿದರು. ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಜನೆಯನ್ನು ಧನಂಜಯ್ ಅವರು ಹೊರಹಾಕಿದ್ದಾರೆ.

ಬಡವ ರಾಸ್ಕಲ್ ಚಿತ್ರ ಟಾಲಿವುಡ್ ಮತ್ತು ಕಾಲಿವುಡ್ ಗಳಲ್ಲಿ ಸೌಂಡ್ ಮಾಡಲು ರೆಡಿಯಾಗುತ್ತಿದೆ. ಹೌದು ಕನ್ನಡದಲ್ಲಿ ಹಿಟ್ ಆಗಿರುವ ಬಡವ ರಾಸ್ಕಲ್ ಚಿತ್ರ ತೆಲುಗಿನಲ್ಲಿ ತೆರೆ ಕಾಣಲಿದೆ. ಈ ತಿಂಗಳ 27ರ ಭಾನುವಾರ ಸಂಜೆ ಕಲರ್ಸ್ ವಾಹಿನಿಯಲ್ಲಿ ಬಡವ ರಾಸ್ಕಲ್ ಚಿತ್ರ ಪ್ರದರ್ಶನ ಕಾಣುತ್ತಿದೆ. ಈ ಹಿಂದೆ ಪಾರ್ವತಮ್ಮ ರಾಜ್ ಕುಮಾರ್ ಅವರು ಈ ರೀತಿಯ ಸಮಾರಂಭಗಳನ್ನು ಆಯೋಜಿಸಿ ಎಲ್ಲರಿಗೂ ಬೆಳ್ಳಿಯ ಲೋಟ ನೀಡುತ್ತಿದ್ದರು. ನನ್ನ ಬಳಿ ಅವರು ನೀಡಿರುವ ಮೂರು ಬೆಳ್ಳಿಯ ಲೋಟಗಳಿವೆ. ಇತ್ತೀಚೆಗೆ ಇಂತಹ ಸಮಾರಂಭಗಳು ಕಡಿಮೆಯಾಗಿದ್ದವು. ಧನಂಜಯ್ ಮತ್ತೆ ಇಂತಹ ಸಮಾರಂಭಗಳನ್ನು ಆರಂಭಿಸಿದ್ದಾರೆ. ಇವರಿಗೆ ಒಳ್ಳೆಯದಾಗಲಿ ಎಂದು ರಂಗಾಯಣ ರಘು ಹಾರೈಸಿದರು.

%d bloggers like this: