ಬಹಳ ದಿನಗಳ ನಂತರ ಒಟ್ಟಿಗೆ ಕಾಣಿಸಿಕೊಂಡ ಅರವಿಂದ್ ಕೆಪಿ ಹಾಗೂ ದಿವ್ಯ ಉರುಡುಗ

ಬಿಗ್ ಬಾಸ್ ರನ್ನರ್ ಅಪ್ ಆಗಿದ್ದ ಈ ಸ್ಪರ್ಧಿಗೀಗ ಹುಟ್ಟು ಹಬ್ಬದ ಸಂಭ್ರಮ. ಇವರ ಹುಟ್ಟು ಹಬ್ಬದ ಸಂಭ್ರಮ ದಿನದಂದು ಯಾರೆಲ್ಲಾ ಬಂದಿದ್ರು ಗೊತ್ತಾ! ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಅನೇಕ ಪ್ರತಿಭಾವಂತರು ರಾಜ್ಯದ ಜನತೆಗೆ ಪರಿಚಯವಾಗಿದ್ದಾರೆ. ಬಿಗ್ ಬಾಸ್ ಅಂದಾಕ್ಷಣ ಕೇವಲ ಸಿನಿಮಾ, ಕಿರುತೆರೆ ಕ್ಷೇತ್ರದಲ್ಲಿ ಮಾತ್ರ ಸಾಧನೆ ಮಾಡಿರಬೇಕು ಎಂದೇನಿಲ್ಲ. ಪ್ರತಿಭಾವಂತರು ಅನೇಕ ವಿವಿಧ ಕ್ಷೇತ್ರಗಳಲ್ಲಿ ಇರುತ್ತಾರೆ. ಆದರೆ ಅವರ ಪ್ರತಿಭೆ ತೋರ್ಪಡಿಸಿಕೊಳ್ಳಲು ವೇದಿಕೆ ಸಿಕ್ಕಿರುವುದಿಲ್ಲ ಅಷ್ಟೇ. ಅಂತಹ ಎಲೆ ಮರೆ ಕಾಯಿಯಂತೆ ಮರೆಯಲ್ಲಿರುವ ಅನೇಕ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಡುವ ವೇದಿಕೆ ಅಂದರೆ ಅದು ಬಿಗ್ ಬಾಸ್.

ಅಂತೆಯೇ ಕನ್ನಡದ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಎಂಟ್ರಿಕೊಟ್ಟವರು ಸ್ಪೋರ್ಟ್ಸ್ ಮನ್ ಬೈಕ್ ರೈಡರ್ ಅರವಿಂದ್ ಕೆಪಿ ದೊಡ್ಮನೆಗೆ ಹೋದಾಗ ಅಷ್ಟಾಗಿ ಯಾರೊಂದಿಗೂ ಕೂಡ ಗೊತ್ತಿಲ್ಲದ ಅರವಿಂದ ದಿನಕಳೆದಂತೆ ತಮ್ಮ ಕೆಲಸ, ವ್ಯಕ್ತಿತ್ವ, ಟಾಸ್ಕ್ ನಲ್ಲಿ ಭಾಗವಹಿಸುವ ಉತ್ಸಾಹ ತೋರುವ ರೀತಿಯ ಮೂಲಕ ದೊಡ್ಮನೆಯ ಸದಸ್ಯರೆಲ್ಲರಿಗೂ ಅಚ್ಚು ಮೆಚ್ಚಾದರು ಅರವಿಂದ್. ಜೊತೆಗೆ ದಿವ್ಯಾ ಉರುಡುಗ ಅವರ ಜೊತೆ ಹೆಚ್ಚು ಆತ್ಮೀಯತೆ ಬೆಳೆಸಿಕೊಂಡ ಅರವಿಂದ್ ಕೆಪಿ ಕ್ಯೂಟ್ ಜೋಡಿಗಳಂತೆ ದೊಡ್ಮನೆಯಿಂದ ಇಂದಿನವರೆಗೂ ಹಾಗೇ ಇದ್ದಾರೆ. ಒಂದಷ್ಟು ಸಾರ್ವಜನಿಕ ಸಿನಿಮಾ ಇವೆಂಟ್ ಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಈ ಜೋಡಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇಬ್ಬರು ಕೂಡ ಸ್ಪಷ್ಟನೆ ನೀಡಿಲ್ಲ‌.

ಇನ್ನು ಕೆಪಿ ಅರವಿಂದ್ ಅವರು ಡಿಸೆಂಬರ್ 8ರಂದು ತಮ್ಮ ಜನ್ಮದಿನವನ್ನು ತಮ್ಮ ಆಪ್ತ ಗೆಳೆಯರೊಟ್ಟಿಗೆ ಆಚರಿಸಿಕೊಂಡರು. ಆಹಾರಧಾನ್ಯಗಹ ಅಗತ್ಯ ಇರುವ ಒಂದಷ್ಟು ಬಡ ಕುಟುಂಬಗಳಿಗೆ ನೆರವಾಗುವುದರ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿಕೊಂಡ ಅರವಿಂದ್ ಅವರಿಗೆ ಅವರ ಸ್ನೇಹಿತರ ವಿಭಿನ್ನ ಬಗೆಯ ಕೇಕ್ ಕ‌ಟ್ ಮಾಡಿಸಿ ಅವರ ಹುಟ್ಟು ಹಬ್ಬವನ್ನು ಸಖತ್ ಆಗಿಯೇ ಆಚರಣೆ ಮಾಡಿದ್ದಾರೆ. ಈ ಸಂಭ್ರಮದಲ್ಲಿ ದಿವ್ಯಾ ಉರುಡುಗ, ಅವರ ತಮ್ಮ ದರ್ಶನ್, ಬ್ರೋ ಗೌಡ ಖ್ಯಾತಿಯ ಶಮಂತ್ ಮತ್ತಿತರ ಸ್ನೇಹಿತರೊಟ್ಟಿಗೆ ಕೇಕ್ ಕಟ್ ಮಾಡಿ ಕೆಪಿ ಅರವಿಂದ್ ತಮ್ಮ ಹುಟ್ಟು ಹಬ್ಬವನ್ನು ಸಂಭ್ರಮಿಸಿದ್ದಾರೆ. ಇದೀಗ ಕೆಪಿ ಅರವಿಂದ್ ದಿವ್ಯಾ ಉರುಡುಗ ಮತ್ತು ಶಮಂತ್ ಸೇರಿದಂತೆ ಒಂದಷ್ಟು ಗೆಳೆಯರೊಟ್ಟಿಗೆ ಇರುವ ಒಂದಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

%d bloggers like this: