ಬಹಳ ವರ್ಷಗಳ ನಂತರ ಮತ್ತೆ ಕನ್ನಡ ಕಿರುತೆರೆಯತ್ತ ಜನಪ್ರಿಯ ನಟಿ

ಕನ್ನಡ ಕಿರುತೆರೆಯ ಸ್ಟಾರ್ ನಟಿಯಾಗಿ ಮಿಂಚಿದ್ದ ಸುಪ್ರಸಿದ್ದ ನಟಿ ಇದೀಗ ಮತ್ತೆ ಈ ಜನಪ್ರಿಯ ಧಾರಾವಾಹಿಯ ಮೂಲಕ ಮರಳಿ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ದಶಕಗಳ ಹಿಂದೆ ಹೌದು ಕಿರುತೆರೆ ಲೋಕದಲ್ಲಿ ಸಿನಿಮಾ ಕಲಾವಿದರಿಗಿಂತ ಕೊಂಚ ಜಾಸ್ತಿನೇ ಧಾರಾವಾಹಿಗಳ ಮೂಲಕ ನಾಡಿನ ಮನೆ ಮನೆಗಳಲ್ಲಿ ಮಾತಾಗಿದ್ದ ಖ್ಯಾತ ನಟ- ನಟಿಯರು ಕೆಲವು ಕಾರಣಾಂತರಗಳಿಂದ ಕಿರುತೆರೆ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರಲ್ಲಿ ಕೆಲವರು ಈಗಾಗಲೇ ಬೆಳ್ಳಿ ತೆರೆಯಲ್ಲಿ ಮಿಂಚಿದರೆ ಇನ್ನು ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳ ಕಡೆಗೆ ಗಮನ ಹರಿಸಿರುತ್ತಾರೆ.

ಅದೇ ರೀತಿಯಾಗಿ ಧಾರಾವಾಹಿಗಳಿಂದ ದೂರವಾಗಿದ್ದ ನಟಿ ರಜನಿ ಅವರು ಇದೀಗ ಮತ್ತೆ ಕಿರುತೆರೆ ಧಾರಾವಾಹಿಯಲ್ಲಿ ಬಣ್ಣ ಹಚ್ಚಲು ಸಿದ್ದರಾಗಿದ್ದಾರೆ ಎಂದು ತಿಳಿದು ಬಂದಿದೆ. ರಜಿನಿ ಅನ್ನುವುದಕ್ಕಿಂತ ಅಮೃತ ವರ್ಷಿಣಿ ಧಾರಾವಾಹಿಯ ಅಮೃತ ಅಂದಾಕ್ಷಣ ತಟ್ಟನೆ ನೆನಪಿಗೆ ಬರುತ್ತಾರೆ. ಹೌದು ಪ್ರಸಿದ್ದ ಕಿರುತೆರೆ ವಾಹಿನಿಯಾದ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಅಮೃತ ವರ್ಷಿಣಿ ಸೀರಿಯಲ್ ಅಲ್ಲಿ ಅಮೃತ ಪಾತ್ರದಲ್ಲಿ ನಟಿಸಿ ಅಪಾರ ಜನಮನ್ನಣೆ ಗಳಿಸಿದ್ದ ನಟಿ ರಜನಿ ಅವರು ಈ ಬಹು ವರ್ಷಗಳ ಬಳಿಕ ಮತ್ತೆ ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಹೌದು ಸದ್ಯದ ಮಟ್ಟಿಗೆ ಕಿರುತೆರೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಅಪಾರ ಜನಪ್ರಿಯತೆ ಗಳಿಸಿ ಟಿ.ಆರ್.ಪಿ ಯಲ್ಲಿ ನಂಬರ್ ಒನ್ ಸ್ಥಾನ ಪಡೆದು ಮಿಂಚುತ್ತಿರುವ ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ರಜನಿ ಅವರು ಎಜೆ ಅವರ ಮೊದಲ ಹೆಂಡತಿ ಕಾಣಿಸಿಕೊಳ್ಳುವ ಮೂಲಕ ರಜನಿ ಅವರು ಕಿರುತೆರೆಯಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ. ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಅವರು ಹಿಟ್ಲರ್ ಕಲ್ಯಾಣ ಧಾರಾವಾಹಿಯನ್ನು ನಿರ್ಮಾಣ ಮಾಡುವುದರ ಜೊತೆಗೆ ತಾವೇ ಸ್ವತಃ ಕಥಾ ನಾಯಕ ಎಜೆ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಜೀ಼ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಹಿಟ್ಲರ್ ಕಲ್ಯಾಣ ಧಾರಾವಾಹಿಯು ರೋಚಕ ತಿರುವುಗಳ ಮೂಲಕ ವೀಕ್ಷಕರನ್ನ ಮನರಂಜಿಸುತ್ತಿದೆ. ಇದೀಗ ಅಮೃತ ವರ್ಷಿಣಿ ಧಾರಾವಾಹಿಯ ಖ್ಯಾತಿಯ ನಟಿ ರಜನಿ ಕೂಡ ಎಂಟ್ರಿ ಕೊಟ್ಟಿರುವುದರಿಂದ ಈ ಹಿಟ್ಲರ್ ಕಲ್ಯಾಣ ಧಾರಾವಾಹಿಯು ಮತ್ತಷ್ಟು ರೋಚಕತೆಯಿಂದ ಪ್ರಸಾರ ಆಗಲಿದೆ. ಇನ್ನು ಇಷ್ಟು ದಿನಗಳ ಕಾಲ ಧಾರಾವಾಹಿ ಲೋಕದಿಂದ ದೂರವಾಗಿದ್ದ ನಟಿ ರಜನಿ ಅವರು ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರುವುದಿರಂದ ವೀಕ್ಷಕರಿಗೂ ಕೂಡ ಈ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಯಾವ ರೀತಿಯ ತಿರುವು ನೋಡಬಹುದು ಎಂದು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

%d bloggers like this: