ಬಹು ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ ಅಕ್ಷಯ್ ಕುಮಾರ್ ಅವರು

ನಿರ್ಮಾಪಕರ ಪಾಲಿನ ಲಕ್ಕಿ ಮ್ಯಾನ್ ಬಾಲಿವುಡ್ ನ ನಟ ಅಕ್ಷಯ್ ಕುಮಾರ್. ಇವರ ಸಿನಿಮಾಗಳು ಫೇಲ್ ಆಗಿದ್ದು ಕಡಿಮೆ. ಅಕ್ಷಯ್ ಕುಮಾರ್ ಅವರ ಚಿತ್ರಗಳು ಯಾವತ್ತೂ ಗಳಿಕೆಯಲ್ಲಿ ಸೋತಿಲ್ಲ. ಇನ್ನು ಅಕ್ಷಯ್ ಕುಮಾರ್ ನಟನೆಯ ಬಚ್ಚನ್ ಪಾಂಡೆ ಈ ವರ್ಷದ ಮೊದಲ ತಿಂಗಳಿನಲ್ಲಿ ಬಿಡುಗಡೆಯಾಗಬೇಕಾಗಿತ್ತು. ಆದರೆ ಕೋರೋನ ಕಾರಣದಿಂದಾಗಿ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈಗ ಬಚ್ಚನ್ ಪಾಂಡೆ ಚಿತ್ರವನ್ನು ಮಾರ್ಚ್ 18 ಕ್ಕೆ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಬಚ್ಚನ್ ಪಾಂಡೆ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡಿಸ್, ಅರ್ಶದ್ ವರ್ಸಿ ನಟಿಸಿದ್ದಾರೆ.

ಈ ಸಿನೆಮಾ ರಿಲೀಸ್ ಆದ ಒಂದು ವಾರಕ್ಕೆ ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ತ್ರಿಬಲ್ ಆರ್ ರಿಲೀಸ್ ಆಗಲಿದೆ. ಹೀಗಿದ್ದರೂ ಅಕ್ಷಯ್ ಕುಮಾರ್ ಅವರ ಬಚ್ಚನ್ ಪಾಂಡೆ ಚಿತ್ರದ ಬಿಡುಗಡೆಗೆ ಮುಂದಾಗಿರುವುದು ಬಾಲಿವುಡನಲ್ಲಿ ಸಂಚಲನವನ್ನುಂಟು ಮಾಡಿದೆ. ಇತ್ತೀಚೆಗೆ ಯಾವುದೇ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡದ ಬಾಲಿವುಡ್ ಗೆ ಬಚ್ಚನ್ ಪಾಂಡೆ ಚಿತ್ರದ ಮೇಲೆ ನಂಬಿಕೆ ದುಪ್ಪಟ್ಟಾಗಿದೆ. ಬಾಲಿವುಡ್ ಬಾಕ್ಸಾಫೀಸಿನಲ್ಲಿ ಮತ್ತೆ ಧೂಳೆಬ್ಬಿಸಿ ಅಕ್ಷಯ್ ಕುಮಾರ್ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ.

ಈ ಚಿತ್ರವು ಥಿಯೇಟರ್ನಲ್ಲಿ ರಾಜಮೌಳಿಯ ತ್ರಿಬಲ್ ಆರ್ ಸಿನಿಮಾಗೆ ಟಕ್ಕರ್ ಕೊಡುತ್ತಾ ಎಂದು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇನ್ನು ಬಚ್ಚನ್ ಪಾಂಡೆ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಅವರು ಪಡೆದ ಸಂಭಾವನೆ ಎಲ್ಲರಿಗೂ ಶಾಕ್ ನೀಡಿದೆ. ಬಚ್ಚನ್ ಪಾಂಡೆ ಸಿನಿಮಾಗೆ ಅಕ್ಷಯ್ ಕುಮಾರ್ ಅವರು ಬರೋಬ್ಬರಿ 99 ಕೋಟಿ ರೂಪಾಯಿಯನ್ನು ಪಡೆದಿದ್ದಾರೆ. ಈ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಇದ್ದಾರೆ. ಇನ್ನು ಬಚ್ಚನ್ ಪಾಂಡೆ ಚಿತ್ರಕ್ಕಾಗಿ ಒಟಿಟಿ ಇಂದ ಭಾರಿ ಮೊತ್ತದ ಆಫರ್ ಬಂದಿತ್ತು.

ಆದರೆ ಕೊನೆಯ ಕ್ಷಣದಲ್ಲಿ ಆಫರನ್ನು ಚಿತ್ರದ ನಿರ್ಮಾಪಕ ಸಾಜಿದ್ ತಿರಸ್ಕರಿಸಿದ್ದಾರೆ. ಕಾರಣ, ಒಟಿಟಿ ಸಂಸ್ಥೆಯೊಂದು ಬಚ್ಚನ್ ಪಾಂಡೆ ಚಿತ್ರಕ್ಕೆ 175 ಕೋಟಿ ನೀಡಲು ಮುಂದಾಗಿತ್ತು. ಆದರೆ ಅಕ್ಷಯ್ ಕುಮಾರ್ ಅವರಿಗೆ 99 ಕೋಟಿ ಸಂಭಾವನೆ ಹೋಗಿದೆ. ಇದರಿಂದ ನಿರ್ಮಾಪಕರಿಗೆ ಉಳಿಯುವುದು ಬರೀ 76 ಕೋಟಿ. ಇದರಲ್ಲಿ ಉಳಿದ ನಟರ ಸಂಭಾವನೆ, ಮೇಕಿಂಗ್ ಖರ್ಚು, ಪ್ರಚಾರ ಅಂತ ದೊಡ್ಡ ಮೊತ್ತವೇ ಖರ್ಚಾಗಿರುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ನಿರ್ಮಾಪಕರು ಒಟಿಟಿ ಆಫರ್ ತಿರಸ್ಕರಿಸಿದ್ದಾರೆ.

%d bloggers like this: