ಬಹು ನಿರೀಕ್ಷಿತ ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ಕನ್ನಡ ಸಿನಿಮಾಗೆ ಪಾದಾರ್ಪಣೆ ಮಾಡಿದ ನಟಿ

2020 ರಲ್ಲಿ ರಿಲೀಸ್ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಚಿತ್ರ ಲವ್ ಮಾಕ್ಟೇಲ್. ಈಗಿನ ಕಾಲದ ಯೂಥ್ ನಡುವೆ ನಡೆಯುವ ನೈಜ ಕಥೆಯನ್ನು ಆಧರಿಸಿ ಒಂದು ಒಳ್ಳೆಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ಹೊರತಂದಿದ್ದರು. ಕಿರುತೆರೆಯ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ನಟನೆಯನ್ನು ಆರಂಭಿಸಿದ ಡಾರ್ಲಿಂಗ್ ಕೃಷ್ಣ ಅವರು ಕೆಲವೊಂದು ಸಿನಿಮಾಗಳಲ್ಲಿ ಹೀರೋ ಆಗಿ ಕೂಡ ನಟಿಸಿದರು. 2020 ರಲ್ಲಿ ಒಂದು ಒಳ್ಳೆಯ ಕಥೆಯೊಂದಿಗೆ ಒಬ್ಬ ನಿರ್ದೇಶಕರಾಗಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಹೊರಬಂದರು. ಮಿಲನ ನಾಗರಾಜ್ ಅವರು ನಟಿಯಾಗಿ ಖ್ಯಾತಿ ಗಳಿಸುವುದರ ಜೊತೆಗೆ ಇಂಟರ್ನ್ಯಾಷನಲ್ ಸ್ವಿಮ್ಮರ್ ಕೂಡ ಹೌದು. ಲವ್ ಮಾಕ್ಟೇಲ್ ಚಿತ್ರದಲ್ಲಿ ಈ ಎರಡು ಜೋಡಿಯನ್ನು ಜನತೆ ತುಂಬಾ ಇಷ್ಟಪಟ್ಟಿದ್ದರು.

ಅಂತೆಯೇ ಕಳೆದ ವರ್ಷ ಇವರಿಬ್ಬರು ದಾಂಪತ್ಯ ಜೀವನಕ್ಕೂ ಕೂಡ ಕಾಲಿಟ್ಟರು. ಲವ್ ಮಾಕ್ಟೇಲ್ 1 ನ್ನು ನೋಡಿರುವ ಸಿನಿಪ್ರೇಕ್ಷಕರು ಲವ್ ಮಾಕ್ಟೇಲ್ 2 ಚಿತ್ರಕ್ಕಾಗಿ ಕಾಯುತ್ತಿದ್ದರು. ಈಗ ಲವ್ ಮಾಕ್ಟೇಲ್ 2 ಚಿತ್ರ ರಿಲೀಸ್ ಗಾಗಿ ರೆಡಿಯಾಗಿದೆ. ಇನ್ನು ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಹಲವು ಹೊಸಮುಖಗಳನ್ನು ಪರಿಚಯಿಸಲಾಗಿದೆ. ಹೌದು ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಮಲಯಾಳಿ ನಟಿಯೊಬ್ಬರು ಸೇರ್ಪಡೆಯಾಗಿದ್ದಾರೆ. ರಚೆಲ್ ಡೇವಿಡ್ ಮೂಲತಃ ಕೇರಳದವರಾದರೂ ಕೂಡ ಬೆಳೆದಿದ್ದು ಬೆಂಗಳೂರಿನಲ್ಲಿ. ತಮ್ಮ ಹದಿನಾರನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಇವರು, ಆಕ್ಟಿಂಗ್ ಮೇಲೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು.

ಈಗಾಗಲೇ ಮಲಯಾಳಂ ಭಾಷೆಯಲ್ಲಿ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿರುವ ರೇಚಲ್, ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚೆಗೆ ಲವ್ ಮಾಕ್ಟೇಲ್ 2 ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ರಚೆಲ್ ಅವರಿಗೆ ಮಾತನಾಡಲು ಹೇಳಿದಾಗ ಅವರು ಬಹಳ ಮುದ್ದುಮುದ್ದಾಗಿ ಕನ್ನಡ ಮಾತನಾಡಿದ್ದಾರೆ. ಮೊದಲಿಗೆ ಎಲ್ಲರಿಗೂ ನಮಸ್ಕಾರ ಎಂದು ಹೇಳುವ ಮೂಲಕ ಮಾತು ಆರಂಭಿಸಿದ ರಚೆಲ್, ಕನ್ನಡ ಮಾತನಾಡುವಾಗ ಏನಾದರೂ ಮಿಸ್ಟೇಕ್ ಆದರೆ ದಯವಿಟ್ಟು ಕ್ಷಮಿಸಿ ಎಂದು ಕೇಳಿದರು.

ಲವ್ ಮಾಕ್ಟೇಲ್ ಟು ಚಿತ್ರದಲ್ಲಿ ನಾನು ಸಿಹಿ ಅಂತ ಒಂದು ಪಾತ್ರವನ್ನು ಮಾಡಿದ್ದೇನೆ. ಒಬ್ಬ ಮಲಯಾಳಿ ಹುಡುಗಿಯನ್ನು ಕನ್ನಡ ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಭಯ ಇತ್ತು. ಆದರೆ ನನಗೆ ಎಲ್ಲರೂ ತುಂಬಾ ಸಪೋರ್ಟ್ ಮಾಡಿದ್ದಾರೆ. ಕನ್ನಡ ಪ್ರೇಕ್ಷಕರು ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಕೃಷ್ಣ ಮತ್ತು ಮಿಲನ ಅವರು ನನ್ನನ್ನು ನಂಬಿ ಒಂದೊಳ್ಳೆ ಪಾತ್ರವನ್ನು ನನಗೆ ಕೊಟ್ಟಿದ್ದಾರೆ. ಈ ಸಿನೆಮಾದ ಭಾಗವಾಗಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

%d bloggers like this: