ಬಹು ನಿರೀಕ್ಷಿತ ಆರ್.ಆರ್.ಆರ್ ಚಿತ್ರದ ಹೊಸ ರಿಲೀಸ್ ದಿನಾಂಕ ಫಿಕ್ಸ್

ದೇಶದಲ್ಲಿ ಕೋವಿಡ್ ಮೂರನೇ ಅಲೆಯ ಶುರುವಾಗಿ ಇಲ್ಲದಂತೆ ಇದ್ದ ಕೋವಿಡ್ ಪ್ರಕರಣಗಳು ದಿಢೀರ್ ಎಂದು ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿವೆ. ಇದರ ಜೊತೆಗೆ ರೂಪಾಂತರಿ ಓಮೈಕ್ರಾನ್ ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆ ದೇಶದ ಅನೇಕ ರಾಜ್ಯಗಳಲ್ಲಿ ಕೊರೋನ ವೈರಸ್ ಹರಡುವುದನ್ನ ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನ ಅನುಸರಿಸಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ‌ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಅದರಂತೆ ಚಿತ್ರಮಂದಿರಗಳಿಗೆ ಶೇಕಡಾ ಐವತ್ತರಷ್ಟಕ್ಕೆ ಮಾತ್ರ ಸೀಮಿತವಾಗಿ ನಿಯಮ ಜಾರಿ ಮಾಡಿದೆ. ಇದರ ಹಿನ್ನೆಲೆಯಿಂದ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಸಿನಿಮಾಗಳಿಗೆ ಪೆಟ್ಟು ಬಿದ್ದಿತು. ಇಷ್ಟೇ ಅಲ್ಲದೆ ಬಿಡುಗಡೆಗೆ ಸಿದ್ದವಾಗಿದ್ದ ಬಹು ಕೋಟಿ ವೆಚ್ಚದ ಸಿನಿಮಾಗಳಿಗೆ ಇದು ಅಪಾರ ನಷ್ಟವನ್ನು ಉಂಟು ಮಾಡಿತು ಎಂದು ಹೇಳಬಹುದು.

ಅನೇಕ ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡಿ ದೇಶಾದ್ಯಂತ ಭರ್ಜರಿ ಪ್ರಮೋಶನ್ ಕೂಡ ಮಾಡಿತ್ತು. ಆದರೆ ಪದೇ ಪದೇ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಇಳಿಕೆಯಿಂದಾಗಿ ಆಯಾ ರಾಜ್ಯ ಸರ್ಕಾರ ಕೂಡ ಕಠಿಣ ನಿಯಮ ಜಾರಿ ಮಾಡಿ ಚಿತ್ರ ಮಂದಿರಗಳಿಗೆ ಶೇಕಡ ಐವತ್ತರಷ್ಟು ನಿಯಮ ಜಾರಿ ಮಾಡುತ್ತಿದೆ. ಈ ನಿಯಮದಿಂದಾಗಿ ನೂರಾರು ಕೋಟಿ ಬಂಡವಾಳ ಹೂಡಿ ಮಾಡಿದ ಚಿತ್ರಗಳಗೆ ಅಪಾರ ನಷ್ಟ ಆಗುತ್ತದೆ. ಇದರಿಂದಾಗಿ ರಿಲೀಸ್ ಗೆ ರೆಡಿ ಆಗಿದ್ದ ಚಿತ್ರಗಳು ಕೂಡ ಪೋಸ್ಟ್ ಪೋನ್ ಆಗುತ್ತಲೇ ಇವೆ. ಅದರಂತೆ ಜನವರಿ 7ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದೆ ಅಂದುಕೊಂಡಿದ್ದ ಮಲ್ಟಿ ಸ್ಟಾರರ್ ಸಿನಿಮಾ ಆರ್.ಆರ್.ಆರ್ ಸಿನಿಮಾ ಕೂಡ ಅನೇಕ ಬಾರಿ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಆದರೆ ಫೈನಲ್ ಆಗಿ ಜನವರಿ 7ರಂದು ರಿಲೀಸ್ ಮಾಡುತ್ತೇವೆ ನಿರ್ದೇಶಕ ರಾಜಮೌಳಿ ಭರ್ಜರಿ ಪ್ರಮೋಶನ್ ಕೂಡ ಮಾಡಿದ್ದರು.

ಆದರೆ ವರ್ಷದ ಆರಂಭದಲ್ಲೇ ಆರ್.ಆರ್.ಆರ್ ಸಿನಿಮಾ ತಂಡ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದ ಕಾರಣ ಆರ್.ಆರ್.ಆರ್ ಸಿನಿಮಾ ಪೋಸ್ಟ್ ಪೋನ್ ಮಾಡುತ್ತಿರುವುದಾಗಿ ಮಾಹಿತಿ ನೀಡಿತು. ಆದರೆ ಇದೀಗ ನಿರ್ದೇಶಕ ರಾಜಮೌಳಿ ಅವರು ಹೊಸದೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಹೌದು ಪದೇ ಪದೇ ತಮ್ಮ ಚಿತ್ರದ ರಿಲೀಸ್ ಡೇಟ್ ಮುಂದೂಡಲ್ಪಟ್ಟು ಬೇಸರ ಆಗಿರುವ ರಾಜಮೌಳಿ ಅವರು ಎರಡು ಡೇಟ್ ಗಳತ್ತ ಮುಖ ಮಾಡಿದ್ದಾರೆ. ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿ ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಅವಕಾಶ ಸಿಕ್ಕರೆ ಮಾರ್ಚ್ 18ರಂದೇ ಆರ್.ಆರ್.ಆರ್ ಸಿನಿಮಾ ರಿಲೀಸ್ ಮಾಡುತ್ತೇವೆ. ಇಲ್ಲವಾದಲ್ಲಿ ಏಪ್ರಿಲ್ 28ರಂದು ಏನೇ ಆದರು ರಿಲೀಸ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಪ್ರಮುಖವಾಗಿರುವ ಆರ್.ಆರ್.ಆರ್ ಚಿತ್ರದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಆರ್.ಆರ್.ಆರ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ಸ್ಸ್ ಆದಂತಹ ನಟ ಅಜಯ್ ದೇವಗನ್, ನಟಿ ಆಲಿಯಾ ಭಟ್, ಶ್ರೀಯಾ ಶರಣ್, ರಾಹುಲ್ ರಾಮಕೃಷ್ಣ ಸೇರಿದಂತೆ ಹಾಲಿವುಡ್ ನಟರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿ.ವಿ.ವಿ ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ಡಿ.ವಿ.ವಿ ದಾನಯ್ಯ ಅವರು 400 ಕೋಟಿ ವೆಚ್ಚದಲ್ಲಿ ಈ ಆರ್.ಆರ್.ಆರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಈ ಮಲ್ಟಿ ಸ್ಟಾರ್ ಆರ್.ಆರ್.ಆರ್ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ರಾಗ ಸಂಯೋಜನೆ ಮಾಡಿದ್ದು, ರಾಜಮೌಳಿ ಅವರ ತಂದೆ ಕೆವಿ ವಿಜಯೆಂದ್ರ ಪ್ರಸಾದ್ ಕಥೆ ಬರೆದಿದ್ದಾರೆ.

%d bloggers like this: