ಬಾಹುಬಲಿ ನಟನ ಜೊತೆ ಹೊಸ ಚಿತ್ರ ಮಾಡ್ತಿದ್ದಾರೆ ಕನ್ನಡದ ನಟ

ಕನ್ನಡ ಚಿತ್ರರಂಗದ ನಟರು ಪರಭಾಷೆಗೆ ಹೋಗಿ ನಟಿಸಿರುವವರ ಸಾಲಿಗೆ ಇದೀಗ ವಸಿಷ್ಟ ಸಿಂಹ ಹೆಸರು ಸೇರಿಕೊಂಡಿದೆ, ಹೌದು ಹೊಸ ವರ್ಷದ ಮೊದಲ ದಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ಅಲ್ಲಿನ ಸಿಂಹದ ಮರಿಯನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ತಮ್ಮ ಹೊಸ ವರ್ಷ ಆಚರಿಸಿದರು. ಜೊತೆಗೆ ದತ್ತು ಪಡೆದ ಸಿಂಹಕ್ಕೆ ತಮ್ಮ ತಂದೆಯ ವಿಜಯನರಸಿಂಹ ಹೆಸರು ಇಟ್ಟು ಸುದ್ದಿಯಾಗಿದ್ದರು. ಇದೀಗ ಮತ್ತೆ ತಮ್ಮ ಸಿನಿಮಾಗಳ ಮುಖಾಂತರ ಸುದ್ದಿಯಾಗುತ್ತಿದ್ದಾರೆ. ಅದು ಕೂಡ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿ ವಸಿಷ್ಠ ಸಿಂಹ ಪ್ಯಾನ್ ಇಂಡಿಯಾ ನಟರಾಗಲು ಹೊರಟಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ವಸಿಷ್ಟ ಸಿಂಹ ಲಾಕ್ ಡೌನ್ ನಂತರ ಒಡೆಲ್ಲಾ ರೈಲ್ವೇ ಸ್ಟೇಷನ್ ಮತ್ತು ಇನ್ನೊಂದು ಹೆಸರಿಡದ ತಮಿಳು ಚಿತ್ರಗಳಲ್ಲಿ ನಟಿಸಿದ್ದೇನೆ.

ರಾಣಾ ದಗ್ಗುಬಾಟಿಯವರೊಂದಿಗೆ ಒಂದು ತೆಲುಗು ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಸದ್ಯದಲ್ಲಿಯೇ ಆ ಚಿತ್ರದ ಬಗ್ಗೆ ತಿಳಿಸುತ್ತೇನೆ, ಇನ್ನು ಹೆಸರಿಡದ ಈ ಚಿತ್ರದಲ್ಲಿ ದುಶಾಂತ್ ಅವರ ಜೊತೆಗೆ ಮೊದಲ ಬಾರಿಗೆ ನಟಿಸಿದ್ದೇನೆ ಈ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಇನ್ನು ಶ್ರಿಕಾಂತ್ ಅಡ್ಡಲ ನಿರ್ದೇಶನ ಮಾಡಿರುವ ವಿಕ್ಟರಿ ವೆಂಕಟೇಶ್ ಅಭಿನಯದ ನಾರಪ್ಪ ಚಿತ್ರ ತೆಲುಗಿನ ನನ್ನ ಮೂರನೇ ಚಿತ್ರವಾಗಿದ್ದು ಇದರಲ್ಲಿ ವಿಲನ್ ಆಗಿ ಅಭಿನಯಿಸಿದ್ದೇನೆ. ನಟರು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುವುದು ತಪ್ಪಲ್ಲ ಎಂಬ ಭಾವನೆ ನನ್ನದು.

ಪ್ಯಾನ್ ಇಂಡಿಯಾ ಸಿನಿಮಾ ಸೋಲುವುದು ಗೆಲ್ಲುವುದು ಬೇರೆ ಪ್ರಶ್ನೆ, ಆದರೆ ಇತರೆ ಭಾಷೆಗಳಲ್ಲಿ ನಟಿಸುವುದರಿಂದ ಅಲ್ಲಿನ ಜನ, ಪರಭಾಷೆಯ ನಟರು ಪರಿಚಯವಾಗುತ್ತದೆ ಇದರಿಂದ ನಟನಿಗೆ ವಿಪುಲ ಅವಕಾಶಗಳು ಸಿಗುತ್ತವೆ ಜೊತೆಗೆ ಉತ್ತಮ ವಾದ ಭಾಂದವ್ಯ ಹೊಂದಬಹುದು ಎಂದು ತಿಳಿಸಿದರು. ಸದ್ಯಕ್ಕೆ ಗೋದ್ರಾ ಮತ್ತು ಕಾಲಚಕ್ರ ಎಂಬ ಕನ್ನಡದ ಎರಡು ಸಿನಿಮಾಗಳು ಬಾಕಿಯಿದ್ದು ಸ್ವಲ್ಪ ದಿನಗಳಲ್ಲೆ ಶೂಟಿಂಗ್ ನಲ್ಲಿ ಭಾಗವಹಿಸಬೇಕಿದೆ. ಇತ್ತೀಚೆಗೆ ಬಿಡುಗಡೆಯಾದ ಕಾಲಚಕ್ರ ಟೀಸರ್ ಅಲ್ಲಿ ವಸಿಷ್ಠ ಅವರ ಖಡಕ್ ಲುಕ್, ವಾಯ್ಸ್ ನಿಂದಾಗಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿಸಿದೆ.

%d bloggers like this: