ಬಹುದಿನದ ಗೆಳೆಯನ ಜೊತೆ ಸಪ್ತಪದಿ ತುಳಿದ ಸುಪ್ರಸಿದ್ದ ಕಿರುತೆರೆ ನಟಿ

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಯಂತಿನಿ ಘೋಷ್ ತಮ್ಮ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆಯಲು ಸಿದ್ದರಾಗಿದ್ದಾರೆ. ಅದಕ್ಕೆ ಮುನ್ನುಡಿ ಎಂಬಂತೆ ಇತ್ತೀಚೆಗೆ ತಾನೇ ತಮ್ಮ ಆಪ್ತರು ಮತ್ತು ಕುಟುಂಬಸ್ಥರ ಸಮಕ್ಷಮದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು ಕೆಲವು ತಿಂಗಳುಗಳ ಹಿಂದೀಚೆಗೆ ಭಾರತೀಯ ಚಿತ್ರರಂಗ ಮತ್ತು ಕಿರುತೆರೆಯ ಅನೇಕ ಯುವ ನಟ ನಟಿಯರು ಸಪ್ತಪದಿ ತುಳಿಯುವ ಮೂಲಕ ಭಾರಿ ಸುದ್ದಿಯಾಗುತ್ತಿದ್ದಾರೆ. ಅದರಂತೆ ಇದೀಗ ಹಿಂದಿ ಕಿರುತರೆಯ ಜನಪ್ರಿಯ ಧಾರಾವಾಹಿಗಳಾದ ಕುಂಕುಂ, ನಾಗಿನಿ, ಮಹಾಭಾರತ್, ನಾಮಕರಣ್, ಏಕ್ ಪ್ಯಾರ್ ಸಾ ಬಂಧನ್ ಸೇರಿದಂತೆ ಅನೇಕ ಸೀರಿಯಲ್ ಗಳ ಮೂಲಕ ಹಿಂದಿ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ನಟಿ ಸಯಂತಿನಿ ಘೋಷ್ ಕೂಡ ದಾಂಪತ್ಯ ಬದುಕಿಗೆ ಹೆಜ್ಜೆ ಇಡುತ್ತಿದ್ದಾರೆ.

ನಟಿ ಸಯಂತಿನಿ ಅವರು ಕೇವಲ ಕಿರುತೆರೆ ಮಾತ್ರವಲ್ಲದೆ ಬೆಂಗಾಲಿಯ ರಾಜು ಅಂಕಲ್, ನಾಯಕ್, ಸ್ವಪ್ನೋ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಿರುತೆರೆಯ ಜನಪ್ರಿಯ ಶೋ ಆಗಿರುವ ಬಿಗ್ ಬಾಸ್ ಸೀಸನ್6 ರಿಯಾಲಿಟಿ ಶೋನಲ್ಲಿಯೂ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದರು ಸಯಂತಿನಿ ಘೋಷ್. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಸಯಂತಿನಿ ಇತ್ತಿಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಅನುಗ್ರಹ್ ತಿವಾರಿ ಅವರೊಂದಿಗೆ ಮದುವೆ ಮಾಡಿಕೊಂಡಿದ್ದಾರೆ.

ಸರಿ ಸುಮಾರು ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಸಯಂತಿನಿ ಮತ್ತು ಅನುಗ್ರಹ್ ತಿವಾರಿ ಅವರು ಇದೀಗ ತಮ್ಮ ಪ್ರೀತಿಗೆ ಮದುವೆ ಆಗುವ ಮೂಲಕ ಅರ್ಥ ನೀಡುತ್ತಿದ್ದಾರೆ. ನಿಶ್ಚಿತಾರ್ಥ ಹಾಗು ಮದುವೆ ಸಂಭ್ರಮ ಸಂತಸ ಕ್ಷಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳ ಜೊತೆಗೆ ನಾವಿಬ್ಬರು ಜೊತೆಯಾಗಿ ಸಾಗಲು. ಈ ದಿನವನ್ನು ಮುನ್ನುಡಿಯಾಗಿಸಿಕೊಂಡಿದ್ದೇವೆ. ನಮ್ಮ ಈ ಹೊಸ ಪಯಣ ಆರಂಭವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಹೊಸ ಬಾಳಿಗೆ ಹೆಜ್ಜೆ ಇಡುತ್ತಿರುವ ಈ ಜೋಡಿಗೆ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

%d bloggers like this: