ಬಾಹ್ಯಾಕಾಶ ನೌಕೆಯಲ್ಲಿ ವೀರ ಕಿತ್ತೂರು ರಾಣಿ ಚೆನ್ನಮ್ಮ

ಈ ಭೂಮಿಯ ಮೇಲೆ ಕೆಲವು ಯುಗಪುರುಷರು ಜನಿಸುತ್ತಿರುತ್ತಾರೆ ಅಂಥವರ ಹೆಸರುಗಳು ಯುಗಯುಗಗಳು ಕಳೆದರೂ ಮಾಸದೆ ಹಾಗೆ ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತವೆ. ಅಂತಹ ಮಿನುಗುತಾರೆಗಳಲ್ಲಿ ಕನ್ನಡ ನಾಡಿನ ಕೆಚ್ಚೆದೆಯ ಬ್ರಿಟಿಷರ ವಿರುದ್ಧ ಮೊದಲ ಬಾರಿ ತೊಡೆತಟ್ಟಿದ ವೀರ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮ ದೇವಿ ಕೂಡ ಒಬ್ಬರು. ಹೌದು ಬ್ರಿಟಿಷರ ಆಕ್ರಮಣದಿಂದ ಮುಕ್ತಿ ಹೊಂದಲು ಕೆಚ್ಚೆದೆಯ ಮನಸ್ಸನ್ನು ಮಾಡಿ ಮಹಿಳೆಯಾದರೂ ಸಹ ಅವರೊಂದಿಗೆ ವೀರಾವೇಶದಿಂದ ಹೋರಾಡಿ ವೀರ ಸ್ವರ್ಗ ಸೇರಿದ ಕಿತ್ತೂರು ರಾಣಿ ಚೆನ್ನಮ್ಮನ ಹೆಸರು ಸೂರ್ಯ ಚಂದ್ರ ಇರುವವರೆಗೂ ಅಜರಾಮರ ಎಂದರೆ ತಪ್ಪಾಗಲಿಕ್ಕಿಲ್ಲ.

ಹೌದು ಒಂದು ಸಣ್ಣ ಪ್ರಾಂತ್ಯದ ರಾಣಿ ಆಗಿದ್ದುಕೊಂಡು ಬೃಹತ್ ಬ್ರಿಟಿಷ್ ಸಾಮ್ರಾಜ್ಯದ ಜೊತೆ ಕಾದಾಡುವ ಧೈರ್ಯ ಮಾಡುವುದು ಎಂದರೆ ಅದು ಸಾಮಾನ್ಯವಾದ ಮಾತಲ್ಲಾ. ಎಂತೆಂಥ ದೊಡ್ಡ ಖ್ಯಾತನಾಮರೆ ಕೈಕಟ್ಟಿ ಕುಳಿತ ಸಂದರ್ಭದಲ್ಲಿ ಕೆಂಪು ಮೂತಿಯ ಬ್ರಿಟಿಷರಿಗೆ ಸೆಡ್ಡು ಹೊಡೆದ ವೀರ ರಾಣಿ ಚೆನ್ನಮ್ಮನ ಧೈರ್ಯವನ್ನು ನಿಜಕ್ಕೂ ಮೆಚ್ಚಲೇಬೇಕು. ಬ್ರಿಟಿಷರಂತಹ ಬ್ರಿಟೀಶರಿಗೆನೆ ನಡುಕ ಹುಟ್ಟಿಸಿ ನಿದ್ದೆಗೆಡಿಸಿದ್ದಳು ಕನ್ನಡದ ಮಣ್ಣಿನ ಹೆಮ್ಮೆಯ ವನಿತೆ ಚೆನ್ನಮ್ಮ ದೇವಿ.

ಬಹುಶಹ ಚೆನ್ನಮ್ಮನಿಗೆ ಎಲ್ಲರೂ ಸಂಗೊಳ್ಳಿ ರಾಯಣ್ಣನಂತಹ ದೇಶಭಕ್ತರು ಸಿಕ್ಕಿದ್ದರೆ ಅಂದೇ ನಮ್ಮ ದೇಶ ಬ್ರಿಟಿಷರಿಂದ ವಿಮುಕ್ತ ಆಗುತ್ತಿತ್ತೇನೋ ಹೇಳಲಿಕ್ಕೆ ಆಗುವುದಿಲ್ಲ. ಪ್ರತಿವರ್ಷ ಚೆನ್ನಮ್ಮನ ಜಯಂತಿಯಂದು ಅಥವಾ ತರಗತಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೇಳುವಾಗ ಚೆನ್ನಮ್ಮನನ್ನು ನಾವು ನೆನೆಯುವುದು ಸಾಮಾನ್ಯ, ಆದರೆ ಇಲ್ಲೊಂದು ಎಲ್ಲರು ಹೆಮ್ಮೆ ಪಡುವಂತಹ ವಿಶೇಷ ಘಟನೆಯೊಂದು ನಡೆದಿದೆ.

ಅಮೆರಿಕ ದೇಶದ ವಿಜ್ಞಾನಕ್ಕೆ ಸಂಬಂಧಿಸಿದ ಕಾದಂಬರಿ ಆಧಾರಿತ ವೆಬ್ ಸಿರೀಸ್ ಆದ ದ ಎಕ್ಸ್ಪನ್ಸ್ ಎಂಬ ಸರಣಿ ಚಿತ್ರದಲ್ಲಿ ಬರುವ ಬಾಹ್ಯಾಕಾಶ ನೌಕೆಯಲ್ಲಿ ಭಾರತ ದೇಶದ ಸ್ವತಂತ್ರ ಹೋರಾಟಗಾರರಲ್ಲಿ ಮಂಚೂಣಿಯಲ್ಲಿ ಬರುವ ವೀರ ರಾಣಿ ಚೆನ್ನಮ್ಮನ ಹೆಸರನ್ನು ಇಡಲಾಗಿದೆ ಎಂದರೆ ನೀವು ನಂಬಲೇಬೇಕು. ಹೌದು ವಿಜ್ಞಾನ ಆಧಾರಿತ ಈ ವೆಬ್ಸಿರಿಸೆ ಸರಣಿಯ ದೃಶ್ಯವೊಂದರಲ್ಲಿ ಬಾಹ್ಯಾಕಾಶನೌಕೆಗೆ ನಮ್ಮ ಹೆಮ್ಮೆಯ ಚನ್ನಮ್ಮನ ಹೆಸರು ಇಡಲಾಗಿದೆ.

ಈ ಕುರಿತು ಮೊದಲಬಾರಿಗೆ ಆದರ್ಶ್ ಕುಮಾರ್ ಎಂಬ ವ್ಯಕ್ತಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಾನು ಅಮೆಜಾನ್ ಪ್ರೈಮ್ ನಲಲ್ಲಿ ದ ಎಕ್ಸ್ಪಾನ್ಸ್ ವೆಬ್ ಸಿರೀಸ್ ನೋಡುವಾಗ ಬಾಹ್ಯಾಕಾಶ ನೌಕೆ ಒಂದಕ್ಕೆ ಹೆಸರು ಇರುವುದನ್ನು ಗಮನಿಸಿದೆ. ಇದನ್ನು ನೋಡಿ ನನಗೆ ನಮ್ಮ ನಾಡಿನ ಬಗೆಗೆ ತುಂಬಾ ಹೆಮ್ಮೆಯಾಯಿತು ಎಂದು ಬರೆದು ಕನ್ನಡದ ಖ್ಯಾತ ನಟರಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಾಕಿಂಗ್ ಸ್ಟಾರ್ ಯಶ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕರ್ನಾಟಕ ಮುಖ್ಯಮಂತ್ರಿಯ ಆಫೀಸಿಯಲ್ ಖಾತೆಗೆ ಟ್ಯಾಗ್ ಮಾಡಿದ್ದಾರೆ, ಇದೀಗ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗನೂ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತಹ ವಿಷಯವಾಗಿದೆ.

%d bloggers like this: