ಬಳ್ಳಾರಿಯಲ್ಲಿ ಕೆಎಲ್ ರಾಹುಲ್, ಈ ಕಾರಣಕ್ಕಾಗಿ ಬಳ್ಳಾರಿಗೆ ಆಗಮಿಸಿದ ರಾಹುಲ್

ನಮ್ಮ ಭಾರತ ತಂಡದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕರ್ನಾಟಕದ ಹೆಮ್ಮೆಯ ಆಟಗಾರ ಕೆ ಎಲ್ ರಾಹುಲ್, ಅತೀ ಹೆಚ್ಚು ಫ್ಯಾನ್ ಫಾಲ್ಲೋವರ್ಸ್ ಇರುವ ಕ್ರಿಕೆಟಿಗರಲ್ಲಿ ಒಬ್ಬರು. ಇವರು ಏನೇ ಮಾಡಿದರೂ, ಎಲ್ಲಿಗೇ ಹೊರಟರೂ ಪ್ರತಿಯೊಂದು ವಿಷಯದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಟೆಸ್ಟ್ ಸರಣಿಯಲ್ಲಿ ರಿಸ್ಟ್ ಇಂಜ್ಯೂರಿಯಿಂದಾಗಿ ಪಂದ್ಯದಿಂದ ಹೊರಗೂಳಿದಿದ್ದು ಎಲ್ಲರನ್ನೂ ಆತಂಕಕ್ಕೊಳಪಡಿಸಿತ್ತಾದರೂ ಈಗ ರಾಹುಲ್ ಗುಣಮುಖರಾಗಿದ್ದಾರೆ.

ಕಿಂಗ್ಸ್ ಇಲೆವನ್ ಪಂಜಾಬನ ನಾಯಕರಾದ ಕೆ ಎಲ್ ರಾಹುಲ್ ಅವರನ್ನು ಆ ತಂಡದ ಮಾಲೀಕರಾದ ಪ್ರೀತಿ ಜಿಂಟಾ ವಿಡಿಯೋ ಕಾಲ್ ಮಾಡುವುದರ ಮೂಲಕ ಅವರ ಆರೋಗ್ಯವನ್ನು ವಿಚಾರಿಸಿದರು. ಇದು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಅತೀ ಹೆಚ್ಚು ವೈರಲ್ ಆಗಲು ಕಾರಣ, ಕೆ ಎಲ್ ರಾಹುಲ್ ಅವರು ಪ್ರೀತಿ ಜಿಂಟಾ ಅವರೊಂದಿಗೆ ಕನ್ನಡದಲ್ಲಿ ಮಾತನಾಡಿದ್ದು.

ಹೌದು ಪ್ರೀತಿ ಜಿಂಟಾ ಅವರು ರಾಹುಲ್ ಅವರಿಗೆ ರಿಸ್ಟ್ ಇಂಜ್ಯೂರಿ ಆಗಿರುವುದರ ಬಗ್ಗೆ ಕನ್ನಡದಲ್ಲಿ ಮಾತನಾಡಲು ಹೇಳಿದಾಗ ರಾಹುಲ್ ಅವರು ರಿಸ್ಟ್ ಇಂಜ್ಯೂರಿ ಆಗಿರುವುದರ ಬಗ್ಗೆ ತುಂಬಾ ಬೇಸರವಿದೆ ಆದರೆ ಆದಷ್ಟು ಬೇಗ ರಿಕವರಿ ಆಗ್ತೀನಿ ಎಂದು ಕನ್ನಡದಲ್ಲಿ ಉತ್ತರ ನೀಡಿದ್ದರು. ಇದನ್ನು ನೋಡಿದ ಎಲ್ಲಾ ಕನ್ನಡಾಭಿಮಾನಿಗಳು ಅವರ ಕನ್ನಡ ಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಹಾಗೆಯೇ ಕೆ ಎಲ್ ರಾಹುಲ್ ಅವರ ಕನ್ನಡ ಪ್ರೀತಿಯ ಮತ್ತೊಂದು ನಿದರ್ಶನವೆಂಬತೆ, ಕರ್ನಾಟಕದ ಬಳ್ಳಾರಿಗೆ ಕೆ ಎಲ್ ರಾಹುಲ್ ಅವರು ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಅತೀ ಹೆಚ್ಚು ಉಕ್ಕು ಮತ್ತು ಕಬ್ಬಿಣ ತಯಾರಿಸುವ ಕರ್ನಾಟಕದ ಬಳ್ಳಾರಿ ಬಳಿಯ ತೋರಣಗಲ್ ಜಿಂದಾಲ್ ಸಮೂಹ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ರಾಹುಲ್ ಆಯ್ಕೆ ಆಗಿದ್ದಾರೆ. ಇದೇ ಕಾರಣಕ್ಕೆ ಅವರು ಜಿಂದಾಲ್ ಫ್ಯಾಕ್ಟರಿಗೆ ಭೇಟಿ ನೀಡಿದ್ದಾರೆ.

%d bloggers like this: