ಮತ್ತೆ ಆರಂಭವಾದ ಪಬ್ಜಿ! ಹೌದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯ ಗೇಮ್ ಗಳಲ್ಲಿ ಒಂದಾಗಿದ್ದ ಈ ಪಬ್ಜಿ ಎಲ್ಲರ ಅಚ್ಚುಮೆಚ್ಚಿನ ಗೇಮ್ ಆಗಿತ್ತು ಅದರಲ್ಲೂ ಯುವಕರ ಹಾಟ್ ಫೇವರೇಟ್ ಗೇಮ್ ಎಂಬಂತೆ ತನ್ನ ಪ್ರಭಾವ ಬೀರಿತ್ತು. ಆದರೆ ದೇಶದ ಆರ್ಥಿಕತೆ ಮತ್ತು ಆಂತರಿಕ ಭಧ್ರತೆಗಾಗಿ ಈ ಗೇಮ್ ಅನ್ನು ಭಾರತ ಸರ್ಕಾರ ನಿರ್ಭಂಧಿಸಲಾಗಿತ್ತು. ಇದೀಗ ಮತ್ತೆ ಕೆಲವು ಬದಲಾವಣೆಯೊಂದಿಗೆ ಅಂದರೆ ಪಬ್ ಜಿ ಆಡುವ ವ್ಯಕ್ತಿಗಳ ವೈಯಕ್ತಿಕ ಮಾಹಿತಿಯ ಸಂಗ್ರಹ ದ ಬಗ್ಗೆ ವಿಶೇಷ ಕಾಳಜಿ ವಹಿಸಿದೆ ಇದರಿಂದ ಬಳಕೆದಾರರ ಡೇಟಾ ಎಲ್ಲ ರೀತಿಯಲ್ಲೂ ಸುರಕ್ಷತೆ ಒಳಗೊಂಡಿದೆ ಎಂದು ಕಂಪನಿ ಹೇಳಿದೆ. ಈ ಪಬ್ ಜಿ ಮೈಂಡ್ ಗೇಮ್ ಆಗಿದ್ದು ಹೊಸದಾಗಿ ಲಾಂಚ್ ಆಗುತ್ತಿರುವ ಈ ಈ ಗೇಮ್ ನ ಆಟದಲ್ಲಿ ವರ್ಚುಯಲ್ ಸಿಮ್ಯುಲೇಷನ್ ತರಬೇತಿ ಮೈದಾನ ಮತ್ತು ಆರಂಭದ ಬಟ್ಟೆಯ ಜೊತೆಗೆ ಹೊಸ ವಿನ್ಯಾಸ ಹೊಂದಿರುವ ಅಕ್ಷರಗಳನ್ನು ಸೇರಿಸಲಾಗಿದೆ. ಮೊದಲು ಪಬ್ ಜೀ ಗೇಮ್ ಆಡುವಾಗ ಆಟಗಾರರು ಬಣ್ಣವನ್ನು ಬದಲಾಯಿಸುವ ಆಯ್ಕೆಯಿತ್ತು ಆದರೆ ಇದೀಗ ಬರುತ್ತಿರುವ ಹೊಸ ಅವೃತ್ತಿಯಲ್ಲಿ ಡೀಫಾಲ್ಟ್ ಹಸಿರು ಪರಿಣಾಮಗಳಿಗೆ ಸೇರಿಸಲಾಗಿದೆ ಇದರಿಂದ ಆಟದ ಪ್ರಾಕ್ಟಿಕಲ್ ರೀತಿ ತೋರಿಸಬಹುದು ಎನ್ನಲಾಗಿದೆ.
ಮೊದಲು ಪಬ್ ಜಿ ಗೇಮ್ ಗಳಲ್ಲಿ ಯಾವುದೇ ರೀತಿಯ ಸಮಯದ ನಿರ್ಬಂಧ ಇರಲಿಲ್ಲ ಇದರಿಂದ ಆಟಗಾರರು ವಿರಾಮವಿಲ್ಲದೆ ನಿರಂತರವಾಗಿ ಗೇಮ್ ನಲ್ಲಿ ಮುಳುಗುತ್ತಿದ್ದರು, ಆದರೆ ಈಗ ಗೇಮ್ ನಲ್ಲಿ ಸಮಯದ ಮಿತಿಯನ್ನು ಇರಿಸಲಾಗಿದೆ. ಪಬ್ ಜಿ ಕಾರ್ಪೋರೇಷನ್ ನಿರ್ವಹಣೆಗಾಗಿ ಹೊಸ ನೂರಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡಿದೆ. ಪಬ್ ಜಿ ಕಾರ್ಪೋರೆಷನ್ ಹೇಳುವ ಪ್ರಕಾರ ಕ್ರಾಪ್ಟನೋ ಎಂಬ ಕಂಪನಿಯ ಜೊತೆಗೂಡಿ ಬರೋಬ್ಬರಿ 100 ಮಿಲಿಯನ್ ಅಂದರೆ 750 ಕೋಟಿಯಷ್ಟು ಬಂಡವಾಳ ಹೂಡಿಕೆ ಮಾಡಲಾಗುತ್ತದೆ ಎಂದು ತಿಳಿಸಿವೆ. ಇದರಿಂದ ಕ್ರೀಡೆ, ಮನರಂಜನೆ, ತಂತ್ರಜ್ಞಾನ ಮಾಹಿತಿ ಕ್ಷೇತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಭಿವೃದ್ದಿ ಪಡಿಸಬಹುದಾಗಿದೆ. ಪಬ್ಜಿ ಕಾರ್ಪೋರೇಷನ್ ಹೇಳಿರುವ ಪ್ರಕಾರ ಪಂದ್ಯಾವಳಿಗಳು ಬಹುಮಾನ ಪೂಲ್ಗಳು ಮತ್ತು ಇತರೆ ಸ್ಪರ್ಧೆಗಳನ್ನು ಹೊಸ ಆವೃತ್ತಿಯ ಗೇಮ್ ನಲ್ಲಿ ಅಳವಡಿಸಲಾಗಿದೆ. ಪಬ್ ಜಿ ಗೇಮ್ ಭಾರತದಲ್ಲಿ ನಿರ್ಮಿತವಾಗುತ್ತಿರು ಗೇಮ್ ಆಗಿರುವುದರಿಂದ ಒಂದಷ್ಟು ಕಠಿಣ ನಿಯಮಗಳನ್ನು ಸಹ ಪರಿಚಯಿಸುತ್ತಿದ್ದು ಬಳಕೆದಾರರ ಮಾಹಿತಿ ಮತ್ತಷ್ಟು ಸುರಕ್ಷತೆಯನ್ನು ಹೊಂದಿರುತ್ತದೆ ಎಂದು ಪಬ್ ಜಿ ಕಾರ್ಪೋರೇಷನ್ ಆಫ್ ಇಂಡಿಯಾ ತನ್ನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.