ನೈಜ ಘಟನೆ ಆಧಾರಿತ ಚಿತ್ರದಲ್ಲಿ ಮಾಜಿ ಸಿ.ಎಂ. ಅಭಿನಯಿಸುವ ಮೂಲಕ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ. ಸಾಮಾನ್ಯವಾಗಿ ಈ ರಾಜಕೀಯ ಮತ್ತು ಸಿನಿಮಾ ಕ್ಷೇತ್ರಕ್ಕೆ ವಿಶೇಷವಾದ ನಂಟಿದೆ. ಸಿನಿಮಾ ಕ್ಷೇತ್ರದ ಮೂಲಕ ಅನೇಕ ಮಂದಿ ರಾಜಕೀಯ ರಂಗಕ್ಕೆ ಪ್ರವೇಶ ಪಡೆದಿದ್ದಾರೆ. ಅದಕ್ಕೆ ತಕ್ಕಂತೆ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಉನ್ನತ ಪದವಿ ಮಂತ್ರಿಗಿರಿ ಕೂಡ ಅನುಭವಿಸಿದ್ದಾರೆ. ಅನುಭವಿಸುತ್ತಾ ಇದ್ದಾರೆ ಕೂಡ. ಇದೀಗ ರಾಜ್ಯದ ಮುಖ್ಯಮಂತ್ರಿ ಅಗಿ ಸೇವೆ ಸಲ್ಲಿಸಿದಂತಹ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಬಣ್ಣ ಹಚ್ಚುತ್ತಿದ್ದಾರೆ. ಹೌದು ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ತನುಜಾ ಎಂಬ ಯುವತಿ ಕೋವಿಡ್ ಸಮಸ್ಯೆಯಿಂದಾಗಿ ನೀಟ್ ಪರೀಕ್ಷೆ ಬರೆಯುವುದರಿಂದ ವಂಚಿತರಾಗಿದ್ದರು.

ಆ ಸಂಧರ್ಭದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್, ಪತ್ರಕರ್ತರಾದ ವಿಶ್ವೇಶ್ವರ ಭಟ್ ಮತ್ತು ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರ ಸಹಕಾರದಿಂದಾಗಿ ತನುಜಾ ಎಂಬ ಯುವತಿ ನೀಟ್ ಪರೀಕ್ಷೆ ಬರೆದರು. ಅಷ್ಟೇ ಅಲ್ಲದೆ ಆ ನೀಟ್ ಪರೀಕ್ಷೆಯಲ್ಲಿ ತನುಜಾ ಉತ್ತೀರ್ಣಳಾಗಿ ಯಶಸ್ವಿ ಕೂಡ ಆಗಿ ದೇಶದ ಗಮನವನ್ನ ತನ್ನತ್ತ ಸೆಳೆದರು. ಈ ಯಶೋಗಾಥೆಯನ್ನೇ ಇದೀಗ ಸಿನಿಮಾ ಮಾಡಲಾಗುತ್ತಿದೆ. ರಾಜ್ಯ ಪ್ರಶಸ್ತಿ ವಿಜೇತ ಹರೀಶ್ ಎಂ.ಡಿ.ಹಳ್ಳಿ ಎಂಬುವವರು ಈ ಕಥೆಯನ್ನ ಸಿನಿಮಾ ಮಾಡಲು ಉತ್ಸುಕರಾಗಿ ನಿರ್ದೇಶನ ಮಾಡುತ್ತಿದ್ದಾರೆ.



ಈ ತನುಜಾ ಚಿತ್ರ ಮಾಡಲು ಅವರಿಗೆ ಸ್ಪೂರ್ತಿ ಅಂದರೆ ತನುಜಾ ಎಂಬ ಯುವತಿ ನೀಟ್ ಪರೀಕ್ಷೆ ಬರೆಯಲು ಬರೋಬ್ಬರಿ 350 ಕಿ ಮೀ ದೂರ ಪ್ರಯಾಣ ಮಾಡಿದ್ದು ನಿಜಕ್ಕೂ ಕೂಡ ರೋಚಕತೆ ಎಂಬುದಾಗಿತ್ತಂತೆ. ಇನ್ನು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಡಾ.ಕೆ.ಸುಧಾಕರ್, ಪತ್ರಕರ್ತರಾದ ವಿಶ್ವೇಶ್ವರ ಭಟ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ, ಬೇಬೀ ಶ್ರೀ, ನಟಿಸುತ್ತಿದ್ದಾರೆ.



ಇವರ ಜೊತೆಗೆ ಮತ್ತೊಂದು ಪ್ರಧಾನ ಪಾತ್ರದಲ್ಲಿ ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ನಟಿಸಿದ್ದ ಸಂಪತ್ ಪಾವೂರು ಅವರು ಕೂಡ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಪೋಸ್ಟರ್ ಇತ್ತೀಚೆಗೆ ಲಾಂಚ್ ಆಗಿದೆ. ಈ ತನುಜಾ ಚಿತ್ರಕ್ಕೆ ಜೆ.ಎಂ.ಪ್ರಸಾದ್ ಡೈಲಾಗ್ ಬರೆದಿದ್ದು, ಪ್ರದ್ಯೋತನ ರಾಗ ಸಂಯೋಜನೆ ಮಾಡಿದ್ದಾರೆ. ಒಟ್ಟಾರೆಯಾಗಿ ಬಿಯಾಂಡ್ ವಿಶನ್ಸ್ ಸಿನಿಮಾಸ್ ಬ್ಯಾನರಡಿಯಲ್ಲಿ ನಿರ್ಮಾಣ ಆಗುತ್ತಿರುವ ತನುಜಾ ಚಿತ್ರದಲ್ಲಿ ರಾಜಕೀಯ ನಾಯಕರು ನಟಿಸಿರುವುದು ಚಿತ್ರಕ್ಕೆ ಮತ್ತಷ್ಟು ಮೆರಗು ತಂದಿದೆ ಎನ್ನಬಹುದಾಗಿದೆ.