ಬಂತು ತೂಫಾನ್, ಎಲ್ಲೆಡೆ ಸದ್ದು ಮಾಡುತ್ತಿದೆ ಕೆಜಿಎಫ್ ತೂಫಾನ್ ಸಾಂಗ್

ಇಡೀ ವಿಶ್ವದ ಚಿತ್ರರಂಗದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಾಪ್ಟರ್2 ಸಿನಿಮಾದ ವೀಡಿಯೋ ಸಾಂಗ್ ಇಂದು ಬಿಡುಗಡೆ ಆಗಿದೆ. ಹೌದು ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಾಯಿಸಿ ಇಡೀ ವಿಶ್ವದ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನಿಬ್ಬೆರಗಾಗಿ ನೋಡುವಂತೆ ಮಾಡಿದ ಪ್ರಶಾಂತ್ ನೀಲ್ ಅವರ ಅಧ್ಭುತ ಕಲ್ಪನೆಯಲ್ಲಿ ಮೂಡಿ ಬರುತ್ತಿರುವ ಕೆಜಿಎಫ್2 ಚಿತ್ರದ ಟೀಸರ್ ಮತ್ತು ಪೋಸ್ಟರ್ ಮೂಲಕ ಎಲ್ಲಿಡೆ ಭಾರಿ ಪ್ರಶಂಸೆ ಪಡೆದುಕೊಂಡು ಸಿನಿ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ. ಇದೇ ಏಪ್ರಿಲ್ 14 ರಂದು ಪಂಚ ಭಾಷೆಗಳಲ್ಲಿ ಕೆಜಿಎಫ್ ಚಾಪ್ಟರ್2 ಚಿತ್ರ ಬೆಳ್ಳಿ ಪರದೆಯಲ್ಲಿ ಭಾರತ ಮಾತ್ರ ಅಲ್ಲದೆ ವಿವಿಧ ದೇಶಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಈ ಒಂದು ಕ್ಷಣಕ್ಕಾಗಿ ಇಡೀ ವಿಶ್ವ ಚಿತ್ರರಂಗ ಕಾತರದಿಂದ ಕಾಯುತ್ತಿದೆ.

ಹೊಂಬಾಳೆ ಫಿಲಂಸ್ ಬ್ಯಾನರಡಿಯಲ್ಲಿ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಅವರು ಬರೋಬ್ಬರಿ ನೂರು ಕೋಟಿಯ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕೆಜಿಎಫ್ ಚಾಪ್ಟರ್2 ಚಿತ್ರದ ತೂಫಾನ್ ಎಂಬ ವೀಡಿಯೋ ಸಾಂಗ್ ರಿಲೀಸ್ ಮಾಡಲು ಸಜ್ಜಾಗಿದೆ. ಕೆಜಿಎಫ್ ಚಾಪ್ಟರ್2 ಚಿತ್ರದ ಆಡಿಯೋ ರೈಟ್ಸ್ ಅನ್ನ ಕನ್ನಡದ ಸುಪ್ರಸಿದ್ದ ಆಡಿಯೋ ಸಂಸ್ಥೆ ಆಗಿರುವ ಲಹರಿ ಆಡಿಯೋ ಸಂಸ್ಥೆ ಬರೋಬ್ಬರಿ 7.2 ಕೋಟಿ ರೂಗೆ ಖರೀದಿ ಮಾಡಿದೆ. ಈಗಾಗಲೇ ಕೆಜಿಎಫ್ ಭಾಗ ಒಂದರ ಹಾಡುಗಳು ಸಿನಿ ಪ್ರೇಕ್ಷಕರಿಗೆ ಹುಚ್ಚೆಸಿತ್ತು. ಅದರಂತೆ ಕೆಜಿಎಫ್ ಚಿತ್ರದ ಮುಂದುವರಿದ ಭಾಗವಾಗಿ ಚಾಪ್ಟರ್2 ರಲ್ಲೂ ಕೂಡ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಮ್ಯೂಸಿಕ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಈಗಾಗಲೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೇಳಿರುವ ಸಿನಿ ಪ್ರೇಕ್ಷಕರಿಗೆ ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿದೆ.

ತೂಫಾನ್ ಎಂಬ ವೀಡಿಯೊ ಸಾಂಗ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇತ್ತೀಚೆಗೆ ತಾನೇ ಈ ಚಿತ್ರದ ಹಾಡೊಂದು ಚಿತ್ರೀಕರಣ ನಡೆದಿದೆ. ಇದರ ನಡುವೆ ಚಿತ್ರ ತಂಡ ಕೆಜಿಎಫ್2 ಸಿನಿಮಾದ ಪ್ರಚಾರಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಕನ್ನಡದ ಗೋಲ್ಡನ್ ಸಿನಿಮಾ ಕೆಜಿಎಫ್ ಚಾಪ್ಟರ2 ಸಿನಿಮಾ ಹೊಸ ಇತಿಹಾಸ ಸೃಷ್ಟಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಸಿನಿ ಪಂಡಿತರು ಭವಿಷ್ಯ ನುಡಿದಿದ್ದಾರೆ. ಕೆಜಿಎಫ್2 ನಲ್ಲಿ ಬಾಲಿವುಡ್ ದಿಗ್ಗಜ ನಟರಾದ ಸಂಜಯ್ ದತ್ ಅವರು ಅಧೀರನ ಪಾತ್ರದಲ್ಲಿ, ರವೀನಾ ಟಂಡನ್, ಪ್ರಕಾಶ್ ರಾಜ್, ಶ್ರೀಕಾಂತ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಎಲ್ಲಾ ಭಾಷೆಯ ನಟ ನಟಿಯರು ನಟಿಸಿರುವುದರಿಂದ ಭಾರತೀಯ ಚಿತ್ರರಂಗದಾದ್ಯಂತ ಈ ಕೆಜಿಎಫ್2 ಚಿತ್ರಕ್ಕೆ ಭಾರಿ ಬೇಡಿಕೆಯುಂಟಾಗಿದೆ. ಈಗಾಗಲೇ ವಿತರಕರು ಈ ಚಿತ್ರದ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ.

%d bloggers like this: