ಹೀನಾಯವಾಗಿ ಸೋತರೂ ಕುರ್ಚಿ ಬಿಡದ ಟ್ರಂಪ್ ಗೆ ಬರಾಕ್ ಒಬಾಮ ಹೆಂಡತಿಯಿಂದ ಬುದ್ದಿಮಾತು

ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತು ಮೊಂಡಾಟ ಶುರುಮಾಡಿದ ಡೊನೋಲ್ಡ್ ಟ್ರಂಪ್. ಹೌದು ಕಳೆದ ವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ ಟ್ರಂಪ್ ತದನಂತರ ಸೋಲನ್ನು ಒಪ್ಪಿಕೊಳ್ಳದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಚುನಾವಣೆಯ ಪ್ರಕ್ರಿಯೆಯಲ್ಲಿ ದೋಷ ಹುಡುಕುತ್ತಿದ್ದು, ತಮ್ಮ ಅಧಿಕಾರವನ್ನು ಕಳೆದುಕೊಂಡ ಮೇಲೂ ಅವರು ಅಧ್ಯಕ್ಷರ ಕಛೇರಿಯಾದ ವೈಟ್ ಹೌಸ್ ಅನ್ನು ಹಸ್ತಾಂತರಿಸದೆ ಕ್ಯಾತೆ ತೆಗೆಯುತ್ತಿದ್ದಾರೆ. ಮತದಾನ ಎಣಿಕೆಯ ಸಂಧರ್ಭದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಗೊಂದಲ ಸೃಷ್ಠಿಮಾಡುತ್ತಾ ಅಮೇರಿಕಾದ ಜನರನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ. ಅಮೇರಿಕಾದ ಸಂಪ್ರದಾಯದ ಪ್ರಕಾರ ಚುನಾವಣೆಯಲ್ಲಿ ಪರಾಭವಗೊಂಡವರು ಪಕ್ಷಭೇಧ ಮರೆತು ಗೆದ್ದವರನ್ನು ವೈಟ್ ಹೌಸ್ಗೆ ಸ್ವಾಗತಿಸಿ, ಅವರಿಗೆ ತಮ್ಮ ಅನುಭವವನ್ನು ಹಂಚಿಕೊಂಡು ಗೌರವಪೂರ್ವಕವಾಗಿ ಅಧಿಕಾರ ಹಸ್ತಾಂತರಿಸಬೇಕು ಆದರೆ ಈ ಪ್ರಕ್ರಿಯೆಯನ್ನು ಟ್ರಂಪ್ ಪಾಲಿಸದೇ ವೈಟ್ ಹೌಸ್ ಖಾಲಿಮಾಡದೇ ಸತಾಯಿಸುತ್ತಿದ್ದಾರೆ.

ಟ್ರಂಪ್ ಅವರ ಈ ನಡವಳಿಕೆಯಿಂದಾಗಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಧರ್ಮಪತ್ನಿ ಮಿಚೆಲ್ ಒಬಾಮ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಇವರ ವಿರುದ್ದ ಕೆಂಡಕಾರಿದ್ದಾರೆ. ನಾವು ಚುನಾವಣೆಯಲ್ಲಿ ಸೋತಾಗ ನಮ್ಮ ವಿರುದ್ದ ಟ್ರಂಪ್ ಎಷ್ಟೇ ಆರೋಪ ಮಾಡಿದ್ದರು ಸಹ ನಾವು ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲನಿಯ ಟ್ರಂಪ್ ಅವರನ್ನು ಗೌರವದಿಂದ ಆಧರಿಸಿ ಅವರಿಗೆ ವೈಟ್ ಹೌಸ್ ಹಸ್ತಾಂತರಿಸಿದ್ದೆವು. ನಮಗೂ ಸಹ ಜಾರ್ಜ್ ಬುಷ್ ದಂಪತಿಗಳೂ ಸಹ ತಮ್ಮ ಅವಧಿ ಮುಗಿದ ಮೇಲೆ ನಮಗೆ ಸ್ವಾಗತಕೋರಿ ವೈಟ್ ಹೌಸ್ ಬಿಟ್ಟುಕೊಟ್ಟಿದ್ದರು. ಇದೇ ರೀತಿ ಪ್ರಸ್ತುತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋಯ್ ಬಿಡನ್ ಅವರಿಗೆ ಟ್ರಂಪ್ ಅವರು ವೈಟ್ ಹೌಸ್ ಅನ್ನು ಹಸ್ತಾಂತರಿಸಬೇಕು ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಅಮೇರಿಕಾದ ಜನರ ಭಾವನೆ ಮತ್ತು ನಮ್ಮ ವ್ಯವಸ್ಥೆ, ಸಂಪ್ರದಾಯಕ್ಕೆ ಗೌರವಕೊಟ್ಟು ಅಧಿಕಾರದ ಕೀಲೀ ಕೈಯನ್ನು ಅವರಿಗೆ ಒಪ್ಪಿಸಬೇಕು ಎಂದು ಮಿಚೆಲ್ ಒಬಾಮ ಅವರು ತಮ್ಮ ಶೈಲಿಯಲ್ಲಿ ಚಾಟಿಬೀಸಿ ಮನವಿ ಮಾಡಿದ್ದಾರೆ.

%d bloggers like this: