ಬರೀ ಭಾರತ ಅಲ್ಲ, ಹಾಲಿವುಡ್ಗೂ ಹೊರಟಿತು ಕೆಜಿಎಫ್ ಚಾಪ್ಟರ್2

ಭಾರತ ಚಿತ್ರರಂಗದ ಯೂನಿವರ್ಸಲ್ ಸಿನಿಮಾ ಕೆಜಿಎಫ್ 2 ಏಪ್ರಿಲ್ 14 ರಂದು ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಕೆಜಿಎಫ್ 2 ಸಿನಿಮಾದ ಬಿಡುಗಡೆಗೆ ಇದೀಗ ಕೌಂಟ್ ಡೌನ್ ಶುರುವಾಗಿದೆ. ವಿಶ್ವದಾದ್ಯಂತ ಈ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಹೊಂಬಾಳೆ ನಿರ್ಮಾಣ ಸಂಸ್ಥೆ ಈಗಾಗಲೇ ದಿನಾಂಕವನ್ನು ಗೊತ್ತು ಮಾಡಿದೆ. ಈ ನಡುವೆ ಈ ಸಿನಿಮಾದ ಬಗ್ಗೆ ಇತ್ತೀಚೆಗೆ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ ಕೆಜಿಎಫ್ 2 ಹಾಲಿವುಡ್ ನಲ್ಲೂ ರಿಲೀಸ್ ಆಗಲಿದೆಯಂತೆ. ಈ ಸುದ್ದಿ ನಿಜವೇ ಆದಲ್ಲಿ, ನಮ್ಮ ಸ್ಯಾಂಡಲ್ವುಡ್ ಗೆಲುವಿನ ಶಿಖರವನ್ನೇರುವುದಂತೂ ಗ್ಯಾರಂಟಿ. ನಮ್ಮ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆ ಜಿ ಎಫ್ ಚಾಪ್ಟರ್ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆಯನ್ನು ಮೂಡಿಸಿದ ಸಿನಿಮಾ ಆಗಿದೆ.

ಯಶ್ ಅವರ ಹುಟ್ಟುಹಬ್ಬದಂದು ಡೇಂಜರ್ ಅಹೇಡ್ ಎಂಬ ಶೀರ್ಷಿಕೆಯೊಂದಿಗೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಬಿಡುಗಡೆಯಾದ ದಿನವೇ ಅತಿಹೆಚ್ಚು ಲೈಕ್ಸ್ ಮತ್ತು ವ್ಯೂಸ್ ಗಳನ್ನು ಪಡೆದು ದಾಖಲೆ ಬರೆದಿತ್ತು. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ, ರವಿ ಬಸ್ರೂರ್ ಸಂಗೀತ ಸಂಯೋಜನೆ ನೀಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಖಡಕ್ ವಿಲ್ಲನ್ ಆಗಿ ಅಧೀರ ಪಾತ್ರದಾರಿ ಸಂಜಯ್ ದತ್ ಮಿಂಚಲಿದ್ದು, ಇನ್ನು ಪ್ರಧಾನಮಂತ್ರಿಯ ಪಾತ್ರದಲ್ಲಿ ರಮಿಕಾ ಆಗಿ ಬಾಲಿವುಡ್ ನಟಿ ರವೀನಾ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್, ತೆಲುಗು ನಟ ರಮೇಶ್, ಪ್ರಕಾಶ್ ರಾಜ್ ಸೇರಿದಂತೆ ಅತಿ ದೊಡ್ಡ ತಾರಾಬಳಗ ಈ ಚಿತ್ರಕ್ಕಿದೆ.

ಕೆಲ ತಿಂಗಳ ಹಿಂದೆ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಾಪ್ಟರ್ 2 ನಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರ ಡಬ್ಬಿಂಗ್, ಎಲ್ಲಾ ಭಾಷೆಗಳಲ್ಲೂ ಮುಕ್ತಾಯಗೊಂಡಿದೆ ಎಂದು ಟ್ವೀಟ್ ಮಾಡಿದ್ದರು. ಯಶ್ ಅವರ ಡಬ್ಬಿಂಗ್ ಕೆಲಸ ಕೂಡ ಮುಕ್ತಾಯಗೊಂಡಿದ್ದು, ಹಿಂದಿಯಲ್ಲೂ ಕೂಡ ತಮ್ಮ ಪಾತ್ರಕ್ಕೆ ಅವರು ತಾವೇ ಡಬ್ ಮಾಡಿದ್ದಾರೆ ಎಂದಿದ್ದರು. ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ಈ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಕೂಡ ಹೊಸ ಅಪ್ಡೇಟ್ ನೀಡಿದ್ದರು. ಕೆಜಿಎಫ್ ಸಿಕ್ವೆಲ್ ನ ತಮ್ಮ ಡಬ್ಬಿಂಗ್ ಕೆಲಸವನ್ನು ಶ್ರೀನಿಧಿ ಕಂಪ್ಲೀಟ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಡಬ್ಬಿಂಗ್ ಮಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿರುವ ಇವರು, ಈ ಚಿತ್ರಕ್ಕೆ ಹೃದಯಪೂರ್ವಕವಾಗಿ ಕೆಲಸ ಮಾಡಿದ್ದೇನೆ ಎಂದು ಬರೆದುಕೊಂಡಿದ್ದರು.

ಎಲ್ಲರ ಡಬ್ಬಿಂಗ್ ಕೆಲಸ ಪೂರ್ಣಗೊಳ್ಳುತ್ತಿದ್ದು ಏಪ್ರಿಲ್ 14 ರಂದು ಬಾಕ್ಸ್ ಆಫೀಸ್ ಧೂಳೆಬ್ಬಿಸಲು ರಾಕಿ ಬಾಯ್ ಸಜ್ಜಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗನ್ನು ಮರು ಚಿತ್ರೀಕರಣ ಮಾಡಲು ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಚಿತ್ರತಂಡದಲ್ಲಿ ಚರ್ಚೆ ನಡೆದಿದ್ದು, ಈ ಹಾಡಿಗಾಗಿ ಇನ್ನೂ ಐದು ದಿನಗಳ ಶೂಟಿಂಗ್ ನಡೆಯಬೇಕಿದೆ. ಈ ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗ್ ಈಗಾಗಲೇ ಚಿತ್ರೀಕರಣಗೊಂಡಿತ್ತು. ಆದರೆ ಈ ಹಾಡು ಮೂಡಿ ಬಂದಿರುವುದರ ಬಗ್ಗೆ ನಿರ್ದೇಶಕರಿಗೆ ಅಸಮಾಧಾನವಿದೆ. ಹೀಗಾಗಿ ಈ ಹಾಡನ್ನು ಮತ್ತೆ ಹೊಸದಾಗಿ ಚಿತ್ರೀಕರಿಸಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾಹಿತಿ ದೊರಕಿತ್ತು. ಇವೆಲ್ಲಾ ಸುದ್ದಿಗಳ ನಡುವೆ ಮತ್ತೊಂದು ಸುದ್ದಿ ಗಾಂಧಿನಗರವನ್ನು ಪ್ರವೇಶಿಸಿದೆ.

ಅದೇನೆಂದರೆ ಕೆಜಿಎಫ್ 2 ಸಿನಿಮಾ ಇಂಗ್ಲಿಷನಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಂದುಕೊಂಡಂತೆ ಆದರೆ ರಾಕಿ ಬಾಯ್ ಹಾಲಿವುಡ್ ನಲ್ಲೂ ಹವಾ ಕ್ರಿಯೆಟ್ ಮಾಡಲಿದ್ದಾರೆ. ಈಗಾಗಲೇ ಐದು ಭಾಷೆಗಳಲ್ಲಿ ಹೆಸರು ಹಾಕಿ, ಆಯಾ ಭಾಷೆಯ ಪೋಸ್ಟರ್ ಮತ್ತು ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದೀಗ ಇಂಗ್ಲಿಷ್ನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕೇವಲ ಭಾಷೆ ಬದಲಾವಣೆ ಮಾತ್ರ ಆಗಬೇಕು. ಕೆಜಿಎಫ್ 1 ಸಿನಿಮಾ ವನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳಲ್ಲೂ ರಿಲೀಸ್ ಮಾಡಲಾಗಿತ್ತು. ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ಬರೆದಿದ್ದರಿಂದ ಚಿತ್ರತಂಡಕ್ಕೆ ಈ ಯೋಜನೆ ಬಂದಿದೆ. ಅಂದುಕೊಂಡಂತೆ ಆದರೆ ಯಶ್ ಅವರು ಹಾಲಿವುಡ್ ನಲ್ಲೂ ಮಿಂಚಲಿದ್ದಾರೆ.

%d bloggers like this: