ಬರೀ ಟೀಸರ್ ಇಂದಲೇ ಬರೋಬ್ಬರಿ ಇಷ್ಟು ಕೋಟಿ ಗಳಿಸಿದ ಕೆಜಿಎಫ್ ಚಾಪ್ಟರ್2

ಕೆಜಿಫ್ ಚಾಪ್ಟರ್ 1 ಚಿತ್ರದ ಬಗ್ಗೆ ಯಾರಿಗೇ ತಾನೆ ಗೊತ್ತಿಲ್ಲ ಹೇಳಿ, ನಮ್ಮ ಕರ್ನಾಟಕವಷ್ಟೇ ಅಲ್ಲದೇ ಇಡೀ ಭಾರತವೇ ಸ್ಯಾಂಡಲ್ವುಡನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಹಾಲಿವುಡ್ ಜನರು ಕೂಡ ಕೆಜಿಫ್ ಚಾಪ್ಟರ್ 1 ಚಿತ್ರದ ಮೇಕಿಂಗಗೆ ಮೆಚ್ಚುಗೆ ವ್ಯಕ್ತಪಡಿಸಿ ಶಭಾಷಗಿರಿ ಕೊಟ್ಟಿದ್ದರು. ನಾವೆಂದು ನಮ್ಮ ಕನ್ನಡ ಸಿನಿಮಾ ಇಷ್ಟು ದೊಡ್ಡ ಹೆಸರು ಮಾಡಬಹುದು ಎಂದು ಊಹೆ ಕೂಡ ಮಾಡಿರಲಿಲ್ಲ ಅಲ್ವಾ, ಯಶ್ ಅವರು ಒಂದು ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಇಡೀ ಜಗತ್ತೇ ನಮ್ಮ ಸ್ಯಾಂಡಲ್ವುಡ್ ನತ್ತ ತಿರುಗಿ ನೋಡುವಂತೆ ಮಾಡುತ್ತೇವೆ ಎಂದು ಹೇಳಿದ್ದರು.

ಅವರು ಹೇಳಿದಂತೆ ಇಡೀ ಜಗತ್ತಿನ ಸಿನಿಪ್ರಪಂಚವೇ ನಮ್ಮ ಸ್ಯಾಂಡಲ್ವುಡ್ ನತ್ತ ಆಶ್ಚರ್ಯದಿಂದ ನೋಡಿತ್ತು. ಕೆಲವು ವರ್ಷಗಳ ಹಿಂದೆ ಬಾಹುಬಲಿ ಚಿತ್ರ ರಿಲೀಸ್ ಆದಾಗ, ಬಾಹುಬಲಿಯೇ ಭಾರತದ ಅತೀ ದೊಡ್ಡ ಸಿನಿಮಾ ಆಗಲಿದೆ ಎಂದು ಎಷ್ಟೋ ಜನ ಭವಿಷ್ಯ ನುಡಿದಂತೆ ಹೇಳಿದ್ದರು. ಆದರೆ ನಮ್ಮ ಕೆಜಿಫ್ ಚಾಪ್ಟರ್ 1 ಸಿನಿಮಾ ಎಲ್ಲರ ಊಹೆಗಳನ್ನು ಮೀರಿ ಯಶಸ್ಸಿನ ಉತ್ತುಂಗಕ್ಕೆರಿ, ಬಾಹುಬಲಿಯ ಎಲ್ಲಾ ರೆಕಾರ್ಡಗಳನ್ನು ಅತೀ ಸುಲಭವಾಗಿ ಮುರಿಯಿತು ಎಂದರೆ ತಪ್ಪಾಗಲಾರದು.

ಕೆಜಿಫ್ ಚಾಪ್ಟರ್ 1 ಸಿನಿಮಾ ನೋಡಿದ ಎಷ್ಟೋ ಜನ ಸ್ಟಾರ್ ನಟರು ಕೆಜಿಫ್ ಚಾಪ್ಟರ್ 2 ಸಿನಿಮಾದಲ್ಲಿ ನಟಿಸುವ ಅವರ ಆಸೆಯನ್ನು ವ್ಯಕ್ತಪಡಿಸಿದರು. ಇದನ್ನು ಕುರಿತು ಒಬ್ಬ ಹೆಸರಾಂತ ನಿರ್ದೇಶಕ ” ಕೆಜಿಫ್ ಚಾಪ್ಟರ್ 1 ಚಿತ್ರದ ಮೊದಲು ಬಾಲಿವುಡ್ ಅಲ್ಲ ಸೌತ್ ಇಂಡಿಯನ್ ಸಿನಿಮಾಗಳೇ ಸ್ಯಾಂಡಲ್ವುಡ್ ಅನ್ನು ನಿರ್ಲಕ್ಷಿಸುತ್ತಿದ್ದವು. ಆದರೆ ಸ್ಯಾಂಡಲ್ವುಡ್ ಈಗ ಎಲ್ಲರನ್ನೂ ನಿಬ್ಬೆರಗುಗೊಳಿಸಿದೆ” ಎಂದು ಟ್ವೀಟ್ ಮಾಡಿ ಶುಭಾಶಯ ಕೋರಿದ್ದರು.

ಕೆಜಿಫ್ ಚಾಪ್ಟರ್ 2 ಯಾವಾಗ ರಿಲೀಸ್ ಆಗುವುದೋ ಎಂದು ಕೆಜಿಫ್ ಚಾಪ್ಟರ್ 1 ಚಿತ್ರ ನೋಡಿದಾಗಿನಿಂದಲೂ ಎಲ್ಲ ಸಿನಿ ಪ್ರೇಕ್ಷಕರು ಕಾದುಕುಳಿತಿದ್ದರು. ಎಲ್ಲ ಸರಿ ಹೋಗಿದ್ದರೆ 2020 ಅಕ್ಟೋಬರನಲ್ಲಿಯೇ ಕೆಜಿಫ್ ಚಾಪ್ಟರ್ 2 ರಿಲೀಸ್ ಆಗಬೇಕಿತ್ತು. ಕೋರೋನದಿಂದ ಕೆಜಿಫ್ ಚಾಪ್ಟರ್ 2 ನ ಎಲ್ಲ ಕೆಲಸಗಳು ಮುಂದೂಡಲ್ಪಟ್ಟವು. ಕೆಜಿಫ್ ಚಾಪ್ಟರ್ 2 ಚಿತ್ರದ ಟೀಸರ್ ಜನೇವರಿ 8, ಯಶ್ ಜನ್ಮದಿನದಂದು ರಿಲೀಸ್ ಆಗಬೇಕಿತ್ತು. ಆದರೆ ಕೆಲವು ಹ್ಯಾಕರಗಳ ಕೈಚಳಕದಿಂದ ಹಿಂದಿನ ದಿನವೇ ಟೀಸರನ ಕೆಲ ತುಣುಕುಗಳು ಲೀಕ್ ಆಗಿದ್ದವು.

ಆದ್ದರಿಂದ ಹಿಂದಿನ ದಿನವೇ ರಾತ್ರಿ ಹೊಂಬಾಳೆ ಫಿಲಂಸ್ ಅಫೀಷಿಯಲ್ ಪೇಜ್ ನವರು ಕೆಜಿಫ್ ಚಾಪ್ಟರ್ 2 ಟೀಸರ್ ರಿಲೀಸ್ ಮಾಡಿದರು. ಕೆಜಿಫ್ ಚಾಪ್ಟರ್ 2 ಟೀಸರ್ ಐದೂ ಭಾಷೆಗಳಿಗೆ ಹೊಂದಿಕೆ ಆಗುವಂತಿತ್ತು, ಹೀಗಾಗಿ ಬೇರೇ ಬೇರೇ ಟೀಸರ್ ಬಿಡುಗಡೆ ಮಾಡದೇ ಒಂದೇ ಟೀಸರ್ ರಿಲೀಸ್ ಆಗಿತ್ತು. ಟೀಸರನ ಕೆಲ ತುಣುಕುಗಳು ಲೀಕ್ ಆದರೂ ಸಹ ಕೆಜಿಫ್ ಚಾಪ್ಟರ್ 2 ಟೀಸರ್ ನೀರಿಕ್ಷೆಗೂ ಮೀರಿ 24 ಗಂಟೆಯಲ್ಲಿ 100 ಮಿಲಿಯನ್ ವ್ಯೂಸ್ ಪಡೆದು ಈ ಹಿಂದೆ ಇದ್ದ ಎಲ್ಲ ಚಿತ್ರಗಳ ದಾಖಲೆ ಮುರಿದು ಟ್ವಿಟ್ಟರನಲ್ಲಿ ನಂಬರ್ 1 ಟ್ರೆಂಡ್ ಇನ್ ಇಂಡಿಯಾ ಎಂದು ಹೆಸರು ಪಡೆದುಕೊಂಡಿದೆ.

ಬಾಲಿವುಡನ ಹೆಸರಾಂತ ನಟ ಹೃತಿಕ್ ರೋಷನ್ ಕೂಡ ಕೆಜಿಫ್ ಚಾಪ್ಟರ್ 2 ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು. ಇಷ್ಟೆಲ್ಲ ಹೆಸರು ಪಡೆದುಕೊಂಡ ನಮ್ಮ ಕೆಜಿಫ್ ಚಾಪ್ಟರ್ 2 ಟೀಸರ್ ಎಷ್ಟು ದುಡ್ಡು ಮಾಡಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಕೆಜಿಫ್ ಚಾಪ್ಟರ್ 2 ಟೀಸರ್ ಈವರೆಗೆ 16.19 ಕೋಟಿ ವೀಕ್ಷಣೆ ಕಂಡಿದೆ, ಕನ್ನಡ ಸಿನಿಮಾದ ಟೀಸರ್ ಒಂದು ಕಡಿಮೆ ಅವಧಿಯಲ್ಲಿ ಇಷ್ಟು ವೀಕ್ಷಣೆ ಕಂಡಿರುವುದು ಇದೇ ಮೊದಲ ಸಲ.

ಹೀಗಾಗಿ ಈ ಟೀಸರನಿಂದ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಗಳಿಕೆ ಬಂದಿದೆ ಎನ್ನಲಾಗುತ್ತಿದೆ. ವಿಡಿಯೋ ಏಷ್ಟು ವೀಕ್ಷಣೆ ಕಂಡಿದೆ ಎಂಬ ಇತ್ಯಾದಿ ವಿಚಾರ ಇಟ್ಟುಕೊಂಡು ಯೌಟ್ಯೂಬ್ ವಿಡಿಯೋಗೆ ಹಣ ನೀಡುತ್ತದೆ. ಹೊಂಬಾಳೆ ಫಿಲಂಸ್ ನಲ್ಲಿ ತೆರೆಕಂಡಿರುವ ಈ ಟೀಸರ್ ಬರೋಬ್ಬರಿ 2.18 ಕೋಟಿ ರೂಪಾಯಿ ದೊರೆತಿದೆ ಎನ್ನಲಾಗಿದೆ, ಇದು ಸ್ಯಾಂಡಲ್ವುಡನ ಎಷ್ಟೋ ಹೀರೋಗಳ ಸಂಭಾವನೆಗಿಂತ ಹೆಚ್ಚು ಅನ್ನೋದು ವಿಶೇಷ.

%d bloggers like this: