ಬಾಲಿವುಡ್ ಖ್ಯಾತ ನಟಿ ಕರಿಷ್ಮಾಕಪೂರ್ 10.11 ಕೋಟಿ ರೂಗೆ ತಮ್ಮ ಅಪಾರ್ಟಮೆಂಟ್ ಮಾರಾಟ ಮಾಡಿದ್ದಾರೆ. ಬಾಲಿವುಡ್ 19ರ ದಶಕದಲ್ಲಿ ಭಾರಿ ಜನಪ್ರಿಯಗೊಂಡಿದ್ದ ನಟಿ ಕರಿಷ್ಮಾ ಕಪೂರ್ ಅವರು ಮುಂಬೈ ನಗರದಲ್ಲಿರುವ ತಮ್ಮ ಹತ್ತನೆಯ ಅಂತಸ್ತಿನಲ್ಲಿರುವ ಅಪಾರ್ಟಮೆಂಟ್ ಒಂದನ್ನು ತಾಯಿ ಬಬಿತಾ ಜೊತೆಗೂಡಿ ಮಾರಾಟಮಾಡಿದ್ದಾರೆ. ಇನ್ನು ಕರಿಷ್ಮಾಕಪೂರ್ ಅವರು ಅಪಾರ್ಟ್ ಮೆಂಟ್ ಮಾರಾಟ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇವರು 2018 ರಲ್ಲಿಯೂ ಇವರ ಪ್ರಾಪರ್ಟಿಯೊಂದನ್ನು ಏಳು ಕೋಟಿಗೆ ಮಾರಾಟ ಮಾಡಿದ್ದಾರೆ. ಇವರು ತಮ್ಮ ಪ್ರಾಪರ್ಟಿ ಮಾರಾಟ ಮಾಡುತ್ತಿದ್ದಾರೆ ಅಂದಾಕ್ಷಣ ಇವರಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ ಅಂತಲ್ಲ. ಅಸಲಿಗೆ ಕರಿಷ್ಮಾ ಕಪೂರ್ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಇಳಿದಿದ್ದಾರೆ. ಹೀಗಾಗಿ ಫ್ಲ್ಯಾಟ್, ಅಪಾರ್ಟಮೆಂಟ್ ಗಳನ್ನು ಖರೀದಿ ಮತ್ತು ಮಾರಾಟ ಮಾಡುತ್ತಿದ್ದಾರೆ. ಇನ್ನು ಇವರ ಕುಟುಂಬ ಸಂಪೂರ್ಣವಾಗಿ ಬಣ್ಣದ ಲೋಕದಲ್ಲಿ ಬೀಡುಬಿಟ್ಟಿದ್ಧು, ಬಾಲಿವುಡ್ ನಲ್ಲಿರುವ ಪ್ರಮುಖ ನಟ ನಟಿಯರು ಇವರ ಸೋದರ ಸಂಬಂಧಿಗಳಾಗಿದ್ದಾರೆ.

ಕರೀನಾ ಕಪೂರ ಸೋದರಿಯಾದರೆ, ರಣ್ ಬೀರ್ ಕಪೂರ್ ಚಿಕ್ಕಮ್ಮನ ಮಗ ಜೊತೆಗೆ ಇವರ ಪತಿಯಾಗಿದ್ದ ಸಂಜಯ್ ಕಪೂರ್ ಕೂಡ ಬಾಲಿವುಡ್ ಪ್ರಖ್ಯಾತ ನಟರಾಗಿದ್ದಾರೆ. ಇನ್ನು 2016 ರಲ್ಲಿ ಸಂಜಯ್ ಕಪೂರ್ ಅವರೊಂದಿಗೆ ಕರಿಷ್ಮಾ ವಿವಾಹ ವಿಚ್ಚೇದನ ಪಡೆದಿದ್ದಾರೆ. ಇನ್ನು ಕರಿಷ್ಮಾ ಕಪೂರ್ ಇತ್ತೀಚೆಗೆ ಸುದ್ದಿಯಾಗಿರುವುದು ಮಹರಾಷ್ಟ್ರದ ಮುಂಬೈನಗರದ ಕಾರ್ನರ್ ಹತ್ತನೇಯ ಮಹಡಿಯಲ್ಲಿರುವ ಅಪಾರ್ಟಮೆಂಟ್ ವೊಂದನ್ನು ಬರೋಬ್ಬರಿ 10.11 ಕೋಟಿಗೆ ಮಾರಾಟ ಮಾಡಿದ್ದಾರೆ. ಈ ಅಪಾರ್ಟಮೆಂಟ್ ಪ್ರತಿ ಚದರಡಿಗೆ ಬರೋಬ್ಬರಿ 55000ರೂ ಮಾರುಕಟ್ಟೆಯ ಮೌಲ್ಯ ಹೊಂದಿದೆ, ಈ ಮೂಲಕ ಮುಂಬೈ ನಗರದ ಪ್ರಮುಖ ಉದ್ಯಮಿಗಳ ಸಾಲಿಗೆ ಕರಿಷ್ಮಾ ಕಪೂರ್ ಸೇರಿದ್ದಾರೆ.