ಬರೊಬ್ಬರಿ 10 ಲಕ್ಷ ಅನುಯಾಯಿಗಳನ್ನು ಪಡೆದ ಕನ್ನಡದ ಖ್ಯಾತ ಕಿರುತೆರೆ ನಟಿ

ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ನಟಿಯರನ್ನೇ ಸೈಡ್ ಹೊಡೆದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಶೈನ್ ಆಗ್ತಿದ್ದಾರೆ ಕಿರುತೆರೆಯ ಈ ಸೂಪರ್ ಸ್ಟಾರ್ ನಟಿ! ಹೌದು ಇತ್ತೀಚೆಗೆ ಸಿನಿಮಾ ಮತ್ತು ಕಿರುತೆರೆ ಕಲಾವಿದರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ತಮ್ಮ ಚಿತ್ರದ ಪ್ರಮೋಷನ್ ಅಥವಾ ಅದರ ಹೆಚ್ಚಿನ ಅಪ್ ಡೇಟ್ಸ್ ಗಳನ್ನ ನೀಡುತ್ತಲೇ ಇರುತ್ತಾರೆ. ಇದರ ನಡುವೆ ತಮ್ಮ ಪ್ರತಿಭೆಯನ್ನು ಈ ಇನ್ಸ್ಟಾಗ್ರಾಮ್ ರೀಲ್ಸ್ ಮಾಡುವ ಮೂಲಕವು ಕೂಡ ಅಪಾರ ಜನ ಮೆಚ್ಚುಗೆ ಗಳಿಸಿಕೊಂಡು ತಮ್ಮ ಹಿಂಬಾಲಕರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತಿರುತ್ತಾರೆ. ಅದರಲ್ಲಿಯೂ ಈ ನಟಿ ಮಣಿಯರು ಅಂತೂ ತಮ್ಮ ಚಿತ್ರಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ತಮ್ಮ ವೈಯಕ್ತಿಕ ಬದುಕಿನ ಸಂಭ್ರಮದ ಕ್ಷಣಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ಜೊತೆಗೆ ಫೋಟೋ ಶೂಟ್ ಮಾಡಿಸಿದ ಒಂದಷ್ಟು ಸುಂದರವಾದ ಆಕರ್ಷಕ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ.

ಈ ಫೋಟೋಗಳಿಗೆ ಲಕ್ಷಾಂತರ ಮೆಚ್ಚುಗೆ ಕೂಡ ಸಿಗುತ್ತವೆ. ಅದೇ ರೀತಿಯಾಗಿ ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿ ಜೀ಼ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟಿ ಮೇಘಾ ಶೆಟ್ಟಿ ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ತೊಡಿಗಿಕೊಂಡಿದ್ದಾರೆ. ನಟಿ ಮೇಘಾ ಶೆಟ್ಟಿ ಅವರು ಜೊತೆ ಜೊತೆಯಲಿ ಧಾರಾವಾಹಿಯ ಅನು ಸಿರಿ ಮನೆ ಪಾತ್ರದಲ್ಲಿ ನಾಡಿನ ಮನೆ ಮನೆಗಳಲ್ಲಿ ಅಪಾರ ಹೆಸರು ಗಳಿಸಿದ್ದಾರೆ. ಮೇಘಾ ಶೆಟ್ಟಿ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ ನಂತರ ಸಿನಿಮಾದಲ್ಲಿ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹೌದು ಮೇಘಾ ಶೆಟ್ಟಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಮತ್ತೊಂದು ಚಿತ್ರವನ್ನ ಕೂಡ ಒಪ್ಪಿಕೊಂಡಿದ್ದಾರೆ.

ಕಿರುತೆರೆಯ ಜೊತೆ ಜೊತೆಗೆ ಸಿನಿಮಾದಲ್ಲಿಯೂ ಕೂಡ ಬಾಲಿಷ ಆಗಿದ್ದಾರೆ ನಟಿ ಮೇಘಾ ಶೆಟ್ಟಿ. ಇದರ ನಡುವೆ ತಮ್ಮಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಸಖತ್ ಆಗಿರುವಂತೆ ಒಂದಷ್ಟು ತಮ್ಮ ಫೋಟೋಗಳನ್ನ ಅಪ್ ಲೋಡ್ ಮಾಡುತ್ತಿರುತ್ತಾರೆ. ಈ ಫೋಟೋಗಳಿಗೆ ಅವರ ಅಭಿಮಾನಿಗಳು ಫಿಧಾ ಆಗಿ ಮೆಚ್ಚುಗೆ ವ್ಯಕ್ತಪಡಿಸಿ ಭರ ಪೂರ ಕಮೆಂಟ್ ಕೂಡ ಮಾಡ್ತಿರ್ತಾರೆ. ನಟಿ ಮೇಘಾ ಶೆಟ್ಟಿ ಅವರು ಇತ್ತೀಚೆಗೆ ತಾನೇ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರನ್ನ ಪರಸ್ಪರ ಆಲಂಗಿಸಿಕೊಳ್ಳುತ್ತಿರುವ ಫೋಟೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಇದು ಈಗ ಇವರಿಬ್ಫರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ನಟಿ ಮೇಘಾ ಶೆಟ್ಟಿ ಅವರು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಬರೋಬ್ಬರಿ ಒಂದು ಮಿಲಿಯನ್ ಫಾಲೋವರ್ಸ್ ಪಡೆದು ಸಖತ್ ಶೈನ್ ಆಗುತ್ತಿದ್ದಾರೆ.

%d bloggers like this: