ಬರೊಬ್ಬರಿ 1200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಕನ್ನಡದ ಜನಪ್ರಿಯ ಧಾರಾವಾಹಿ

ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿಯಾಗಿರುವ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಜನಪ್ರಿಯ ಮುದ್ದು ಲಕ್ಷ್ಮಿ ಧಾರಾವಾಹಿ ಹೊಸದೊಂದು ದಾಖಲೆ ಮಾಡಿದೆ. ಹೌದು ಮುದ್ದು ಲಕ್ಷ್ಮಿ ಸೀರಿಯಲ್ ತಂಡ ಇತ್ತೀಚೆಗೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಸಾವಿರ ಸಂಚಿಕೆಗಳನ್ನ ಪೂರೈಸಿ ಸಂಭ್ರಮಾಚಾರಣೆ ಮಾಡಿತ್ತು. ಸಮಾಜದಲ್ಲಿ ಕಪ್ಪು ಬಣ್ಣ ಹೊಂದಿರುವ ಹೆಣ್ಣನ್ನು ಯಾವ ರೀತಿಯಾಗಿ ನೋಡುತ್ತಾರೆ. ಸಮಾಜ ಇರಲಿ ಅವಳ ಕುಟುಂಬವೇ ಅವಳ ಕಪ್ಪು ಬಣ್ಣದ ಬಗ್ಗೆ ತಾತ್ಸಾರ ಮೋನಭಾವನೆ ತಾಳಿದಾಗ ಅವಳ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ. ಹೆಣ್ಣು ತನ್ನ ಬಣ್ಣ ಕಪ್ಪು ಎಂಬ ಮಾತ್ರಕ್ಕೆ ತನ್ನನ್ನು ಕೀಳಾಗಿ ಕಾಣುವ ವ್ಯಕ್ತಿಗಳಿಗೆ ಯಾವ ಸರಿಯಾಗಿ ಬುದ್ದಿಕಲಿಸುತ್ತಾಳೆ.

ಜೀವನದಲ್ಲಿ ಆತಳು ಕೂಡ ಯರ ಅಂಗಿಲ್ಲದೆ ತನ್ನದೆಯಾದ ಆದರ್ಶ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಮುನ್ನೆಡೆಯುವ ಕೃಷ್ಣ ಸುಂದರಿಯ ಗಟ್ಟಿತನ ಮನಸ್ಸುಳ್ಳ ಹೆಣ್ಣು ಮಗಳ ಕಥೆ ಹೊಂದಿರುವ ಈ ಮುದ್ದು ಲಕ್ಷ್ಮಿ ಧಾರಾವಾಹಿಯು ಕನ್ನಡ ಕಿರುತೆರೆಯ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಮುದ್ದು ಲಕ್ಷ್ಮಿ ನಾಡಿನ ಮನೆ ಮಗಳಾಗಿದ್ದಾಳೆ. ಸದ್ಯಕ್ಕೆ ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ಕಥಾ ನಾಯಕಿ ತನ್ನ ಪತಿ ಜೊತೆ ಮರು ಮದುವೆಯಾಗಿ ಇಬ್ಬರು ಮುದ್ದು ಮಕ್ಕಳೊಂದಿಗೆ ಸುಂದರ ಸಂಸಾರ ನಡೆಸುತ್ತಿರುವ ಸಂಚಿಕೆ ಸನ್ನಿವೇಶ ಪ್ರಸಾರಗೊಳ್ಳುತ್ತಿದೆ. ಮುದ್ದು ಲಕ್ಷ್ಮಿ ಧಾರಾವಾಹಿಯು ತಳಿರು ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಹರೀಶ್ ಬಾಬು ಎಂಬುವವರು ನಿರ್ಮಾಣ ಮಾಡಿದ್ದಾರೆ.

2018 ರ ಜನವರಿ ತಿಂಗಳಿನಿಂದ ಪ್ರಸಾರವಾಗುತ್ತಿರುವ ಈ ಮುದ್ದು ಲಕ್ಷ್ಮಿ ಧಾರಾವಾಹಿಯು ಆರಂಭ ದಿನಗಳಲ್ಲಿ ಯಾವ ರೀತಿ ನಿರೀಕ್ಷೆ ಹುಟ್ಟು ಹಾಕಿತ್ತು, ಇ ನಿರೀಕ್ಷೆ ಕುತೂಹಲವನ್ನು ಅದೇ ರೀತಿ ಉಳಿಸಿಕೊಂಡು ಉತ್ತಮವಾಗಿ ಸಾಗುತ್ತಿದೆ ಮುದ್ದು ಲಕ್ಷ್ಮಿ ಧಾರಾವಾಹಿ. ಇನ್ನು ಮುದ್ದು ಲಕ್ಷ್ಮಿ ಸೀರಿಯಲ್ ಈಗ ಸುದ್ದಿ ಆಗುವುದಕ್ಕೆ ಕಾರಣ ಅಂದರೆ ಈ ಧಾರಾವಾಹಿಯು ಇದೀಗ ಯಶಸ್ವಿ 1200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಕೇಕ್ ಕಟ್ ಮಾಡಿ ಸಂಭ್ರಮಿಸಿದೆ. ಇನ್ನು ಮುದ್ದು ಲಕ್ಷ್ಮಿಯ ಪಾತ್ರದಲ್ಲಿ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅನಂತವೇಲು, ಅನು ಪೂವಮ್ಮ, ರಾಮಸ್ವಾಮಿ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

%d bloggers like this: