ಬಳ್ಳಾರಿಯ ದೊಡ್ಡ ಬಿಸಿನೆಸ್ ಮ್ಯಾನ್ ಹಾಗೂ ರಾಜಕಾರಣಿ ಆಗಿರುವ ಜನಾರ್ದನ ರೆಡ್ಡಿ ಅವರು ತಮ್ಮ ಮಗನನ್ನು ಸಿನಿಮಾರಂಗಕ್ಕೆ ಪರಿಚಯಿಸಲು ಸಿದ್ಧರಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಗಾಲಿ ಜನಾರ್ಧನ್ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ, ಒಂದೇ ಬಾರಿಗೆ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ ಗೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ವತಹ ಜನಾರ್ಧನ್ ರೆಡ್ಡಿ ಅವರು ಈ ಹಿಂದೆ ಅಧಿಕೃತವಾಗಿ ಮಾಹಿತಿ ನೀಡಿದ್ದರು. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಒಂದು ಲೆಕ್ಕದಲ್ಲಿ ಹೇಳಬೇಕೆಂದರೆ ನಾಲ್ಕೈದು ವರ್ಷಗಳ ಹಿಂದೆಯೇ ರೆಡ್ಡಿ ಅವರ ಸುಪುತ್ರ ಸಿನಿಮಾ ಲ್ಯಾಂಡ್ ನಲ್ಲಿ ಲ್ಯಾಂಡ್ ಆಗಬೇಕಿತ್ತು.

ಆದರೆ ಒಬ್ಬ ನಟನಿಗೆ ಬೇಕಾಗಿರುವ ಎಲ್ಲ ಪ್ರೆಪರೇಷನ್ ಗಳನ್ನು ಮಾಡಿಕೊಂಡು ಪಕ್ಕ ಪೂರ್ವಸಿದ್ಧತೆಯೊಂದಿಗೆ ಬರುತ್ತಿದ್ದಾರೆ ಕಿರೀಟಿ ಜನಾರ್ಧನ್ ರೆಡ್ಡಿ. ಇದೀಗ ವಾರಾಹಿ ರಾಧಾಕೃಷ್ಣ ಸಾರಥ್ಯದಲ್ಲಿ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರದ ಮೂಲಕ ಕಿರೀಟಿ ರೆಡ್ಡಿ ಅವರು ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಇನ್ನೇನು ಒಂದೆರಡು ದಿನಗಳಲ್ಲಿ ಈ ಚಿತ್ರದ ಹೆಸರು ಫಿಕ್ಸ್ ಆಗುತ್ತದೆ. ಈಗಾಗಲೇ ಈ ಸಿನಿಮಾದಲ್ಲಿ ನಾಯಕಿಯಾಗಿ ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ಕಿಸ್ ಚಿತ್ರದ ಖ್ಯಾತಿಯ ಶ್ರೀಲೀಲಾ ಅವರು ಆಯ್ಕೆಯಾಗಿದ್ದಾರೆ.



ಹಾಗೂ ಬಹುಭಾಷಾ ನಟಿ ಜೆನಿಲಿಯಾ ರಿತೇಶ್ ದೇಶಮುಖ್ ಅವರು ಕೂಡ ಈ ಚಿತ್ರದಲ್ಲಿ ಇರಲಿದ್ದಾರಂತೆ ಎನ್ನುವ ಮಾತಿ ಬಹಿರಂಗವಾಗಿದೆ. ಈ ಚಿತ್ರದಲ್ಲಿ ಜೇನಿಲಿಯಾ ಅವರು ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೌದು ಈ ಚಿತ್ರದಲ್ಲಿ ಕಿರೀಟಿ ರೆಡ್ಡಿ ಅವರ ಅಕ್ಕನ ಪಾತ್ರವನ್ನು ಜೆನಿಲಿಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಜನಾರ್ದನ್ ರೆಡ್ಡಿ ಅವರ ಸಿನಿಮಾ ಶುರುವಾಗುವುದಕ್ಕೆ ಮುನ್ನವೇ ಸಖತ್ ಸೌಂಡ್ ಮಾಡುತ್ತಿದೆ. ನಿನ್ನೆ ಈ ಚಿತ್ರದ ಮಹೂರ್ತ ನೆರವೇರಿದೆ. ಎಸ್ಎಸ್ ರಾಜಮೌಳಿ ಈ ಸಿನಿಮಾಕ್ಕೆ ಕ್ಲ್ಯಾಪ್ ಮಾಡುವುದರ ಮೂಲಕ ಶುಭ ಹಾರೈಸಿದ್ದಾರೆ. ಇನ್ನು ಈ ಚಿತ್ರದ ಮುಹೂರ್ತಕ್ಕೆ ಬಂದಿದ್ದ ಜೆನಿಲಿಯಾ ಅವರು ನಾನು ಮೂಲತಹ ಕರ್ನಾಟಕದವಳು.



ನಮ್ಮ ಅಜ್ಜ ಅಜ್ಜಿಯಂದಿರು ಇಲ್ಲಿಯವರೇ. ಹೀಗಾಗಿ ಕರ್ನಾಟಕದೊಂದಿಗೆ ನನಗೆ ವಿಶೇಷವಾದ ಬಂಧವಿದೆ. ಹತ್ತು ವರ್ಷಗಳ ಬಳಿಕ ಮತ್ತೆ ಇಲ್ಲಿ ಸಿನಿಮಾ ಮಾಡುತ್ತಿರುವುದು ನನಗೆ ಖುಷಿ ತರುತ್ತಿದೆ. ಈ ಸಿನೆಮಾ ನನಗೆ ತುಂಬಾನೇ ಸ್ಪೆಷಲ್. ಕಿರೀಟಿ ರೆಡ್ಡಿ ಅವರ ಜೊತೆಗೆ ಒಳ್ಳೆಯ ತಾರಾಗಣ ಹಾಗೂ ಉತ್ತಮ ನಿರ್ದೇಶಕರಿದ್ದಾರೆ. ಅವರೊಂದಿಗೆ ಕೆಲಸ ಮಾಡುತ್ತಿರುವುದು ನನಗೆ ಖುಷಿ ತಂದುಕೊಟ್ಟಿದೆ. ಸಿನಿಮಾದುದ್ದಕ್ಕೂ ನಾನು ಕಿರೀಟಿ ಅವರಿಗೆ ಸಹಾಯ ಮಾಡುತ್ತೇನೆ. ಅವನ ಜೊತೆ ನಾವೆಲ್ಲರೂ ಇರುತ್ತೇವೆ. ಆಲ್ ದ ಬೆಸ್ಟ್ ಎಂದು ಅವರಿಗೆ ಶುಭ ಹಾರೈಸಿದ್ದಾರೆ.