ಬರೋಬ್ಬರಿ 140 ಕೋಟಿ ಸಂಭಾವನೆ, ಇಡೀ ಭಾರತೀಯ ಚಿತ್ರರಂಗ ಹುಬ್ಬೇರುವಂತೆ ಮಾಡಿದ ದಕ್ಷಿಣದ ಸ್ಟಾರ್ ನಟ

ಸಾಮಾನ್ಯವಾಗಿ ಹಿಂದಿ ಚಿತ್ರಗಳು ಅಂದರೆ ಅದ್ದೂರಿತನದ ಸೆಟ್ ಗಳು ದೊಡ್ಡ ಸ್ಟಾರ್ ನಟರ ತಾರಾಗಣವಿರುತ್ತದೆ, ಇಲ್ಲಿ ಸಿನಿಮಾ ತಯಾರು ಮಾಡುವುದಕ್ಕಿಂತ ಹೆಚ್ಚು ಖರ್ಚು ಆಗುವುದು ಬಾಲಿವುಡ್ ನಟರ ಸಂಭಾವನೆಯೇ ದುಬಾರಿ ಆಗಿರುತ್ತದೆ. ಇದೀಗ ಈ ಬಾಲಿವುಡ್ ಸ್ಟಾರ್ ನಟರ ಸಂಭಾವನೆಯನ್ನೂ ಕೂಡ ಸೈಡ್ ಹೊಡೆದಿದ್ದಾರೆ ಡಾರ್ಲಿಂಗ್ ಪ್ರಭಾಸ್. ಹೌದು ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಬಿಡುಗಡೆ ಆಗಿದ್ದೇ ಆಗಿದ್ದು ಈ ಚಿತ್ರದ ನಾಯಕ ಪ್ರಭಾಸ್ ಅವರ ಲೆವೆಲ್ಲೇ ಚೇಂಜ್ ಆಗಿ ಹೋಯ್ತು. ಸಿನಿಮಾವೊಂದಕ್ಕೆ ಹತ್ತರಿಂದ ಇಪ್ಪತ್ತು ಕೋಟಿ ಸಂಭಾವನೆ ಪಡೆಯುತ್ತಿದ್ದ ಪ್ರಭಾಸ್ ಅವರಿಗೆ ನೂರು ಕೋಟಿಗೂ ಅಧಿಕ ಸಂಭಾವನೆ ಪಡೆಯುವ ಹಂತಕ್ಕೆ ತಂದು ನಿಲ್ಲಿಸಿತು ಬಾಹುಬಲಿ ಸಿನಿಮಾ.

ಪಂಚ ಭಾಷೆಗಳಲ್ಲಿ ಬಿಡುಗಡೆಯಾದ ಬಾಹುಬಲಿ ಸಿನಿಮಾ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಇಡೀ ವಿಶ್ವದ ಚಿತ್ರರಂಗವೇ ದಕ್ಷಿಣ ಭಾರತದತ್ತ ತಿರುಗಿ ನೋಡುವಂತೆ ಮಾಡಿತು. ಈ ಚಿತ್ರದ ಯಶಸ್ಸು ನಟ ಪ್ರಭಾಸ್ ಅವರನ್ನು ಇಡೀ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಪಡೆಯಲು ಕಾರಣವಾಯಿತು. ಬಾಹುಬಲಿ ಭಾಗ1 ಮತ್ತು ಭಾಗ2 ಸರಣಿ ಮುಗಿದ ಬಳಿಕ ಸಾಹೋ ಸಿನಿಮಾ ಸೋತರು ಕೂಡ ನಟ ಪ್ರಭಾಸ್ ಅವರಿಗೆ ಬೇಡಿಕೆ ಮಾತ್ರ ಕುಸಿಯಲಿಲ್ಲ. ಅವರು ಸದ್ಯಕ್ಕೆ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೂ ಕೂಡ ನಟ ಪ್ರಭಾಸ್ ಭಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಜೊತೆಗೆ ಹಿಂದಿಯ ಖ್ಯಾತ ನಿರ್ದೇಶಕ ಓಂ ರಾವುತ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪೌರಾಣಿಕ ಸಿನಿಮಾ ಆದಿಪುರುಷ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ರಾಮನ ಪಾತ್ರಕ್ಕಾಗಿ ನಟ ಪ್ರಭಾಸ್ ಅವರು ಬರೋಬ್ಬರಿ 150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಭಾರಿ ವೈರಲ್ ಆಗಿದೆ. ಅದರಲ್ಲಿಯೂ ಬಾಲಿವುಡ್ ಮಂದಿ ಬಾಯ್ಮೆಲೆ ಬೆರಳಿಟ್ಟುಕೊಂಡಿದ್ದಾರಂತೆ. ಸಖತ್ ಬಿಝಿ಼ ಆಗಿರುವ ನಟ ಪ್ರಭಾಸ್ ಅವರು ಆದಿ ಪುರುಷ್ ಸಿನಿ‌ಮಾಗಾಗಿ ಅರವತ್ತು ದಿನಗಳ ಕಾಲ್ ಶೀಟ್ ನೀಡಿದ್ದಾರಂತೆ. ಈ ಅರವತ್ತು ದಿನಗಳ ಒಳಗೆ ಆದಿಪುರುಷ್ ಚಿತ್ರತಂಡ ಪ್ರಭಾಸ್ ಅವರ ಭಾಗದ ಎಲ್ಲಾ ಕೆಲಸಗಳನ್ನ ಮುಗಿಸಿಕೊಳ್ಳಬೇಕಾಗಿದೆಯಂತೆ.

ಆದಿ ಪುರುಷ್ ಸಿನಿಮಾದ ಬಜೆಟ್ ಐನೂರು ಕೋಟಿ ಆಗಿರುವುದರಿಂದ ಪ್ರಭಾಸ್ ಅವರೇ 150 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ವಿಷಯ ಮಾತ್ರ ಹಿಂದಿ ಚಿತ್ರರಂಗದವರಿಗೆ ನಿದ್ದೆ ಗೆಡಿಸಿದೆ. ಇನ್ನೊಂದೆಡೆ ನಟ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮುಖ್ಯ ಭೂಮಿಕೆಯ ರಾಧೆಶ್ಯಾಮ್ ಸಿನಿಮಾ ಮುಂದಿನ ವರ್ಷ ಜನವರಿ 14 ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರ ಕೂಡ ಬರೋಬ್ಬರಿ 350 ಕೋಟಿ ಬಜೆಟ್ ಹೊಂದಿದೆ. ಇದೀಗ ಪ್ರಭಾಸ್ ಅವರು ಸ್ಪಿರಿಟ್ ಎಂಬ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 140 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. ಒಟ್ಟಾರೆಯಾಗಿ ಬಾಹುಬಲಿ ಒಂದು ಸಿನಿಮಾ ನಟ ಪ್ರಭಾಸ್ ಸಂಭಾವನೆಯ ನಕ್ಷೆಯನ್ನ ಗಗನಕ್ಕೇರಿಸಿಬಿಟ್ಟಿದೆ.

%d bloggers like this: