ಬರೋಬ್ಬರಿ 175 ಕೋಟಿ ಆಫ಼ರ್ ಬಂದರೂ ತಿರಸ್ಕರಿಸಿದ ಸ್ಟಾರ್ ನಟನ ಚಿತ್ರತಂಡ

ನಿರ್ಮಾಪಕರ ಪಾಲಿನ ಲಕ್ಕಿ ಮ್ಯಾನ್ ಬಾಲಿವುಡ್ ನ ನಟ ಅಕ್ಷಯ್ ಕುಮಾರ್. ಇವರ ಸಿನಿಮಾಗಳು ಫೇಲ್ ಆಗಿದ್ದು ಕಡಿಮೆ. ಅಕ್ಷಯ್ ಕುಮಾರ್ ಅವರ ಚಿತ್ರಗಳು ಯಾವತ್ತೂ ಗಳಿಕೆಯಲ್ಲಿ ಸೋತಿಲ್ಲ. ಅಕ್ಷಯ್ ಕುಮಾರ್ ಬಹುತೇಕ ಎಲ್ಲ ನಿರ್ದೇಶಕರ ನೆಚ್ಚಿನ ನಟ ಎಂದರೆ ತಪ್ಪಾಗಲಿಕ್ಕಿಲ್ಲ. ವರ್ಷಕ್ಕೆ ಮೂರು ನಾಲ್ಕು ಸಿನಿಮಾ ಮಾಡಬೇಕು ಎಂಬುದು ಅಕ್ಷಯ್ ಅವರ ಟಾರ್ಗೆಟ್. ತುಂಬಾ ವೇಗವಾಗಿ ಕೆಲಸಗಳನ್ನು ಮುಗಿಸುವುದು ಅವರ ಸ್ಟೈಲ್. ಸರಿಯಾದ ಸಮಯಕ್ಕೆ ಶೂಟಿಂಗ್ ಶುರುವಾಗಬೇಕು, ಸರಿಯಾದ ಸಮಯಕ್ಕೆ ಮುಗಿಯಬೇಕು ಈ ರೀತಿಯ ಹಲವು ರೂಲ್ಸ್ ಗಳನ್ನು ಅಕ್ಷಯ್ ಹಾಕಿಕೊಂಡಿದ್ದಾರೆ.

ಇದೇ ಕಾರಣದಿಂದ ಅವರು ನಿರ್ಮಾಪಕರಿಗೆ ಅಚ್ಚು ಮೆಚ್ಚು. ಆದರೆ ಕೋರೋನ ಕಾರಣದಿಂದ ಸದ್ಯಕ್ಕೆ ಅವರ ಟಾರ್ಗೆಟ್ ರೀಚ್ ಆಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಕೊರೋನ ಕಾರಣದಿಂದ ಹೆಚ್ಚು ಸಿನಿಮಾಗಳು ಥಿಯೇಟರ್ ಗಳಲ್ಲಿ ರಿಲೀಸ್ ಆಗದೆ ಒಟಿಟಿ ಯಲ್ಲಿ ರಿಲೀಸ್ ಆಗುತ್ತಿವೆ. ಸದ್ಯಕ್ಕೆ ಅಕ್ಷಯ್ ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗಲು ರೆಡಿ ಆಗಿವೆ. ಕೋರೋನ ಕಾರಣದಿಂದ ಇತ್ತೀಚಿಗೆ ಇವರ ಆತರಂಗಿ ಕಿ ಸಿನಿಮಾ ಒಟಿಟಿ ಮೂಲಕ ಬಿಡುಗಡೆ ಆಯಿತು. ಈಗ ಬಚ್ಚನ್ ಪಾಂಡೆ ರಿಲೀಸ್ ಆಗಲು ರೆಡಿ ಆಗಿದೆ. ಆದರೆ ಸಿನಿಮಾದ ನಿರ್ಮಾಪಕರು ಈ ಚಿತ್ರವನ್ನು ಥಿಯೇಟರ್ಳಲ್ಲಿ ಮಾಡಲು ಸಜ್ಜಾಗಿದ್ದಾರೆ.

ಪ್ರೇಕ್ಷಕರು ಚಿತ್ರ ಮಂದಿರಗಳಲ್ಲಿಯೇ ಸಿನಿಮಾ ನೋಡಬೇಕು ಎಂಬುದು ಅವರ ಆಶಯ. ದೇಶಾದ್ಯಂತ ಕರೋನವೈರಸ್ ಹೆಚ್ಚಾಗುತ್ತಿರುವ ಕಾರಣ ರಾಜ್ಯದ ಚಿತ್ರಮಂದಿರಗಳಲ್ಲಿ 50% ಆಸನದ ಮಿತಿ ಹೇರಲಾಗಿದೆ. ಹೀಗಾಗಿ ಸಿನಿಮಾವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವುದು ಸ್ವಲ್ಪ ಕಷ್ಟವಾಗಿದೆ. ಬಚ್ಚನ್ ಪಾಂಡೆ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರಿಗೆ ಡಿಫ್ರೆಂಟ್ ಗೆಟಪ್ ನೀಡಲಾಗಿದೆ. ಅವರ ಜೊತೆ ನಟಿ ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡಿಸ್ ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ಫರ್ಹದ ಸಂಜಿ ನಿರ್ದೇಶನ ಮಾಡಿದ್ದು, ಸಾಜಿದ್ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ.

ಈ ಚಿತ್ರವನ್ನು ರಿಲೀಸ್ ಗೂ ಮುನ್ನ ಒಟಿಟಿ ಸಂಸ್ಥೆಯೊಂದು ಖರೀದಿಸಲು ಸಜ್ಜಾಗಿದೆ. ಹೌದು ಬರೋಬ್ಬರಿ 175 ಕೋಟಿ ರೂಪಾಯಿ ಆಫರ್ ಈ ಚಿತ್ರಕ್ಕಾಗಿ ಬಂದಿದೆ. ಆದರೆ ಇದನ್ನು ಬಚ್ಚನ್ ಪಾಂಡೆ ಚಿತ್ರತಂಡ ತಿರಸ್ಕರಿಸಿದೆ ಎಂದು ಹೇಳಲಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ ಮಾರ್ಚ್ 18 ರಂದು ಬಚ್ಚನ್ ಪಾಂಡೆ ಚಿತ್ರ ಥಿಯೇಟರ್ ಗಳಿಗೆ ಲಗ್ಗೆ ಇಡಲಿದೆ. ಅಷ್ಟು ದೊಡ್ಡ ಮೊತ್ತದ ಆಫ಼ರ್ ಬಂದರೂ ಸಹ ಅದನ್ನು ತಿರಸ್ಕಾರ ಮಾಡಿ ಚಿತ್ರತಂಡ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

%d bloggers like this: