ಬರೋಬ್ಬರಿ 2 ವರ್ಷದ ನಂತರ ಭರ್ಜರಿ ಎಂಟ್ರಿ ಕೊಡ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ ಅವರು

ಹೊಸ ವರ್ಷದ ಸಂಭ್ರಮದಿಂದ ಆರಂಭವಾದ ಕನ್ನಡ ಚಿತ್ರರಂಗ ಸಾಲು ಸಾಲು ಚಿತ್ರಗಳ ಟೀಸರ್, ಟ್ರೇಲರ್, ಸಿನಿಮಾಗಳು ರಿಲೀಸ್ ಆಗುತ್ತಿವೆ ಇನ್ನೂ ಒಂದಷ್ಟು ಸಿನಿಮಾಗಳು ಚಿತ್ರಮಂದಿರಕ್ಕೆ ಶೇಕಡ ನೂರರಷ್ಟು ಅವಕಾಶ ನೀಡುವುದಕ್ಕೆ ಕಾಯುತ್ತಿವೆ. ಇದೀಗ ಚಂದನವನದ ಯುವರಾಜ ನಿಖಿಲ್ ಕುಮಾರಸ್ವಾಮಿಯವರ ಹೊಸ ಚಿತ್ರ ರೈಡರ್ ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆಗೊಂಡಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಆದರೆ ಚಿತ್ರದ ಬಗ್ಗೆ ಎಲ್ಲೂ ಸಹ ಹೆಚ್ಚಿನ ಮಾಹಿತಿ ತಿಳಿಸಿರಲಿಲ್ಲ ನಿರ್ದೇಶಕ ವಿಜಯ್. ಅಂದಹಾಗೆ ನಿಖಿಲ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರೀಯರಾಗಿರುತ್ತಾರೆ.

ಜೊತೆಗೆ ಒಂದಷ್ಟು ವೈಯಕ್ತಿಕ ಜೀವನದ ಫೋಟೋಗಳನ್ನು ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ, ಇನ್ನು ಹೊಸವರ್ಷದಲ್ಲಿ ನಿಖಿಲ್ ಅವರು ತಮ್ಮ ಧರ್ಮಪತ್ನಿ ರೇವತಿಯ ಜೊತೆಗೆ ಒಂದಷ್ಟು ಲೇಟೆಸ್ಟ್ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದರು. ಈಗ ತಮ್ಮ ವೈವಾಹಿಕ ಜೀವನದ ಮೊದಲ ಸಂಕ್ರಾಂತಿ ಹಬ್ಬದ ಸಡಗರವನ್ನು ಸಂತೋಷದಿಂದ ಆಚರಿಸುತ್ತಿರುವ ಫೋಟೋ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ವಿಶೇಷವಾಗಿ ಈ ಜನವರಿ 22ರಂದು ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟು ಹಬ್ಬವಿರುವುದರಿಂದ ರೈಡರ್ ಚಿತ್ರ ತಂಡ ಅಂದು ರೈಡರ್ ಚಿತ್ರದ ಟೀಸಲ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಇನ್ನು ನಿರ್ದೇಶಕ ವಿಜಯ್ ಅವರು ನಿಖಿಲ್ ಹುಟ್ಟುಹಬ್ಬದ ಉಡುಗೊರೆಯಾಗಿ ಅಭಿಮಾನಿಗಳಿಗಾಗಿ ರೈಡರ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನು ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಿಖಿಲ್ ಅವರ ಕೈಯಲ್ಲಿ ಇನ್ನೂ ನಾಲ್ಕೈದು ಚಿತ್ರಗಳಿವೆ, ಅದರಲ್ಲಿ ಮುನಿರತ್ನ ಅವರ ಸಂಸ್ಥೆಯಿಂದ ಕೂಡ ನಿರ್ಮಾಣವಾಗುವ ಚಿತ್ರವೊಂದಿದೆ.

%d bloggers like this: