ಬರೊಬ್ಬರಿ 30 ಕೋಟಿ ದೃಶ್ಯಕ್ಕೆ ಕತ್ತರಿ, ನಷ್ಟ ಅನುಭವಿಸಿದ ಪುಷ್ಪಾ ಚಿತ್ರ

ಸಿನಿ ಪಂಡಿತರ ಲೆಕ್ಕಾಚಾರವನ್ನೆಲ್ಲಾ ಉಲ್ಟಾ ಮಾಡಿದೆ ಪುಷ್ಪ ಸಿನಿಮಾ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರು ಕೂಡ ಗಳಿಕೆಯಲ್ಲಿ ಎಲ್ಲರ ನಿರೀಕ್ಷೆ ಮೀರಿ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ. ಹೌದು ಟಾಲಿವುಡ್ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಪುಷ್ಪ ಸಿನಿಮಾ ಡಿಸೆಂಬರ್ 17 ರಂದು ದೇಶಾದ್ಯಂತ ಬಿಡುಗಡೆಯಾಗಿದೆ. ಪುಷ್ಪ ಚಿತ್ರ ಬಿಡುಗಡೆಗೆ ಮುನ್ನ ತನ್ನ ಟೀಸರ್, ಟ್ರೇಲರ್ ಮತ್ತು ಲಿರಿಕಲ್ ಸಾಂಗ್ಸ್ ಗಳಿಂದ ಸಾಕಷ್ಟು ಕ್ರೇಜ಼್ ಹುಟ್ಟು ಹಾಕಿತ್ತು. ಇದರಿಂದಲೇ ಪುಷ್ಪ ಚಿತ್ರ ನೋಡಲು ಅಲ್ಲು ಅರ್ಜುನ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು.

ಮಲ್ಟಿ ಪ್ಲೆಕ್ಸ್ ಗಳಲ್ಲಿ ರಿಲೀಸ್ ಗೆ ಒಂದು ದಿನ ಇರುವಾಗಲೇ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿ ಭರ್ಜರಿ ಕಲೆಕ್ಷನ್ ಮಾಡುವ ಮುನ್ಸೂಚನೆ ನೀಡಿತ್ತು. ಅದರಂತೆ ಪುಷ್ಪ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನಲ್ಲಿ ಚಿತ್ರಮಂದಿರಗಳು ತುಂಬಿ ತುಳುಕುತ್ತಿದ್ದವು. ರಾಜಧಾನಿ ಬೆಂಗಳೂರು ಸೇರಿದಂತೆ ತಮಿಳು ನಾಡು, ಆಂಧ್ರ, ತೆಲಂಗಾಣ ಸೇರಿದಂತೆ ಎಲ್ಲಾ ನಗರದ ಸಿಂಗಲ್ ಸ್ಕ್ರೀನ್ ಗಳಲ್ಲಿ ಪುಷ್ಪ ಚಿತ್ರ ನೋಡಲು ಬಹುತೇಕ ಮಂದಿ ನೆಲದ ಮೇಲೆ ಕೂತು ನೋಡಿದ್ದರು. ಅಷ್ಟರ ಮಟ್ಟಿಗೆ ಪುಷ್ಪ ಸಿನಿಮಾ ಕ್ರೇಜ಼್ ಹುಟ್ಟಿಸಿತ್ತು. ಆದರೆ ಪುಷ್ಪ ಸಿನಿಮಾ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಆದ ಕಾರಣ ಸಿನಿ ಪಂಡಿತರು 180 ಕೋಟಿ ವೆಚ್ಚದ ಪುಷ್ಪ ಸಿನಿಮಾ ಗಳಿಕೆಯಲ್ಲಿ ಸೋಲಬಹುದು ಎಂದು ಊಹೆ ಮಾಡಿದ್ದರು. ಆದರೆ ಪುಷ್ಪ ಸಿನಿಮಾ ನೆಗೆಟಿವ್ ರೆಸ್ಪಾನ್ಸ್ ನಡುವೆಯೂ ಕೂಡ ಬಿಡುಗಡೆಯಾದ ಮೂರೇ ದಿನದಲ್ಲಿ 175 ಕೋಟಿಗೂ ಅಧಿಕ ಹಣ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಇದರ ಬೆನ್ನೆಲ್ಲೆ ನಿರ್ದೇಶಕ ಸುಕುಮಾರ್ ಅವರ ಮೇಲೆ ಅಪವಾದವೊಂದು ಕೂಡ ಕೇಳಿ ಬರುತ್ತಿದೆ. ಅದೇನೆಂದರೆ ನಿರ್ದೇಶಕ ಸುಕುಮಾರ್ ಅವರು ಅನಗತ್ಯವಾಗಿ ಬರೋಬ್ಬರಿ ಮೂವತ್ತು ಕೋಟಿ ಅಷ್ಟು ಖರ್ಚು ಮಾಡಿಸಿದ್ದಾರೆ ಎಂಬುದು.

ಅವಶ್ಯಕತೆ ಇಲ್ಲದ ಕಡೆ ಹೀರೋ ಅರ್ಜುನ್ ಅವರನ್ನ ವೈಭವೀಕರಿಸಲು ಅದ್ದೂರಿತನದ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದಾರೆ. ಇಂತಹ ಅನೇಕ ಅದ್ದೂರಿತನದ ಹೆಚ್ಚುವರಿ ದೃಶ್ಯಗಳಿಗೆ ಕತ್ತರಿ ಪ್ರಯೋಗ ಅಗಿದೆ. ಹೀಗೆ ಅನಗತ್ಯವಾಗಿ ಅನೇಕ ಕತ್ತರಿ ಪ್ರಯೋಗ ಆಗಿರುವ ದೃಶ್ಯಗಳನ್ನು ಸೆರೆ ಹಿಡಿಯಲು ಬರೋಬ್ಬರಿ ಮೂವತ್ತು ಕೋಟಿ ಖರ್ಚು ಮಾಡಿ ಇದೀಗ ಅಷ್ಟು ಕೂಡ ವ್ಯರ್ಥ ಆಗಿದೆ ಎಂದು ನಿರ್ದೇಶಕ ಸುಕುಮಾರ್ ವಿರುದ್ದ ಆರೋಪ ಕೇಳಿ ಬಂದಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಪುಷ್ಪ ಸಿನಿಮಾವನ್ನು 180 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿತ್ತು.

%d bloggers like this: