ಬರೋಬ್ಬರಿ 39 ಕೋಟಿಯ ಮನೆ ಖರೀದಿ ಮಾಡಿದ ಸುಪ್ರಸಿದ್ದ ನಟಿ

ಭಾರತೀಯ ಚಲನಚಿತ್ರರಂಗದ 90ರ ದಶಕದ ಜನಪ್ರಿಯ ನಟಿಯಾಗಿದ್ದ ಬಾಲಿವುಡ್ ಬ್ಯುಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬರೋಬ್ಬರಿ 39ಕೋಟಿ ಮೌಲ್ಯವುಳ್ಳ ಬಂಗಲೆಯನ್ನು ಖರೀದಿ ಮಾಡಿದ್ದಾರೆ! ಜಾಹ್ನವಿ ಕಪೂರ್ ನಟಿಸಿದ್ದು ಒಂದೇ ಸಿನಿಮಾ ಆದರೂ ಇಷ್ಟೊಂದು ದುಬಾರಿ ಮೌಲ್ಯವುಳ್ಳ ಬಂಗಲೆ ಖರೀದಿ ಹೇಗೆ ಸಾಧ್ಯ ಎಂದು ಬಾಲಿವುಡ್ ದಿಗ್ಗಜ ನಟರು ಬಾಯಿ ಮೇಲೆ ಬೆರಳಿಟ್ಟು ಕೊಂಡಿದ್ದಾರೆ, ಜಾಹ್ನವಿ ಕಪೂರ್ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಮುದ್ದಿನ ಮಗಳಾಗಿದ್ದು 2018ರಲ್ಲಿ ಧಡಕ್ ಎಂಬ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು.

ಧಡಕ್ ಈ ರೊಮ್ಯಾಂಟಿಕ್ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದರು ಸಹ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿತ್ತು, ಜಾಹ್ನವಿ ಕಪೂರ್ ಇದೀಗ ಖರೀದಿ ಮಾಡಿರುವ ಬಂಗಲೆ ಇರುವುದು ಮುಂಬೈ ನಗರದ ಪ್ರತಿಷ್ಟಿತ ಜುಹು ವಿಲೆ ಪಾರ್ಲೆ ಎಂಬ ಪ್ರದೇಶದಲ್ಲಿ ಈ ಪ್ರದೇಶದಲ್ಲಿ ಬಾಲಿವುಡ್ ದಿಗ್ಗಜರ ಮನೆಗಳು ಇದೆ.
ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಹೃತಿಕ್ ರೋಷನ್, ಅನಿಲ್ ಕಪೂರ್ ಹೀಗೆ ಬಾಲಿವುಡ್ ಪ್ರಖ್ಯಾತ ನಟರು ಈ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಅಂದಹಾಗೆ ಜಾಹ್ನವಿ ಕಪೂರ್ ಇಷ್ಟು ದಿನಗಳ ಕಾಲ ಮುಂಬೈ ನಗರದಲೋಖಂಡ್ವಾಲಾ ದಲ್ಲಿ ತಂದೆ ಬೋನಿಕಪೂರ್ ಸೋದರಿ ಋಷಿ ಕಪೂರ್ ಅವರೊಂದಿಗೆ ಜತೆಯಾಗಿದ್ದರು.

ಇದೀಗ ಜಾಹ್ನವಿ ಕಪೂರ್ ತನ್ನ ನೆಚ್ಚಿನ ನಟರು ಇರುವ ಜುಹು ವಿಲೆ ಪಾರ್ಲೆ ಪ್ರದೇಶದಲ್ಲಿ ವಾಸ ಮಾಡಲು ಬಯಸಿ ಈ ಬಂಗಲೆಯನ್ನು 39 ಕೋಟಿಗೆ ಖರೀದಿಸಿದ್ದಾರೆ. ಈ ಬಂಗಲೆಯು ಮೂರು ಮಹಡಿಗಳಷ್ಟು ವ್ಯಾಪ್ತಿ ಹೊಂದಿದೆ. ಇದೇ ಡಿಸೆಂಬರ್ ಏಳರಂದು ನೋಂದಣೆ ಪ್ರಕ್ರಿಯೆ ಮುಗಿಸಲಿದ್ದಾರೆ ಎಂದು ಸ್ಕ್ವೇರ್ ಫೀಟ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

%d bloggers like this: